Top News

ಏಪ್ರಿಲ್ 11 ಸಮಾವೇಶಕ್ಕೆ ಜೆಡಿಎಸ್ ಪೂರ್ವ ಸಿದ್ಧತೆ: ಜೆ.ಪಿ.ಭವನದಲ್ಲಿ ಮಹತ್ವದ ಸಭೆ


 


ಬೆಂಗಳೂರು: ಏಪ್ರಿಲ್ 11ರಂದು ಕೊಮ್ಮಘಟ್ಟ ನೈಸ್ ಗ್ರೌಂಡ್‌ನಲ್ಲಿ ನಡೆಯಲಿರುವ ಜೆಡಿಎಸ್ ಪಕ್ಷದ ಭಾರೀ ಸಮಾವೇಶದ ಪೂರ್ವ ಸಿದ್ಧತೆಗಾಗಿ ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಪ್ರಮುಖ ನಾಯಕರ ಸಭೆ ಇಂದು ಜೆ.ಪಿ.ಭವನದಲ್ಲಿ ನಡೆಯಿತು.


ಪಕ್ಷದ ಗ್ರೇಟರ್ ಬೆಂಗಳೂರು ಅಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಹೆಚ್.ಎಂ. ರಮೇಶಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಬೆಂಗಳೂರು ನಗರದ ವಿವಿಧ ಜಿಲ್ಲಾಧ್ಯಕ್ಷರುಗಳು, ವಿಧಾನಸಭಾ ಕ್ಷೇತ್ರಗಳ ಅಧ್ಯಕ್ಷರುಗಳು, ಮಹಿಳಾ ಘಟಕದ ಪ್ರತಿನಿಧಿಗಳು ಹಾಗೂ ವಿವಿಧ ವಿಭಾಗಗಳ ಮುಖಂಡರು ಭಾಗವಹಿಸಿ ಸಮಾವೇಶದ ಸಿದ್ಧತೆ ಕುರಿತು ಚರ್ಚಿಸಿದರು.


ಸಭೆಯಲ್ಲಿ ಮಾಜಿ ಶಾಸಕರಾದ ಕೆ.ಎ. ತಿಪ್ಪೇಸ್ವಾಮಿ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಇ. ಕೃಷ್ಣಪ್ಪ, ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಗೊಟ್ಟಿಗೆರೆ ಮಂಜನಾಥ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷರಾದ ಆರ್. ಪ್ರಕಾಶ್, ಬೆಂಗಳೂರು ಪಶ್ಚಿಮ ಜಿಲ್ಲಾಧ್ಯಕ್ಷರಾದ ಟಿ. ತಿಮ್ಮೇಗೌಡ, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷರಾದ ಎಚ್.ಸಿ. ಕೃಷ್ಣ, ಬೆಂಗಳೂರು ಪೂರ್ವ ಜಿಲ್ಲಾಧ್ಯಕ್ಷರಾದ ನಟರಾಜ್ ಗಂಗಾಧರ್ ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು.


ಇದರ ಜೊತೆಗೆ ಗ್ರೇಟರ್ ಬೆಂಗಳೂರು ಮಹಿಳಾ ಅಧ್ಯಕ್ಷರಾದ ಶೈಲಾ ಸಂತೋಜಿ ರಾವ್ ಹಾಗೂ ವಿಧಾನಸಭಾ ಕ್ಷೇತ್ರಗಳ ಅಧ್ಯಕ್ಷರುಗಳು ಮತ್ತು ವಿವಿಧ ಘಟಕಗಳ ಮುಖಂಡರು ಸಭೆಯಲ್ಲಿ ಭಾಗವಹಿಸಿ ಸಮಾವೇಶವನ್ನು ಯಶಸ್ವಿಗೊಳಿಸಲು ಅಗತ್ಯ ಕ್ರಮಗಳ ಕುರಿತು ಚರ್ಚಿಸಿದರು.


ಸಭೆಯಲ್ಲಿ ಏಪ್ರಿಲ್ 11ರಂದು ನಡೆಯಲಿರುವ ಸಮಾವೇಶವನ್ನು ಭವ್ಯವಾಗಿ ನಡೆಸುವ ಉದ್ದೇಶದಿಂದ ಕಾರ್ಯಕರ್ತರ ಸಮನ್ವಯ, ಜನಸಂಪರ್ಕ ಕಾರ್ಯಕ್ರಮಗಳು, ಸಂಘಟನಾ ಬಲವರ್ಧನೆ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಯಿತು.


ಪಕ್ಷದ ಮುಖಂಡರು ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಹಾಗೂ ಸಾರ್ವಜನಿಕರನ್ನು ಸೇರಿಸಲು ಕ್ರಮ ಕೈಗೊಳ್ಳಬೇಕೆಂದು 

ಕರೆ ನೀಡಿದರು.

Post a Comment

Previous Post Next Post