ಬೆಂಗಳೂರು, ಮಾರ್ಚ್ 22: 2026-27ನೇ ಶೈಕ್ಷಣಿಕ ಸಾಲಿನ ಆರ್.ಟಿ.ಇ (RTE) ಪ್ರವೇಶಾತಿ ಪ್ರಕ್ರಿಯೆಯು ಏಪ್ರಿಲ್ 9, 2026 ರಂದು ಆರಂಭವಾಗಲಿದೆ. ಆರ್ಥಿಕವಾಗಿ ಹಿಂದುಳಿದ ಮತ್ತು ದುರ್ಬಲ ವರ್ಗದ ಮಕ್ಕಳಿಗೆ ಅರ್ಹ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25ರಷ್ಟು ಉಚಿತ ಸೀಟುಗಳು ಲಭ್ಯವಿರುತ್ತವೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯು, ಅರ್ಹ ಪೋಷಕರು ಮೇ 7, 2026 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದೆ. ಆರ್ಥಿಕವಾಗಿ ಹಿಂದುಳಿದ, ದುರ್ಬಲ ವರ್ಗ, ಅನುಸೂಚಿತ ಜಾತಿ ಮತ್ತು ಪಂಗಡದ ಮಕ್ಕಳು ಈ ಯೋಜನೆಯಡಿ ಪ್ರವೇಶಾತಿ ಪಡೆಯಲು ಅರ್ಹರಾಗಿರುತ್ತಾರೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮೇ 7, 2026
ಪ್ರವೇಶಾತಿ ಫಲಿತಾಂಶ ಪ್ರಕಟಣೆ: ಮೇ 14, 2026 (ನಿರೀಕ್ಷಿತ)
ಪೋಷಕರು ಸೂಚಿತ ಅವಧಿಯೊಳಗೆ ಅರ್ಜಿ ಸಲ್ಲಿಸುವ ಮೂಲಕ ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಅವಕಾಶವನ್ನು ಪಡೆದುಕೊಳ್ಳಬೇಕೆಂದು ಶಿಕ್ಷಣ ಇಲಾಖೆ ಕೋರಿದೆ. ಹೆಚ್ಚಿನ ಮಾಹಿತಿಗಾಗಿ https://rte.karnataka.gov.in ವೆಬ್ಸೈಟ್‌ಗೆ ಭೇಟಿ ನೀಡಬಹುದು.

Post a Comment