Top News

ರಾಜ್ಯಸಭೆ ಚುನಾವಣೆ: 37 ಸ್ಥಾನಗಳಲ್ಲಿ 26 ಅಭ್ಯರ್ಥಿಗಳು ಅವಿರೋಧ ಆಯ್ಕೆ


 

ನವದೆಹಲಿ: ದೇಶದ ವಿವಿಧ ರಾಜ್ಯಗಳಲ್ಲಿ ನಡೆದ ರಾಜ್‍यಸಭೆ ಚುನಾವಣೆಯಲ್ಲಿ ಒಟ್ಟು 37 ಸ್ಥಾನಗಳಿಗೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇದರಲ್ಲಿ 26 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ 11 ಸ್ಥಾನಗಳಿಗೆ ಬಿಹಾರ, ಒಡಿಶಾ ಮತ್ತು ಹರಿಯಾಣ ರಾಜ್ಯಗಳಲ್ಲಿ ಮಾರ್ಚ್ 17ರಂದು ಮತದಾನ ನಡೆಯಿತು.


ಚುನಾವಣಾ ಫಲಿತಾಂಶಗಳಲ್ಲಿ ರಾಷ್ಟ್ರೀಯ ಜನತಾಂತ್ರಿಕ ಒಕ್ಕೂಟ (NDA) ಪ್ರಮುಖ ಮುನ್ನಡೆ ಸಾಧಿಸಿದ್ದು, ಒಟ್ಟು 22 ಸ್ಥಾನಗಳನ್ನು ತನ್ನ ಖಾತೆಗೆ ಸೇರಿಸಿಕೊಂಡಿದೆ. ಇದರೊಂದಿಗೆ ಮೇಲ್ಮನೆ ಯಾದ ರಾಜ್‍यಸಭೆಯಲ್ಲಿ NDA ತನ್ನ ಬಹುಮತದ ಗಡಿಯನ್ನು ಸುಲಭವಾಗಿ ದಾಟಿದೆ.


ಈ ಬಾರಿ ಹಲವು ರಾಜ್ಯಗಳಲ್ಲಿ ಸ್ಪರ್ಧೆ ಇಲ್ಲದೆ ಅಭ್ಯರ್ಥಿಗಳು ಆಯ್ಕೆಯಾಗಿರುವುದು ಗಮನಾರ್ಹವಾಗಿದ್ದು, ಕೆಲವು ಪ್ರಮುಖ ರಾಜ್ಯಗಳಲ್ಲಿ ಮಾತ್ರ ಮತದಾನ ನಡೆದಿತು. ರಾಜಕೀಯ ಸಮೀಕರಣಗಳಲ್ಲಿ ಬದಲಾವಣೆಗಳು ಮತ್ತು ಮೈತ್ರಿ ಬಲ ಹೆಚ್ಚಿದ ಹಿನ್ನೆಲೆಯಲ್ಲಿ NDAಗೆ ಈ ಯಶಸ್ಸು ಸಿಕ್ಕಿದೆ ಎಂದು ವಿಶ್ಲೇಷಿಸಲಾಗುತ್ತಿದೆ.


ಈ ಫಲಿತಾಂಶಗಳು ಮುಂದಿನ ದಿನಗಳಲ್ಲಿ ಸಂಸತ್ತಿನ ಮೇಲ್ಮನೆಯಲ್ಲಿ ಕಾನೂನು ಮಸೂದೆಗಳನ್ನು ಅಂಗೀಕರಿಸುವಲ್ಲಿ ಸರ್ಕಾರಕ್ಕೆ ಮತ್ತಷ್ಟು ಬಲ ನೀಡಲಿವೆ ಎಂಬ ಅಭಿಪ್ರಾಯ ವ್ಯಕ್ತವಾಗು

ತ್ತಿದೆ.

Post a Comment

Previous Post Next Post