Top News

ಬೆಂಗಳೂರಿನಲ್ಲಿ ವಾಣಿಜ್ಯ ಎಲ್.ಪಿ.ಜಿ ತೀವ್ರ ಕೊರತೆ: ಸಿದ್ದರಾಮಯ್ಯ ಅವರು ಕೇಂದ್ರ ಸಚಿವ ಹರದೀಪ್ ಸಿಂಗ್ ಪುರಿ ಅವರಿಗೆ ಪತ್ರದ ಮೂಲಕ ತುರ್ತು ಮಧ್ಯಸ್ಥಿಕೆ ಕೋರಿ


 


ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ವಾಣಿಜ್ಯ ಎಲ್.ಪಿ.ಜಿ (ಕಾಮರ್ಶಿಯಲ್ ಎಲ್ಪಿಜಿ) ಸಿಲಿಂಡರ್ಗಳ ತೀವ್ರ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಪೆಟ್ರೋಲಿಯಂ ಸಚಿವ ಹರದೀಪ್ ಸಿಂಗ್ ಪುರಿ ಅವರಿಗೆ ಪತ್ರ ಬರೆದು ತುರ್ತು ಮಧ್ಯಸ್ಥಿಕೆ ವಹಿಸುವಂತೆ ಮನವಿ ಮಾಡಿದ್ದಾರೆ.


ವಾಣಿಜ್ಯ ಸಂಸ್ಥೆಗಳು, ಹೋಟೆಲ್ಗಳು, ಅಡುಗೆ ಸಂಬಂಧಿತ ವ್ಯಾಪಾರಗಳು ಎಲ್ಪಿಜಿ ಕೊರತೆಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ಈ ಹಿನ್ನೆಲೆಯಲ್ಲಿ ಸಮಸ್ಯೆಯ ತೀವ್ರತೆಯನ್ನು ಗಮನಕ್ಕೆ ತಂದುಕೊಂಡ ಮುಖ್ಯಮಂತ್ರಿಗಳು, ತಕ್ಷಣದ ಪರಿಹಾರ ಕೋರಿ ಕೇಂದ್ರ ಸಚಿವರಿಗೆ ಪತ್ರ ರವಾನಿಸಿದ್ದಾರೆ.


ಸದ್ಯದ ಪರಿಸ್ಥಿತಿ: ರಾಜ್ಯದಲ್ಲಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ದೈನಂದಿನ ಬೇಡಿಕೆ ಸುಮಾರು 50,000 ಸಿಲಿಂಡರ್ಗಳಷ್ಟಿದೆ. ಆದರೆ ಪ್ರಸ್ತುತ ದೈನಂದಿನ ಪೂರೈಕೆ ಕೇವಲ 1,000 ಸಿಲಿಂಡರ್ಗಳಿಗೆ ಸೀಮಿತಗೊಂಡಿದೆ. ಈ ಅಗಾಧ ಅಂತರದಿಂದಾಗಿ ಸಣ್ಣಪುಟ್ಟ ಅಂಗಡಿಗಳಿಂದ ಹಿಡಿದು ದೊಡ್ಡ ಹೋಟೆಲ್ಗಳವರೆಗೆ ಸಂಕಷ್ಟ ಎದುರಾಗಿದ್ದು, ಅನೇಕ ವ್ಯಾಪಾರಗಳು ಮುಚ್ಚುವ ಸ್ಥಿತಿಗೆ ತಲುಪಿವೆ.


ಸರ್ಕಾರದ ಕ್ರಮ: ರಾಜ್ಯ ಸರ್ಕಾರವು ಈಗಾಗಲೇ ಅಗತ್ಯ ಕ್ಷೇತ್ರಗಳಿಗೆ ಆದ್ಯತೆಯ ಮೇರೆಗೆ ಪೂರೈಕೆ ನಿಯಂತ್ರಿಸಲು ಕ್ರಮ ಕೈಗೊಂಡಿದೆ. ಆದರೂ ಪೂರೈಕೆ ಮತ್ತು ಬೇಡಿಕೆಯ ನಡುವಿನ ವ್ಯತ್ಯಾಸ ಅಗಾಧವಾಗಿರುವುದರಿಂದ ಈ ಸಮಸ್ಯೆ ವಿಕೋಪಕ್ಕೆ ತಿರುಗಿದೆ.


ಮುಖ್ಯಮಂತ್ರಿಯವರ ಮನವಿ: ಸಿದ್ದರಾಮಯ್ಯ ಅವರು ತಮ್ಮ ಪತ್ರದಲ್ಲಿ, ಕರ್ನಾಟಕಕ್ಕೆ ವಾಣಿಜ್ಯ ಮತ್ತು ಆಟೋ ಎಲ್ಪಿಜಿ ಸಿಲಿಂಡರ್ಗಳ ಸಾಕಷ್ಟು ಮೀಸಲು ಪೂರೈಕೆಗೆ ತುರ್ತಾಗಿ ಅನುಮತಿ ನೀಡುವಂತೆ ಕೇಂದ್ರ ಸಚಿವರನ್ನು ಒತ್ತಾಯಿಸಿದ್ದಾರೆ. ವಾಣಿಜ್ಯ ಚಟುವಟಿಕೆಗಳು ಸ್ಥಗಿತಗೊಳ್ಳುವ ಮುನ್ನ ಕೇಂದ್ರ ಸರ್ಕಾರವು ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.


ವ್ಯಾಪಾರೋದ್ಯಮಿಗಳು, ಹೋಟೆಲ್ ಮಾಲೀಕರು ಮತ್ತು ಉದ್ಯೋಗಿಗಳ ಜೀವನೋಪಾಯಕ್ಕೆ ಈ ಸಮಸ್ಯೆ ಗಂಭೀರ ಎದುರಾಗಿದೆ. ರಾಜ್ಯ ಸರ್ಕಾರದ ಈ ಮನವಿಗೆ ಕೇಂದ್ರ ಸರ್ಕಾರದಿಂದ ಶೀಘ್ರ ಸ್ಪಂದನೆಯಾಗಬೇಕೆಂದು ವ್ಯಾಪಾರಿ ಸಂಘಟನೆಗಳು ಮತ್ತು ಹೋಟೆಲ್ ಮಾಲೀಕರು ಆಶಿಸಿದ್ದಾರೆ.

Post a Comment

Previous Post Next Post