ಬೆಂಗಳೂರು:
ರಾಷ್ಟ್ರೀಯ ಸ್ವಚ್ಛ ವಾಯು ಕಾರ್ಯಕ್ರಮ (NCAP) ಅಡಿಯಲ್ಲಿ ಬೆಂಗಳೂರಿನ ವಾಯು ಗುಣಮಟ್ಟ ಸುಧಾರಣೆಗೆ ಕೇಂದ್ರ ಸರ್ಕಾರದಿಂದ ಮಹತ್ವದ ಅನುದಾನ ಒದಗಿಸಲಾಗಿದೆ ಎಂದು ಬೆಂಗಳೂರು ಕೇಂದ್ರ ಸಂಸದ P. C. Mohan ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, 15ನೇ ಹಣಕಾಸು ಆಯೋಗದ ಮಿಲಿಯನ್ ಪ್ಲಸ್ ಸಿಟಿ ಚಾಲೆಂಜ್ ಫಂಡ್ ಅಡಿಯಲ್ಲಿ ಬೆಂಗಳೂರಿಗೆ ಒಟ್ಟು ₹541.1 ಕೋಟಿ ಅನುದಾನ ನೀಡಲಾಗಿದೆ ಎಂದು ಹೇಳಿದ್ದಾರೆ. ಇದರಲ್ಲಿ ಸುಮಾರು ₹427.43 ಕೋಟಿ (79%) ಮೊತ್ತವನ್ನು ಈಗಾಗಲೇ ವಿವಿಧ ಯೋಜನೆಗಳಿಗೆ ಬಳಸಲಾಗಿದೆ ಎಂದು ವಿವರಿಸಿದ್ದಾರೆ.
ನಗರದಲ್ಲಿ ಸ್ವಚ್ಛ ವಾಯು ಪರಿಸರ ನಿರ್ಮಾಣಕ್ಕೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಕ್ಲೀನ್ ಮೊಬಿಲಿಟಿ ಯೋಜನೆಗಳೂ ಪ್ರಮುಖವಾಗಿ
ಪ್ರಸ್ತುತ ಬೆಂಗಳೂರಿನಲ್ಲಿ ವಾಯು ಗುಣಮಟ್ಟವನ್ನು 26 ಕೇಂದ್ರಗಳ ಮೂಲಕ ಪರಿಶೀಲಿಸಲಾಗುತ್ತಿದೆ. ಇದರಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ನಡೆಸುವ 11 ನಿರಂತರ ವಾಯು ಗುಣಮಟ್ಟ ಪರಿಶೀಲನಾ ಕೇಂದ್ರಗಳು (CAAQMS) ಸೇರಿವೆ. ಈ ಮಾಹಿತಿಯನ್ನು ಸಾರ್ವಜನಿಕರಿಗೆ SAMEER ಆಪ್ ಮತ್ತು ದಿನನಿತ್ಯದ AQI ಬ್ಯೂಲೆಟಿನ್ ಮೂಲಕ ಹಂಚಲಾಗುತ್ತಿದೆ.
ಅಂಕಿ-ಅಂಶಗಳ ಪ್ರಕಾರ, PM10 ಪ್ರಮಾಣವು 2017-18ರಲ್ಲಿ 92 µg/m³ ಇದ್ದದ್ದು 2024-25ರಲ್ಲಿ 72 µg/m³ಕ್ಕೆ ಇಳಿಕೆಯಾಗಿದ್ದು ಸುಮಾರು 21.7% ಕಡಿಮೆಯಾಗಿದೆ. ಇತ್ತೀಚಿನ ದಿನಗಳಲ್ಲಿ “ಕೆಟ್ಟ AQI” ದಿನಗಳು ದಾಖಲಾಗಿಲ್ಲ ಎನ್ನುವುದು ಗಮನಾರ್ಹವಾಗಿದೆ.
NCAP ಯೋಜನೆಯಡಿ ಕೈಗೊಳ್ಳಲಾದ ಪ್ರಮುಖ ಕ್ರಮಗಳು:
212.6 ಕಿಮೀ ರಸ್ತೆಗಳಿಗೆ ಡಾಂಬರೀಕರಣ ಹಾಗೂ ಪಾದಚಾರಿ ಸೌಲಭ್ಯ ಸುಧಾರಣೆ
1,25,290 ಚದರ ಮೀಟರ್ ಹಸಿರು ಆವರಣ ವಿಸ್ತರಣೆ
2.72 ಲಕ್ಷ ಟನ್ ನಿರ್ಮಾಣ ಮತ್ತು ಧ್ವಂಸ ತ್ಯಾಜ್ಯ ಸಂಗ್ರಹ
127 ಎಲೆಕ್ಟ್ರಿಕ್ ಬಸ್ಸುಗಳ ನಿಯೋಜನೆ
20 ಪ್ರಮುಖ ಟ್ರಾಫಿಕ್ ಜಾಮ್ ಪ್ರದೇಶಗಳ ಸುಧಾರಣೆ
16 ಕಾರಂಜಿ (ಫೌಂಟನ್) ಸ್ಥಾಪನೆ
7 ಇವಿ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆ
ನಗರದ ಪರಿಸರ ಸುಧಾರಣೆ ಮತ್ತು ಸ್ವಚ್ಛ ವಾಯು ಒದಗಿಸುವಲ್ಲಿ ಕೇಂದ್ರ ಸರ್ಕಾರ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಸಂಸದ ಪಿ.ಸಿ. ಮೋಹನ್ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಬೆಂಗಳೂರಿನ ಪರಿಸರ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
Post a Comment