ಬೆಂಗಳೂರು, ಮಾರ್ಚ್ 22: ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆ ಮತ್ತು ವೈಷ್ಣವಿ ಗ್ರೂಪ್ ಜಂಟಿ ಆಶ್ರಯದಲ್ಲಿ ಎರಡನೇ ವರ್ಷದ ‘ಮುಖ್ಯಮಂತ್ರಿಗಳ ಕಪ್’ ಫುಟ್‌ಬಾಲ್ ಟೂರ್ನಿಗೆ ಇಂದು ಚಾಲನೆ ದೊರಕಿತು. ಈ ಕುರಿತು ಶಾಂತಿನಗರ ಶಾಸಕ ಎನ್.ಎ. ಹರೀಶ್ ಅವರು ತಮ್ಮ ಟ್ವೀಟ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಏಪ್ರಿಲ್ 12, 2026ರ ವರೆಗೆ ನಡೆಯಲಿರುವ ಈ ಟೂರ್ನಿಯಲ್ಲಿ ರಾಜ್ಯದ 16 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ತಂಡಗಳು ಭಾಗವಹಿಸುತ್ತಿವೆ. 16 ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನಲ್ಲಿ ಮೊದಲ ಎರಡು ಸ್ಥಾನ ಪಡೆಯುವ ತಂಡಗಳು ಕ್ವಾರ್ಟರ್ ಫೈನಲ್ ಪ್ರವೇಶ ಪಡೆಯಲಿವೆ.
ಆಟಗಾರರ ಪ್ರತಿಭೆಗೆ ವೇದಿಕೆಯಾಗಿರುವ ಈ ಟೂರ್ನಿಯು ಯುವ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಟೂರ್ನಿಯ ಯಶಸ್ಸಿಗೆ ಶುಭ ಹಾರೈಸಿದ ಶಾಸಕ ಎನ್.ಎ. ಹರೀಶ್ ಅವರು, ಕ್ರೀಡಾ ಸಂಸ್ಕೃತಿಯನ್ನು ಬೆಳೆಸುವಲ್ಲಿ ಸರ್ಕಾರದ ಪ್ರಯತ್ನ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.

Post a Comment