Top News

ಬೆಂಗಳೂರು: ಸೋನಾಟಾ, ಟೈಟಾನ್ ಸೇರಿದಂತೆ ಪ್ರತಿಷ್ಠಿತ ಬ್ರ್ಯಾಂಡ್‌ಗಳ ನಕಲಿ ವಾಚ್‌ ಮಾರಾಟ; ಸಿಸಿಬಿ ದಾಳಿಯಲ್ಲಿ ₹25 ಲಕ್ಷ ಮೌಲ್ಯದ ನಕಲಿ ಉತ್ಪನ್ನಗಳು ಜಪ್ತಿ


 ಬೆಂಗಳೂರು, ಮಾರ್ಚ್ 31: ಬೆಂಗಳೂರು ನಗರದಲ್ಲಿ ಸೋನಾಟಾ, ಟೈಟಾನ್, ಫಾಸ್ಟ್ರ್ಯಾಕ್ ಸೇರಿದಂತೆ ಪ್ರತಿಷ್ಠಿತ ಬ್ರ್ಯಾಂಡ್‌ಗಳ ನಕಲಿ ವಾಚ್‌ಗಳನ್ನು ಅಸಲಿಯೆಂದು ನಂಬಿಸಿ ಮಾರಾಟ ಮಾಡುತ್ತಿದ್ದ ಐದು ಅಂಗಡಿಗಳ ಮೇಲೆ ಸೆಂಟ್ರಲ್ ಕ್ರೈಂ ಬ್ರಾಂಚ್ (ಸಿಸಿಬಿ) ಆರ್ಥಿಕ ಅಪರಾಧ ದಳದ ಪೊಲೀಸರು ದಾಳಿ ನಡೆಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಸುಮಾರು ₹25 ಲಕ್ಷ ಮೌಲ್ಯದ ನಕಲಿ ಉತ್ಪನ್ನಗಳನ್ನು ಜಪ್ತಿ ಮಾಡಲಾಗಿದೆ.


ಡಿಸಿಪಿ (ಕ್ರೈಂ-2) ಶ್ರೀ ರಾಜಾ ಇಮಾಮ ಕಾಸಿಂ ಅವರ ನೇತೃತ್ವದಲ್ಲಿ ಎಸಿಪಿ ಶ್ರೀ ಹೆಚ್.ಕೆ. ಮಹಾನಂದ್ ಮತ್ತು ಇನ್ಸ್‌ಪೆಕ್ಟರ್ ಶ್ರೀ ಸಂತೋಷ್ ರಾಮ್ ಆರ್. ಅವರ ತಂಡ ಈ ಯಶಸ್ವಿ ಕಾರ್ಯಾಚರಣೆಯನ್ನು ನಡೆಸಿತು.


ನಗರದ ವಿವಿಧೆಡೆಗಳಲ್ಲಿದ್ದ ಈ ಅಂಗಡಿಗಳು ಬ್ರ್ಯಾಂಡೆಡ್ ವಾಚ್‌ಗಳ ನಕಲಿ ಪ್ರತಿಗಳನ್ನು ಅಸಲಿ ಎಂದು ಸಾರ್ವಜನಿಕರಿಗೆ ಮಾರಾಟ ಮಾಡಿ ವಂಚಿಸುತ್ತಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ. ದಾಳಿಯ ವೇಳೆ ಅಪಾರ ಪ್ರಮಾಣದ ನಕಲಿ ವಾಚ್‌ಗಳು, ಪ್ಯಾಕಿಂಗ್ ಸಾಮಗ್ರಿಗಳು ಹಾಗೂ ಮಾರಾಟದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.


ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದ ಈ ಜಾಲವನ್ನು ಪತ್ತೆಹಚ್ಚಿ ಭೇದಿಸಲಾಗಿದೆ. ಅಪರಾಧಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತಿದೆ. ನಾಗರಿಕರು ಅಸಲಿ ಬ್ರ್ಯಾಂಡ್‌ಗಳ ವಾಚ್‌ಗಳನ್ನು ಅಧಿಕೃತ ಮಾರಾಟ ಕೇಂದ್ರಗಳಿಂದ ಮಾತ್ರ ಖರೀದಿಸುವಂತೆ ಪೊಲೀಸರು ಸಲಹೆ ನೀಡಿದ್ದಾರೆ.

Post a Comment

Previous Post Next Post