ಮಂಡ್ಯ: ಜಿಲ್ಲೆಯಲ್ಲೇ ಕೇಂದ್ರ ಸರಕಾರಿ ಸ್ವಾಮ್ಯದ **Automotive Research Association of India** ಪರೀಕ್ಷಾ ಕೇಂದ್ರ ಸ್ಥಾಪನೆಗೆ ಸಂಬಂಧಿಸಿದಂತೆ ಸಂಸ್ಥೆಯ ಉನ್ನತಾಧಿಕಾರಿಗಳು ಪ್ರಸ್ತಾವಿತ ಜಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ **H. D. Kumaraswamy** ಅವರ ಒತ್ತಾಸೆಯೊಂದಿಗೆ ಈ ಯೋಜನೆಯನ್ನು ಮಂಡ್ಯ ಜಿಲ್ಲೆಯಲ್ಲಿ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಈ ಸಂಬಂಧ ARAI ಸಂಸ್ಥೆಯ ಮೂವರು ಹಿರಿಯ ಅಧಿಕಾರಿಗಳು **Mandya** ಜಿಲ್ಲೆಯ **Basaralu** ಸಮೀಪದಲ್ಲಿರುವ ಮತ್ತಿಘಟ್ಟ ಹಾಗೂ ಹೆಗ್ಗಡಿಹಳ್ಳಿ ಗ್ರಾಮಗಳ ಬಳಿಯ ಪ್ರಸ್ತಾವಿತ ಜಾಗವನ್ನು ಸ್ಥಳೀಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.
ಪ್ರಸ್ತಾವಿತ ಪ್ರದೇಶದ ಮೂಲಸೌಕರ್ಯ, ಸಂಪರ್ಕ ವ್ಯವಸ್ಥೆ ಹಾಗೂ ಇತರ ಸೌಲಭ್ಯಗಳ ಕುರಿತು ಅಧಿಕಾರಿಗಳು ಸಮಗ್ರ ಮಾಹಿತಿ ಪಡೆದುಕೊಂಡರು. ಯೋಜನೆ ಜಾರಿಗೆ ಬಂದರೆ ರಾಜ್ಯದ ಆಟೋಮೊಬೈಲ್ ಕ್ಷೇತ್ರದ ಅಭಿವೃದ್ಧಿಗೆ ಉತ್ತೇಜನ ಸಿಗುವ ನಿರೀಕ್ಷೆಯಿದೆ.
ರಾಜ್ಯದ ಕೈಗಾರಿಕಾ ಅಭಿವೃದ್ಧಿಗೆ ಸಹಾಯಕವಾಗಲಿರುವ ಈ ಯೋಜನೆ ಮುಂದಿನ ದಿನಗಳಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಜೊತೆಗೆ ಸಂಶೋಧನೆ ಮತ್ತು ಪರೀಕ್ಷಾ ಚಟುವಟಿಕೆಗಳಿಗೆ ಮಹತ್ವದ ಕೇಂದ್ರವಾಗಲಿದೆ ಎಂದು ಅಧಿಕಾರಿಗಳು ತಿಳಿ
ಸಿದ್ದಾರೆ.

Post a Comment