ಬೆಂಗಳೂರು, ಮಾರ್ಚ್ 31: ರಾಷ್ಟ್ರೀಯ ಜನಗಣತಿ–2027ರ ಅಂಗವಾಗಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮನೆ ಪಟ್ಟಿ ಮತ್ತು ಮನೆ ಗಣತಿ ಕಾರ್ಯ ಏಪ್ರಿಲ್ 1, 2026 ರಿಂದ ಆರಂಭವಾಗಲಿದೆ. ಮೊದಲ ಹಂತದಲ್ಲಿ ಸಾರ್ವಜನಿಕರು ಆನ್‌ಲೈನ್ ಮೂಲಕ ಸ್ವಯಂ-ಗಣತಿ ಮಾಡಿಕೊಳ್ಳಬಹುದಾಗಿದೆ.
ಸ್ವಯಂ-ಗಣತಿಗಾಗಿ ಅಧಿಕೃತ ವೆಬ್ ಪೋರ್ಟಲ್ se.census.gov.in ಅನ್ನು ಪ್ರಾರಂಭಿಸಲಾಗಿದೆ. ಏಪ್ರಿಲ್ 1 ರಿಂದ ಏಪ್ರಿಲ್ 15, 2026 ರವರೆಗೆ ಮನೆಯ ಯಾವುದೇ ಒಬ್ಬ ಸದಸ್ಯರು ಈ ಪೋರ್ಟಲ್ ಮೂಲಕ ಸುಮಾರು 15–20 ನಿಮಿಷಗಳಲ್ಲಿ ತಮ್ಮ ಮನೆಯ ವಿವರಗಳನ್ನು ದಾಖಲಿಸಬಹುದು. ನೋಂದಣಿಯ ನಂತರ ಸ್ವಯಂ-ಗಣತಿ ಗುರುತಿನ ಸಂಖ್ಯೆ (Self-Enumeration ID) ಮೊಬೈಲ್ ಅಥವಾ ಇಮೇಲ್ ಮೂಲಕ ಪಡೆಯಬಹುದು.
ಎರಡನೇ ಹಂತವಾದ ಏಪ್ರಿಲ್ 16 ರಿಂದ ಮೇ 15, 2026 ರವರೆಗೆ ಗಣತಿದಾರರು ಮನೆ-ಮನೆಗೆ ಭೇಟಿ ನೀಡಿ ಮಾಹಿತಿಯನ್ನು ಪರಿಶೀಲಿಸಿ ಸಂಗ್ರಹಿಸಲಿದ್ದಾರೆ. ಸ್ವಯಂ-ಗಣತಿ ಮಾಡಿಕೊಂಡವರು ತಮ್ಮ Self-Enumeration ID ಅನ್ನು ಗಣತಿದಾರರೊಂದಿಗೆ ಹಂಚಿಕೊಳ್ಳಬೇಕು.
ಜನಗಣತಿ ಮಾಹಿತಿಯು ನಗರ ಯೋಜನೆ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಸಾರ್ವಜನಿಕ ಕಲ್ಯಾಣ ಕಾರ್ಯಕ್ರಮಗಳ ರೂಪಿಸಲು ಅಡಿಪಾಯವಾಗಲಿದೆ. ನಾಗರಿಕರು ಸ್ವಯಂ-ಗಣತಿಯಲ್ಲಿ ಭಾಗವಹಿಸಿ ನಿಖರ ಮಾಹಿತಿ ನೀಡುವ ಮೂಲಕ ಈ ರಾಷ್ಟ್ರೀಯ ಕಾರ್ಯದಲ್ಲಿ ಸಹಕರಿಸಬೇಕೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
.jpeg)
Post a Comment