Top News

ಜೈ ಫೌಂಡೇಶನ್ ಮೂಲಕ ಅಶಕ್ತ ಕುಟುಂಬಕ್ಕೆ ಪಡಿತರ ಕಿಟ್ ವಿತರಣೆ


 

ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಕುಟುಂಬಕ್ಕೆ ನೀಡಿದ ಭರವಸೆ ಈಡೇರಿಕೆ


ಚಿಕ್ಕಬಳ್ಳಾಪುರ, ಮಾರ್ಚ್ 21: ಸಮಾಜಸೇವಾ ಸಂಸ್ಥೆಯಾದ ಜೈ ಫೌಂಡೇಶನ್ ತನ್ನ ಭರವಸೆಯಂತೆ ಅಶಕ್ತ ಕುಟುಂಬವೊಂದಕ್ಕೆ ಪಡಿತರ ಕಿಟ್ ವಿತರಿಸಿತು. ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಈ ಹಿಂದೆ ನೀಡಿದ್ದ ಮಾತಿನಂತೆ ಈ ಕಾರ್ಯವನ್ನು ನೆರವೇರಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.


ಜೈ ಫೌಂಡೇಶನ್ ವತಿಯಿಂದ ಆಯೋಜಿಸಲಾದ ಈ ಸೇವಾ ಕಾರ್ಯದಲ್ಲಿ, ಸಂಕಷ್ಟದ ಸಮಯದಲ್ಲಿ ನೊಂದವರಿಗೆ ಹೆಗಲಾಗಿ ನಿಂತು ಅವರ ಹಸಿವು ನೀಗಿಸುವುದೇ ಪರಮ ಧರ್ಮ ಎಂಬ ಉದ್ದೇಶದಿಂದ ಪಡಿತರ ಕಿಟ್ ವಿತರಣೆ ಮಾಡಲಾಯಿತು.


ಬಡವರ ಕಣ್ಣೀರು ಒರೆಸುವ ಈ ಸೇವೆಯೇ ನಿಜವಾದ ತೃಪ್ತಿ ತರುತ್ತದೆ ಎಂದು ಸಂಸ್ಥೆಯ ಪದಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಜೈ ಫೌಂಡೇಶನ್ ಮುಂದುವರಿದು ಇಂತಹ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿದೆ ಎಂದು ತಿಳಿಸಲಾಗಿದೆ.

Post a Comment

Previous Post Next Post