ಚಿಕ್ಕಬಳ್ಳಾಪುರ: 5 ಪ್ರಕರಣಗಳಲ್ಲಿ ಅಂತರ್ ರಾಜ್ಯ ಕೇಬಲ್ ಕಳವು ಆರೋಪಿಗಳ ಬಂಧನ – ₹2 ಲಕ್ಷ ಮೌಲ್ಯದ 250 ಕೆಜಿ ಕಾಪರ್ ಕೇಬಲ್, ₹8 ಲಕ್ಷ ಮೌಲ್ಯದ ಕಾರು ವಶ
ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ 05 ಪ್ರತ್ಯೇಕ ಕೇಬಲ್ ಕಳವು ಪ್ರಕರಣಗಳನ್ನು ಭೇದಿಸಿರುವ ಪೊಲೀಸರು, 05 ಜನ ಕುಖ್ಯಾತ ಅಂತರ್ ರಾಜ್ಯ ಕೇಬಲ್ ಕಳವು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಸುಮಾರು ₹2,00,000 ಮೌಲ್ಯದ 250 ಕೆಜಿ ತೂಕದ ಕಾಪರ್ ಕೇಬಲ್ ಹಾಗೂ ಕೃತ್ಯಕ್ಕೆ ಬಳಕೆ ಮಾಡಿದ್ದ ₹8,00,000 ಮೌಲ್ಯದ ಒಂದು ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣದ ಆರಂಭ – ದಿನಾಂಕ 10-06-2026
ದಿನಾಂಕ 10-06-2026ರಂದು ಸಂಜೆ 05:00 ಗಂಟೆ ಸಮಯದಲ್ಲಿ ಫಿರ್ಯಾದುದಾರರಾದ ಶ್ರೀ ಶಶಿಕಾಂತ್ ಬಿನ್ ಶಿವರಾಮಕೃಷ್ಣ (40), ಆರ್ಯವೈಶ್ಯರು, ವೀರ ಹನುಮಾನ್ ಸ್ಟೋನ್ ಕ್ರಷರ್ನಲ್ಲಿ ಮ್ಯಾನೇಜರ್ ಕೆಲಸ ಮಾಡುತ್ತಿದ್ದು, ಪೆರೇಸಂದ್ರ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ನಿವಾಸಿಯಾಗಿದ್ದಾರೆ. ಅವರು ಪೆರೇಸಂದ್ರ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದರು.
ದಿನಾಂಕ 07-06-2026ರಂದು ರಾತ್ರಿ ಸುಮಾರು 12:45 ಗಂಟೆ ಸಮಯದಲ್ಲಿ ತಾನು ಕೆಲಸ ಮಾಡುವ ವೀರ ಹನುಮಾನ್ ಸ್ಟೋನ್ ಕ್ರಷರ್ನಲ್ಲಿ ಪ್ಯಾನೆಲ್ ಬೋರ್ಡ್ನಿಂದ ವಿಎಸ್ಐ ಮಿಷನರಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಸುಮಾರು 50 ಮೀಟರ್ ನಷ್ಟು 120 sqmm 3 core copper flexible cable ಅನ್ನು ಯಾರೋ ಕಳ್ಳರು ಕಟ್ ಮಾಡಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ದೂರಿನ ಮೇರೆಗೆ ಪೆರೇಸಂದ್ರ ಪೊಲೀಸ್ ಠಾಣೆಯಲ್ಲಿ ಮೊ.ಸಂಖ್ಯೆ: 114/2026, ಕಲಂ 303(2) ಬಿಎನ್ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ತನಿಖಾ ತಂಡದ ರಚನೆ
ಈ ಪ್ರಕರಣದ ಗಂಭೀರತೆಯನ್ನು ಅರಿತ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಪದ್ಮನಿ ಸಾಹೋ, ಐಪಿಎಸ್ ಅವರು ಗುಡಿಬಂಡೆ ಸಿಪಿಐ ಶ್ರೀ ಮುನಿಕೃಷ್ಣ ಡಿ.ಹೆಚ್ ಅವರ ನೇತೃತ್ವದಲ್ಲಿ ಪೆರೇಸಂದ್ರ ಪೊಲೀಸ್ ಠಾಣೆಯ ಪಿಎಸ್ಐ ಶ್ರೀಮತಿ ಗುಣವತಿ ವಿ.ಎನ್ ಹಾಗೂ ಪೆರೇಸಂದ್ರ ಮತ್ತು ಗುಡಿಬಂಡೆ ಪೊಲೀಸ್ ಠಾಣೆಗಳ ಅಪರಾಧ ಪತ್ತೆ ಸಿಬ್ಬಂದಿಗಳ ತಂಡಕ್ಕೆ ಕಳುವಾದ ಮಾಲು ಹಾಗೂ ಆರೋಪಿಗಳನ್ನು ಶೀಘ್ರವಾಗಿ ಪತ್ತೆ ಮಾಡಲು ಮಾರ್ಗದರ್ಶನ ನೀಡಿದ್ದಾರೆ.
ಆರೋಪಿಗಳ ಪತ್ತೆ – ತಮಿಳುನಾಡಿನಲ್ಲಿ ಬಂಧನ
ಮೇಲಾಧಿಕಾರಿಗಳ ನಿರ್ದೇಶನದಂತೆ ಪತ್ತೆ ಕಾರ್ಯ ಪ್ರಾರಂಭಿಸಿದ ತಂಡವು ಹಲವು ಆಯಾಮಗಳಲ್ಲಿ ಮಾಹಿತಿ ಸಂಗ್ರಹಿಸಿ, ದಿನಾಂಕ 14/10/2026ರಂದು ಆರೋಪಿಗಳನ್ನು ತಮಿಳುನಾಡು ರಾಜ್ಯದ ಕೃಷ್ಣಗಿರಿ ಜಿಲ್ಲೆಯ ಹೊಸೂರು ಪ್ರದೇಶದಲ್ಲಿ ಪತ್ತೆ ಮಾಡಿದೆ. ನಂತರ ಘನ ನ್ಯಾಯಾಲಯದಿಂದ ಪೊಲೀಸ್ ಅಭಿರಕ್ಷೆಗೆ ಪಡೆದು ವಿಚಾರಣೆ ನಡೆಸಲಾಯಿತು.
ಬಂಧಿತ ಆರೋಪಿಗಳ ವಿವರ
ವೃತ್ತಿ: ಕೂಲಿ ಕೆಲಸ
ವಿಳಾಸ: ಸಮತ್ತುವ ಪುರಂ, ಬಾಗಲೂರು ರಸ್ತೆ, ಹೊಸೂರು ತಾಲ್ಲೂಕು, ಕೃಷ್ಣಗಿರಿ ಜಿಲ್ಲೆ, ತಮಿಳುನಾಡು
ವೃತ್ತಿ: ಕೂಲಿ ಕೆಲಸ
ವಿಳಾಸ: ಸಾನಸಂದಿರಂ, ಕಡುವಳ್ ನಗರ, ಹೊಸೂರು ಟೌನ್, ಕೃಷ್ಣಗಿರಿ ಜಿಲ್ಲೆ, ತಮಿಳುನಾಡು
ವೃತ್ತಿ: ಕೂಲಿ ಕೆಲಸ
ವಿಳಾಸ: ಸಾನಸಂದಿರಂ, ಕಡುವಳ್ ನಗರ, ಹೊಸೂರು ಟೌನ್, ಕೃಷ್ಣಗಿರಿ ಜಿಲ್ಲೆ, ತಮಿಳುನಾಡು
ವೃತ್ತಿ: ಚಾಲಕ ವೃತ್ತಿ
ವಿಳಾಸ: ಸಾನಸಂದಿರಂ, ಕಡುವಳ್ ನಗರ, ಹೊಸೂರು ಟೌನ್, ಕೃಷ್ಣಗಿರಿ ಜಿಲ್ಲೆ, ತಮಿಳುನಾಡು
ವೃತ್ತಿ: ಚಾಲಕ ವೃತ್ತಿ
ವಿಳಾಸ: ಸಾನಸಂದಿರಂ, ವಿ.ಒ.ಸಿ ನಗರ, ಹೊಸೂರು ಟೌನ್, ಕೃಷ್ಣಗಿರಿ ಜಿಲ್ಲೆ, ತಮಿಳುನಾಡು
ಒಟ್ಟು 5 ಪ್ರಕರಣಗಳ ವಿವರ
ಆರೋಪಿಗಳ ವಿಚಾರಣೆಯಲ್ಲಿ ಅವರು ಕಾಪರ್ ಕೇಬಲ್ ಕಳವು ಮಾಡಿರುವುದು ದೃಢಪಟ್ಟಿದ್ದು, ಒಟ್ಟು 05 ಪ್ರಕರಣಗಳನ್ನು ಭೇದಿಸಲಾಗಿದೆ. ಇವುಗಳಲ್ಲಿ ಮೊದಲ 3 ಪ್ರಕರಣಗಳು ಪೆರೇಸಂದ್ರ ಪೊಲೀಸ್ ಠಾಣೆಗೆ ಸಂಬಂಧಿಸಿದ್ದರೆ, ಉಳಿದ 2 ಪ್ರಕರಣಗಳು ಮಂಚೇನಹಳ್ಳಿ ಪೊಲೀಸ್ ಠಾಣೆಗೆ ಸಂಬಂಧಿಸಿವೆ.
2. ಮೊ.ಸಂಖ್ಯೆ: 50/2026 – ಕಲಂ 303(2) ಬಿಎನ್ಎಸ್ (2-2023)
3. ಮೊ.ಸಂಖ್ಯೆ: 51/2026 – ಕಲಂ 303(2) ಬಿಎನ್ಎಸ್ (2-2023)
5. ಮೊ.ಸಂಖ್ಯೆ: 179/2026 – ಕಲಂ 303(2) ಬಿಎನ್ಎಸ್ (2-2023)
ವಶಪಡಿಸಿಕೊಂಡ ವಸ್ತುಗಳು
ಪೊಲೀಸ್ ಅಧಿಕಾರಿಗಳ ಮೆಚ್ಚುಗೆ
ಈ ತನಿಖಾ ತಂಡದ ಉತ್ತಮ ಕಾರ್ಯವನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಶಂಸಿಸಿದ್ದಾರೆ. ಅಂತರ್ ರಾಜ್ಯ ಕಳ್ಳತನ ಜಾಲವನ್ನು ಭೇದಿಸುವಲ್ಲಿ ತಂಡದ ಪರಿಶ್ರಮ ಹಾಗೂ ಸಮನ್ವಯತೆ ಮಹತ್ವದ್ದಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Post a Comment