Top News

"ರೈತರ ಬೆವರಿಗೆ ಬೆಲೆ ಕೊಟ್ಟ ಪೊಲೀಸರು" – ಚಿತ್ರದುರ್ಗದಲ್ಲಿ ಧಾನ್ಯ ಕಳ್ಳತನ ಪ್ರಕರಣದ ಯಶಸ್ವಿ ಕಾರ್ಯಾಚರಣೆ

ಚಿತ್ರದುರ್ಗ ಪೊಲೀಸರ ಯಶಸ್ವಿ ಕಾರ್ಯಾಚರಣೆ: ರೈತರ ಧಾನ್ಯ ಕಳ್ಳತನ ಪ್ರಕರಣದಲ್ಲಿ ಆರೋಪಿಗಳ ಬಂಧನ

ಚಿತ್ರದುರ್ಗ ವಾರ್ತೆ

ಸತ್ಯ, ಸಂಯಮ, ಸೇವೆ | ಸಂಚಿಕೆ: ೨೦೨೬, ಏಪ್ರಿಲ್ ೨೧

ಚಿತ್ರದುರ್ಗ ಗ್ರಾಮಾಂತರ ಪೊಲೀಸರಿಂದ ರೈತರ ಜಮೀನುಗಳಲ್ಲಿ ಧವಸ ಧಾನ್ಯಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಗಳ ಬಂಧನ
₹೧.೩೬ ಲಕ್ಷ ಮೌಲ್ಯದ ಕಡಲೆ ಮತ್ತು ಜೋಳದ ಚೀಲಗಳ ಜೊತೆಗೆ ₹೧.೩೦ ಲಕ್ಷ ನಗದು ವಶಕ್ಕೆ

ಚಿತ್ರದುರ್ಗ: ಜಿಲ್ಲೆಯ ಚಿತ್ರದುರ್ಗ ಹೊರವಲಯದ ಗ್ರಾಮಗಳಲ್ಲಿ ರೈತರು ತಮ್ಣ ಜಮೀನುಗಳಲ್ಲಿ ಬೆಳೆದು ಕಟಾವು ಮಾಡಿದ ಜೋಳ, ಕಡಲೆ ಮುಂತಾದ ಧವಸ ಧಾನ್ಯಗಳನ್ನು ಕಳ್ಳತನ ಮಾಡುತ್ತಿದ್ದ ಪ್ರಕರಣವನ್ನು ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯವರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಈ ಸಂಬಂಧ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೊ.ನಂ:197/2024 (ಕಲಂ: 379 IPC) ಮತ್ತು ಮೊ.ನಂ:246/2024 (ಕಲಂ: 379 IPC) ರೀತ್ಯಾ ಪ್ರಕರಣಗಳು ದಾಖಲಾಗಿದ್ದವು. ದೀರ್ಘಕಾಲದಿಂದ ನಡೆಯುತ್ತಿದ್ದ ಈ ಕಳ್ಳತನ ಪ್ರಕರಣದ ಆರೋಪಿಗಳ ಪತ್ತೆಗೆ ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ರಂಜಿತ್ ಕುಮಾರ್ ಬಂಡಾರು (ಐಪಿಎಸ್) ರವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.

🔍 ಶ್ರೀ ಶಿವಕುಮಾರ್ (ಹೆಚ್ಚುವರಿ ಪೊಲೀಸ್ ಅಧೀಕ್ಷಕರು) ಮತ್ತು ಶ್ರೀ ಅರುಣಗೌಡ (ಪೊಲೀಸ್ ಉಪಾಧೀಕ್ಷಕರು, ಚಿತ್ರದುರ್ಗ ಉಪವಿಭಾಗ) ರವರ ನಿರ್ದೇಶನದಂತೆ ತನಿಖೆ ತೀವ್ರಗೊಳಿಸಲಾಯಿತು.

ಶ್ರೀ ಬಾಲಚಂದ್ರ ನಾಯ್ಕ (ಪೊಲೀಸ್ ಇನ್ಸ್‌ಪೆಕ್ಟರ್, ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆ) ನೇತೃತ್ವದ ತಂಡದಲ್ಲಿ ಪಿಎಸ್ಐ ಶ್ರೀ ಸುರೇಶ್, ಹಾಗೂ ಸಿಪಿಸಿಗಳಾದ ಉಮೇಶ್, ತಿಮ್ಮಪ್ಪ, ನಾಗರಾಜ ನಾಯ್ಕ ರವರುಗಳು ಗುಪ್ತ ಮಾಹಿತಿ ಸಂಗ್ರಹಿಸಿ ತನಿಖೆ ಕೈಗೊಂಡಿದ್ದರು.

ದಿನಾಂಕ: ಏಪ್ರಿಲ್ ೨೦, ೨೦೨೬ ರಂದು ಬೆಳಿಗ್ಗೆ ೧೧.೪೫ ಗಂಟೆಗೆ ಚಿತ್ರದುರ್ಗ ತಾಲ್ಲೂಕಿನ ಹಾಯ್ಕಲ್ ಗೊಲ್ಲರಹಟ್ಟಿ ಗ್ರಾಮದ ಬಸ್ ನಿಲ್ದಾಣದ ಬಳಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಮೂವರನ್ನು ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ವಿಚಾರಣೆಯ ವೇಳೆ, ಆರೋಪಿಗಳು ತಾವು ದೊಡ್ಡ ಸಿದ್ದವ್ವನಹಳ್ಳಿ ಗ್ರಾಮದ ಮಲ್ಲಿಕಾರ್ಜುನ ಎಂಬ ರೈತರ ಜಮೀನಿನಲ್ಲಿ ಕಳ್ಳತನ ಮಾಡಿದ್ದುದಾಗಿ ಒಪ್ಪಿಕೊಂಡಿದ್ದಾರೆ.

👤 ಬಂಧಿತ ಆರೋಪಿಗಳ ವಿವರ:
1. ಶಿವಲಿಂಗಪ್ಪ (ತಂದೆ: ಸ್ವ. ನಾಗಪ್ಪ), ವಯಸ್ಸು ೫೫, ಜಿರಾಯಿತಿ ಕೆಲಸ
2. ಹಾಲೇಶ (ತಂದೆ: ಮಹಾಲಿಂಗಪ್ಪ), ವಯಸ್ಸು ೨೨, ಕೂಲಿ ಕೆಲಸ
3. ಪ್ರಹ್ಲಾದ್ ಉರ್ಫ್ ಪಾಲ (ತಂದೆ: ಕಾಟಪ್ಪ), ವಯಸ್ಸು ೩೫, ಪೆಟ್ರೋಲ್ ಬಂಕ್ ನೌಕರ
(ಮೂವರೂ ಹಾಯ್ಕಲ್ ಗೊಲ್ಲರಹಟ್ಟಿ ಗ್ರಾಮ, ಚಿತ್ರದುರ್ಗ ತಾಲ್ಲೂಕಿನವರು)

ಆರೋಪಿಗಳಿಂದ ₹೧,೩೬,೨೦೦/- ಮೌಲ್ಯದ ಧವಸ ಧಾನ್ಯಗಳನ್ನು ವಶಕ್ಕೆ ಪಡೆಯಲಾಗಿದೆ. ಅವುಗಳಲ್ಲಿ ಸುಮಾರು ₹೭೦,೨೦೦/- ಬೆಲೆ ಬಾಳುವ ೧,೦೮೦ ಕೆಜಿ (೧೮ ಚೀಲ) ಕಡಲೆ ಕಾಳು, ಹಾಗೂ ₹೬೬,೦೦೦/- ಬೆಲೆ ಬಾಳುವ ೧೬.೫ ಕ್ವಿಂಟಾಲ್ (೩೩ ಚೀಲ) ಜೋಳ ಸೇರಿವೆ. ಜೊತೆಗೆ, ಆರೋಪಿಗಳಿಂದ ₹೧,೩೦,೦೦೦/- ನಗದು ಹಣವನ್ನೂ ವಶಕ್ಕೆ ಪಡೆಯಲಾಗಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಶ್ರೀ ರಂಜಿತ್ ಕುಮಾರ್ ಬಂಡಾರು, ಐಪಿಎಸ್ ರವರು ಸಾರ್ವಜನಿಕವಾಗಿ ಶ್ಲಾಘಿಸಿದ್ದಾರೆ. ರೈತರ ಬೆಳೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ತ್ವರಿತವಾಗಿ ಕಾರ್ಯನಿರ್ವಹಿಸಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

Post a Comment

Previous Post Next Post