▪️ ಕೆ.ಆರ್ ಸರ್ಕಲ್ – ಸಯ್ಯಾಜಿ ರಾವ್ ರಸ್ತೆಯವರೆಗೆ
▪️ ಗಾಂಧಿ ವೃತ್ತ – ಸುತ್ತಮುತ್ತಲಿನ ಪ್ರದೇಶಗಳು
▪️ ದೊಡ್ಡ ಗಡಿಯಾರದ ಎದುರು
▪️ ಟೌನ್ ಹಾಲ್ – ಪಕ್ಕದಲ್ಲಿರುವ ಪ್ರದೇಶಗಳು
ಮೈಸೂರು: ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀಮತಿ ಎಂ.ಕೆ. ಸವಿತಾ ಅವರನ್ನು ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಭೇಟಿ ಮಾಡಿ, ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕೆಲವು ಪ್ರಮುಖ ಪ್ರದೇಶಗಳಲ್ಲಿ ಪುಟ್ ಪಾತ್‌ಗಳ ಮೇಲಿನ ಅತಿಕ್ರಮಣವನ್ನು ತೆರವುಗೊಳಿಸಿ ಸೂಕ್ತ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಮನವಿ ಪತ್ರವನ್ನು ಸಲ್ಲಿಸಿದರು.
ಪುಟ್ ಪಾತ್‌ಗಳ ಮೇಲಿನ ಅತಿಕ್ರಮಣಗಳು ಸಾರ್ವಜನಿಕರ ಸಂಚಾರಕ್ಕೆ ತೊಂದರೆಯನ್ನುಂಟುಮಾಡುತ್ತಿವೆ, ವಿಶೇಷವಾಗಿ ಪಾದಚಾರಿಗಳ ಸುರಕ್ಷತೆಗೆ ಅಪಾಯವನ್ನುಂಟುಮಾಡುತ್ತಿವೆ. ಹೀಗಾಗಿ ಅತಿಕ್ರಮಣಗಳನ್ನು ತೆರವುಗೊಳಿಸಿ, ಪರ್ಯಾಯ ವ್ಯವಸ್ಥೆಗಳನ್ನು ಕಲ್ಪಿಸುವಂತೆ ಮನವಿ ಮಾಡಲಾಗಿದೆ.
"ಮೈಸೂರು ನಗರದ ಪಾದಚಾರಿ ಸುರಕ್ಷತೆ ಮತ್ತು ಸಾರ್ವಜನಿಕ ಸೌಕರ್ಯಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಪುಟ್ ಪಾತ್ ಅತಿಕ್ರಮಣಗಳನ್ನು ತೆರವುಗೊಳಿಸುವುದು ಅತ್ಯಗತ್ಯವಾಗಿದೆ. ಕೆ.ಆರ್ ಸರ್ಕಲ್, ಸಯ್ಯಾಜಿ ರಾವ್ ರಸ್ತೆ, ಗಾಂಧಿ ವೃತ್ತ, ದೊಡ್ಡ ಗಡಿಯಾರದ ಎದುರು ಹಾಗೂ ಟೌನ್ ಹಾಲ್ ಪಕ್ಕದ ಪ್ರದೇಶಗಳಲ್ಲಿ ಅತಿಕ್ರಮಣವನ್ನು ತೆರವುಗೊಳಿಸಿ, ಸೂಕ್ತ ಪರ್ಯಾಯ ವ್ಯವಸ್ಥೆಗಳನ್ನು ಕಲ್ಪಿಸಿಕೊಡುವಂತೆ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ."
🚶 "ಪಾದಚಾರಿಗಳ ಸುರಕ್ಷತೆ – ನಗರದ ಆರೋಗ್ಯದ ಪ್ರತೀಕ"
ಈ ಸಂದರ್ಭದಲ್ಲಿ ಮಾಜಿ ನಗರ ಪಾಲಿಕೆ ಸದಸ್ಯರಾದ ಶ್ರೀ ಗಿರೀಶ್ ಪ್ರಸಾದ್, ಶ್ರೀ ಶೈಲೇಂದ್ರ, ಶ್ರೀ ಶ್ರೀರಾಮಣ್ಣ, ಚಾಮರಾಜ ವಿಧಾನ ಕ್ಷೇತ್ರದ ಬಿಜೆಪಿ ಅಧ್ಯಕ್ಷರಾದ ಶ್ರೀ ದಿನೇಶ್ ಗೌಡ, ಶ್ರೀ ಎಂ.ಎನ್. ಪ್ರಕಾಶ್, ಶ್ರೀ ಶೀನಿವಾಸ್ ಹಾಗೂ ಇತರೆ ಮುಖಂಡರು ಉಪಸ್ಥಿತರಿದ್ದರು.
ಅತಿಕ್ರಮಣ ತೆರವಿಗೆ ಸಂಬಂಧಿಸಿದಂತೆ ಪಾಲಿಕೆ ಆಯುಕ್ತರು ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಿದ್ದಾರೆ. ಮೈಸೂರು ನಗರದ ಸಾರ್ವಜನಿಕ ಸೌಕರ್ಯಗಳನ್ನು ಸುಧಾರಿಸುವತ್ತ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಪಾಲಿಕೆ ಅಧಿಕಾರಿಗಳು ಸಹಕಾರದಿಂದ ಕಾರ್ಯನಿರ್ವಹಿಸುತ್ತಿರುವುದು ಸ್ವಾಗತಾರ್ಹ. 💐💐💐
"ಪಾದಚಾರಿಗಳ ಸುರಕ್ಷತೆ – ನಗರದ ಆರೋಗ್ಯದ ಪ್ರತೀಕ"
ಪ್ರತಾಪ್ ಸಿಂಹ
ಮಾಜಿ ಸಂಸದರು, ಮೈಸೂರು
*ಮೈಸೂರು ನಗರದ ಪಾದಚಾರಿ ಸುರಕ್ಷತೆ ಮತ್ತು ಸಾರ್ವಜನಿಕ ಸೌಕರ್ಯಗಳ ಅಭಿವೃದ್ಧಿಗೆ ಜನಪ್ರತಿನಿಧಿಗಳ ಸಮಾಜಮುಖಿ ಪ್ರಯತ್ನ.*

Post a Comment