Top News

ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಪ್ರಥಮ ಬಾರಿಗೆ ಮದ್ದೂರು ಉತ್ಸವ: ಮ್ಯಾರಥಾನ್, ಕ್ರೀಡೆ, ರಂಗೋಲಿ, ಸಂಗೀತ ಸಂಜೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು

ಮದ್ದೂರು ಉತ್ಸವ - 2026: ಏಪ್ರಿಲ್ 25 ರಿಂದ ಮೇ 6 ವರೆಗೆ ಅದ್ದೂರಿ ಸಂಭ್ರಮ; ರಾಸುಗಳ ಜಾತ್ರೆ, ಕ್ರೀಡೆ, ರಂಗೋಲಿ, ಸಂಗೀತ ಸಂಜೆ

ಮದ್ದೂರು ಉತ್ಸವ - 2026: ಏಪ್ರಿಲ್ 25 ರಿಂದ ಮೇ 06 ವರೆಗೆ ಅದ್ದೂರಿ ಸಂಭ್ರಮ; ರಾಸುಗಳ ಜಾತ್ರೆ, ಕ್ರೀಡೆ, ರಂಗೋಲಿ, ಸಂಗೀತ ಸಂಜೆ

🗓️ ಪ್ರಕಟಣೆ: 15 ಏಪ್ರಿಲ್ 2026 📍 ಮದ್ದೂರು, ಮಂಡ್ಯ ಜಿಲ್ಲೆ ✍️ ಶ್ರೀ ಧಾತ್ರಿ ಮೀಡಿಯಾ
ಮದ್ದೂರು: ಶ್ರೀ ಮದ್ದೂರಮ್ಮನವರ ಜಾತ್ರೆ ಹಾಗೂ ಹಬ್ಬದ ಪ್ರಯುಕ್ತ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ (ರಿ.) ವತಿಯಿಂದ ಇದೇ ಮೊದಲ ಬಾರಿಗೆ ಪ್ರಾಯೋಗಿಕವಾಗಿ ಆಯೋಜಿಸಲಾಗುತ್ತಿರುವ ಮದ್ದೂರು ಉತ್ಸವ - 2026 ಏಪ್ರಿಲ್ 25 ರಿಂದ ಮೇ 06 ರವರೆಗೆ ಅದ್ದೂರಿಯಾಗಿ ನಡೆಯಲಿದೆ. ಮದ್ದೂರು ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿಯನ್ನು ತಿಳಿಸಲಾಯಿತು.

🚩 ಉತ್ಸವದ ಚಾಲನೆ: ಮ್ಯಾರಥಾನ್ ಮೂಲಕ

ಏಪ್ರಿಲ್ 25ರಂದು ಮದ್ದೂರು ನಗರದ ಟಿ.ಬಿ. ಸರ್ಕಲ್‌ನ ಪ್ರವಾಸಿ ಮಂದಿರದಿಂದ ಶಿವಪುರದ ಸತ್ಯಾಗ್ರಹ ಸೌಧದವರೆಗೆ ನಡೆ ಮ್ಯಾರಥಾನ್ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಗುವುದು.

🐂 ರಾಸುಗಳ ಜಾತ್ರೆ (ಏಪ್ರಿಲ್ 25 – 30)

ಉತ್ತಮ ರಾಸುಗಳನ್ನು ಆಯ್ಕೆ ಮಾಡಿ ಚಾಂಪಿಯನ್‌ಗಳಿಗೆ ನಗದು ಬಹುಮಾನಗಳನ್ನು ನೀಡಲಾಗುವುದು:

  • ಪ್ರಥಮ ಬಹುಮಾನ: ₹2 ಲಕ್ಷ
  • ದ್ವಿತೀಯ ಬಹುಮಾನ: ₹1 ಲಕ್ಷ
  • ತೃತೀಯ ಬಹುಮಾನ: ₹50 ಸಾವಿರ
  • 10 ರಾಸುಗಳಿಗೆ ಪ್ರೋತ್ಸಾಹ ಬಹುಮಾನ: ₹10 ಸಾವಿರ

ಜಾತ್ರೆಯಲ್ಲಿ ಭಾಗವಹಿಸುವ ಟಗರುಗಳಿಗೆ ಕ್ರಮವಾಗಿ ₹10 ಸಾವಿರ ಮತ್ತು ₹5 ಸಾವಿರ ನಗದು ಬಹುಮಾನ ನೀಡಲಾಗುತ್ತದೆ.

ಏಪ್ರಿಲ್ 30ರಂದು ವಿಜೇತ ರಾಸುಗಳ ಮೆರವಣಿಗೆ ನಡೆಸಿ, ಮದ್ದೂರು ಪ್ರವಾಸಿ ಮಂದಿರದಿಂದ ಶ್ರೀ ಉಗ್ರ ನರಸಿಂಹಸ್ವಾಮಿ ದೇವಾಲಯದವರೆಗೆ ಕರೆತಂದು ಬಹುಮಾನ ವಿತರಣೆ ಮಾಡಲಾಗುತ್ತದೆ.

ನೊಂದಣಿ: ಶಿವಪುರದ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ರೈತರು ಹೆಸರು ನೊಂದಾಯಿಸಿಕೊಳ್ಳಬಹುದು.

🏐 ಕ್ರೀಡಾ ಸ್ಪರ್ಧೆಗಳು (ಏಪ್ರಿಲ್ 28 & 29)

18 ವರ್ಷ ಮೇಲ್ಪಟ್ಟ ಯುವಕ-ಯುವತಿಯರಿಗಾಗಿ ಕಬಡ್ಡಿ ಮತ್ತು ವಾಲಿಬಾಲ್ ಪಂದ್ಯಾವಳಿ ಆಯೋಜಿಸಲಾಗಿದೆ.
ಸ್ಥಳ: ತಾಲೂಕು ಕ್ರೀಡಾಂಗಣ ಹಾಗೂ ಜೂನಿಯರ್ ಕಾಲೇಜು ಆವರಣ

  • ಪ್ರಥಮ: ₹50 ಸಾವಿರ
  • ದ್ವಿತೀಯ: ₹25 ಸಾವಿರ
  • ತೃತೀಯ: ₹10 ಸಾವಿರ
  • ಪ್ರೋತ್ಸಾಹ ಬಹುಮಾನ: ₹10 ಸಾವಿರ

ನೊಂದಣಿ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಹೆಸರು ನೊಂದಾಯಿಸಿಕೊಳ್ಳಬಹುದು.

🎨 ರಂಗೋಲಿ ಸ್ಪರ್ಧೆ (ಮೇ 1–4)

ಮದ್ದೂರು ನಗರದ ಮಹಿಳೆಯರಿಗಾಗಿ ವಾರ್ಡ್ ಮಟ್ಟದಲ್ಲಿ ರಂಗೋಲಿ ಸ್ಪರ್ಧೆ ನಡೆಯಲಿದೆ. ವಿಜೇತರಿಗೆ ಮಿಕ್ಸಿ, ಕುಕ್ಕರ್, ಬಿಸಿ ನೀರಿನ ಜಗ್ಗು ಮುಂತಾದ ಬಹುಮಾನಗಳು. ಫೈನಲ್‌ನಲ್ಲಿ ವಾಷಿಂಗ್ ಮೆಷಿನ್, ಫ್ರಿಜ್, ಗ್ರೈಂಡರ್ ಸೇರಿದಂತೆ ವಿಶೇಷ ಬಹುಮಾನಗಳು ನೀಡಲಾಗುತ್ತದೆ.

🎤 ಸಂಗೀತ ಸಂಜೆ (ಮೇ 6) – ಕೊಂಡೋತ್ಸವದ ಸಂಭ್ರಮ

ಶ್ರೀ ಮದ್ದೂರಮ್ಮನವರ ಕೊಂಡೋತ್ಸವ ದಿನ ಸಂಜೆ ತಾಲೂಕು ಕ್ರೀಡಾಂಗಣದಲ್ಲಿ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ. ಖ್ಯಾತ ಕಲಾವಿದರು:

  • 🎵 ಚಂದನ್ ಶೆಟ್ಟಿ
  • 🎵 ನವೀನ್ ಸಜ್ಜು ತಂಡ
  • 🎭 ಚಿತ್ರನಟರಾದ ವಿ. ರವಿಚಂದ್ರನ್, ಸಾಧುಕೋಕಿಲಾ, ಗಣೇಶ್ ಸೇರಿದಂತೆ ಹಲವರು ಗಣ್ಯರು ಭಾಗವಹಿಸಲಿದ್ದಾರೆ.

🎁 ವಿಶೇಷ ಕಾರ್ಯಕ್ರಮ: ಉಚಿತ ಲ್ಯಾಪ್‌ಟಾಪ್ ವಿತರಣೆ

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಮ್ಮ ಟ್ರಸ್ಟ್ ಮೂಲಕ ಉಚಿತ ಲ್ಯಾಪ್ ಟ್ಯಾಪ್ ವಿತರಣೆ ಹಾಗೂ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ಪ್ರದಾನ ಮಾಡಲಾಗುವುದು.

ಸುದ್ದಿಗೋಷ್ಠಿಯಲ್ಲಿ ನಗರಸಭಾ ಮಾಜಿ ಅಧ್ಯಕ್ಷೆ ಕೋಕಿಲಾ ಅರುಣ್, ಮಾಜಿ ಉಪಾಧ್ಯಕ್ಷ ಟಿ.ಆರ್. ಪ್ರಸನ್ನಕುಮಾರ್, ಮಾಜಿ ಸದಸ್ಯರಾದ ಎಂ.ಬಿ. ಸಚಿನ್, ಸರ್ವಮಂಗಳಾ, ಸಿದ್ದರಾಜು, ಕಾಂಗ್ರೆಸ್ ಮಹಿಳಾ ಘಟಕ ಅಧ್ಯಕ್ಷೆ ಮಮತಾ ಶಂಕರೇಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ. ಸಂದರ್ಶ, ಮನ್ಮುಲ್ ನಿರ್ದೇಶಕ ಹರೀಶ್ ಬಾಬು ಹಾಗೂ ಇತರ ಮುಖಂಡರು ಉಪಸ್ಥಿತರಿದ್ದರು. ಈ ಮಹತ್ವದ ಉತ್ಸವಕ್ಕೆ ಎಲ್ಲರ ಸಹಕಾರ ಬೇಸಿದೆ ಎಂದು ಆಯೋಜಕರು ತಿಳಿಸಿದ್ದಾರೆ.

© 2026 ಶ್ರೀ ಧಾತ್ರಿ ಮೀಡಿಯಾ ಅಂಡ್ ನೆಟ್‌ವರ್ಕ್. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
ಮಾಹಿತಿ: ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ಮತ್ತು ಸುದ್ದಿಗೋಷ್ಠಿ ಪ್ರಕಟಣೆ.

Post a Comment

Previous Post Next Post