Top News

ಬಸವಣ್ಣನವರ ನಾಡಿನಲ್ಲಿ ಸಚಿವರ ಸಮಾವೇಶ: ಗ್ಯಾರಂಟಿ ಯೋಜನೆಗಳ ಜೊತೆಗೆ ಇಡೀ ಸರ್ಕಾರ ಉಮೇಶ್ ಮೇಟಿ ಅವರೊಂದಿಗೆ


 ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀ ಉಮೇಶ್ ಮೇಟಿ ಅವರ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರ ಜೊತೆಗೂಡಿ ಭಾಗವಹಿಸಿದೆ. ನಂತರ ಬೃಹತ್ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದೆ.


ಇಂದು ನಾವು ಬಸವಣ್ಣನವರ ನಾಡಿನಲ್ಲಿದ್ದೇವೆ. ನಾವು ನುಡಿದಂತೆ ನಡೆದುಕೊಂಡು ಮಾತು ಉಳಿಸಿಕೊಂಡಿದ್ದೇವೆ. ಗ್ಯಾರಂಟಿ ಯೋಜನೆಗಳು ಎಲ್ಲಾ ವರ್ಗದ ಜನರಿಗೂ ಅನುಕೂಲ ಮಾಡಿಕೊಟ್ಟಿವೆ. ನಮ್ಮ ಸರ್ಕಾರ ಜನರ ಜೊತೆಗಿದೆ, ಮತ್ತು ಇಡೀ ಸರ್ಕಾರ ಉಮೇಶ್ ಮೇಟಿ ಅವರ ಜೊತೆಗಿದೆ.


ಬಾಗಲಕೋಟೆಯ ಜನತೆ ಈ ಉಪಚುನಾವಣೆಯಲ್ಲಿ ಉಮೇಶ್ ಮೇಟಿ ಅವರನ್ನು ಅಭೂತಪೂರ್ವ ಬಹುಮತದಿಂದ ಗೆಲ್ಲಿಸಿ. ಅಭಿವೃದ್ಧಿಯ ರಥವನ್ನು ಮುಂದುವರೆಸಲು ನಿಮ್ಮ ಆಶೀರ್ವಾದ ನೀಡಿ.


ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್. ಬಿ. ತಿಮ್ಮಾಪುರ, ಸಚಿವರಾದ ಸತೀಶ್ ಜಾರಕಿಹೊಳಿ, ಎಂ.ಬಿ. ಪಾಟೀಲ, ಶಿವಾನಂದ ಪಾಟೀಲ ಅವರು ಸೇರಿದಂತೆ ಎಲ್ಲಾ ಶಾಸಕರು, ಮುಖಂಡರು ಉಪಸ್ಥಿತರಿದ್ದರು. ಎಲ್ಲರ ಸಹಕಾರಕ್ಕೆ ಧನ್ಯವಾದಗಳು.

Post a Comment

Previous Post Next Post