Top News

ಯಲಹಂಕ ಕ್ಷೇತ್ರದ ಹಳೆಹಳ್ಳಿ ಪಾಳ್ಯದಲ್ಲಿ ಹಾಲಿನ ಡೈರಿ ಕಟ್ಟಡಕ್ಕೆ ಸಂಸದ ಡಾ. ಕೆ. ಸುಧಾಕರ್ ಅವರಿಂದ ಶಂಕುಸ್ಥಾಪನೆ


 ಬೆಂಗಳೂರು, ಮಾರ್ಚ್ 22: ಯಲಹಂಕ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಹೆಸರುಗಟ್ಟ ಹೋಬಳಿಯ ಹಳೆಹಳ್ಳಿ ಪಾಳ್ಯ ಗ್ರಾಮದಲ್ಲಿ ಹಾಲಿನ ಡೈರಿಯ ಮೊದಲನೇ ಮಹಡಿಯ ಕಟ್ಟಡ ನಿರ್ಮಾಣ ಕಾಮಗಾರಿಗೆ ಇಂದು ಚಿಕ್ಕಬಳ್ಳಾಪುರ ಸಂಸದ ಡಾ. ಕೆ. ಸುಧಾಕರ್ ಅವರು ಶಂಕುಸ್ಥಾಪನೆ ನೆರವೇರಿಸಿದರು.


ಈ ಸಂದರ್ಭದಲ್ಲಿ ಬೊಮುಲ್ ನಿರ್ದೇಶಕರಾದ ಕಡತನಮಲೆ ಸತೀಶ್ ಗೌಡರು, ಮಾಜಿ ಜಿಲ್ಲಾ ಪಂಚಾಯಿತ್ ಸದಸ್ಯರಾದ ಸೀನಪ್ಪ, ಹನುಮಯ್ಯ, ಬಾಬಣ್ಣ, ಅಜಯ್, ಎಂಪಿಸಿಎಸ್ ಅಧ್ಯಕ್ಷರಾದ ನಾವಾನಂದ ರವರು ಹಾಗೂ ಸಂಸ್ಥೆಯ ಎಲ್ಲಾ ನಿರ್ದೇಶಕರು ಮತ್ತು ಸ್ಥಳೀಯ ಗ್ರಾಮಸ್ಥರು ಉಪಸ್ಥಿತರಿದ್ದರು.


ಹಾಲು ಉತ್ಪಾದಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಕಟ್ಟಡ ನಿರ್ಮಾಣವಾಗುತ್ತಿದ್ದು, ಸ್ಥಳೀಯ ಡೈರಿ ಮೂಲಸೌಕರ್ಯ ವಿಸ್ತರಣೆಗೆ ಇದು ಪೂರಕವಾಗಲಿದೆ ಎಂದು ಸಂಸದ ಡಾ. ಕೆ. ಸುಧಾಕರ್ ಅವರು ತಿಳಿಸಿದರು. ಗ್ರಾಮದ ಅಭಿವೃದ್ಧಿಯಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಹಕಾರವನ್ನು ಅವರು ಸ್ಮರಿಸಿದರು.

Post a Comment

Previous Post Next Post