Top News

ನಂದಿ ಬೆಟ್ಟದ ಸುತ್ತ ಭಕ್ತಿಪೂರ್ಣ ನಡಿಗೆ: ಚೈತ್ರ ಹುಣ್ಣಿಮೆಯಂದು ಸಾವಿರಾರು ಶಿವಭಕ್ತರಿಂದ ಗಿರಿ ಪ್ರದಕ್ಷಿಣೆ




 ಚಿಕ್ಕಬಳ್ಳಾಪುರ : ಚೈತ್ರ ಮಾಸದ ಹುಣ್ಣಿಮೆಯಂದು ನಂದಿ ಬೆಟ್ಟದ ಸುತ್ತಲೂ ಭಕ್ತಿಪೂರ್ಣ ನಡಿಗೆ (ಗಿರಿ ಪ್ರದಕ್ಷಿಣೆ) ನಡೆಯಿತು. ಸಾವಿರಾರು ಶಿವಭಕ್ತರು ಶಿವನಾಮ ಸ್ಮರಣೆಯೊಂದಿಗೆ ಬೆಟ್ಟದ ಸುತ್ತಲೂ ಹೆಜ್ಜೆ ಹಾಕಿದರು. ಈ ದೈವಿಕ ಪಾದಯಾತ್ರೆಯನ್ನು ತಿರುವಣ್ಣಾಮಲೈನಂತೆಯೇ ವೈಭವದಿಂದ ಆಚರಿಸಲಾಯಿತು.


ಹುಣ್ಣಿಮೆಯ ಈ ವಿಶೇಷ ದಿನದಂದು, ಚಿಕ್ಕಬಳ್ಳಾಪುರ ಸಂಸದ ಡಾ. ಕೆ. ಸುಧಾಕರ್ ಅವರ ಪತ್ನಿ ಶ್ರೀಮತಿ ಪ್ರೀತಿ ಸುಧಾಕರ್ ಮತ್ತು ತಂದೆ ಕೇಶವರೆಡ್ಡಿ ಅವರು ಸಾವಿರಾರು ಭಕ್ತರೊಂದಿಗೆ ನಂದಿ ಗಿರಿ ಪ್ರದಕ್ಷಿಣೆಯಲ್ಲಿ ಭಾಗವಹಿಸಿದ್ದರು.

ಸಂಸತ್ ಅಧಿವೇಶನದ ಕರ್ತವ್ಯದ ನಿಮಿತ್ತ ದೆಹಲಿಯಲ್ಲಿರುವ ಸಂಸದ ಡಾ. ಸುಧಾಕರ್ ಅವರು, “ನನ್ನ ಮನಸ್ಸು ಆ ದೈವಿಕ ಪಾದಯಾತ್ರೆಯಲ್ಲೇ ಇತ್ತು. ನನ್ನ ಅನುಪಸ್ಥಿತಿಯಲ್ಲಿ ಈ ತಿಂಗಳ ‘ನಂದಿ ಗಿರಿ ಪ್ರದಕ್ಷಿಣೆ’ಯನ್ನು ಯಶಸ್ವಿಗೊಳಿಸಿದ ಎಲ್ಲ ಮುಖಂಡರು, ಕಾರ್ಯಕರ್ತರು ಮತ್ತು ಶ್ರದ್ಧಾಳು ಶಿವಭಕ್ತರಿಗೆ ಅನಂತ ವಂದನೆಗಳು. ಶಿವಧ್ಯಾನದಲ್ಲಿ ಹೆಜ್ಜೆ ಹಾಕಿದ ಪ್ರತಿ ಭಕ್ತನಿಗೂ ಪರಶಿವನು ಮಂಗಳವನ್ನುಂಟು ಮಾಡಲಿ” ಎಂದು ಹೇಳಿದ್ದಾರೆ.

ಪ್ರತಿ ಹುಣ್ಣಿಮೆಯಂದು ನಂದಿ ಬೆಟ್ಟದ ಸುತ್ತ ಪ್ರದಕ್ಷಿಣೆ ನಡೆಸುವುದು ಇಲ್ಲಿನ ಸಂಪ್ರದಾಯವಾಗಿದೆ. ಚೈತ್ರ ಮಾಸದ ಹುಣ್ಣಿಮೆಯನ್ನು ಹಾಲಿನ ಬೆಳದಿಂಗಳೆಂದು ಕರೆಯಲಾಗುತ್ತದೆ. ಈ ಸಂದರ್ಭದಲ್ಲಿ ನಡೆದ ಗಿರಿ ಪ್ರದಕ್ಷಿಣೆಗೆ ವಿಶೇಷ ಮಹತ್ವವಿದೆ ಎಂದು ಭಕ್ತರು ತಿಳಿಸಿದ್ದಾರೆ.

Post a Comment

Previous Post Next Post