ನವದೆಹಲಿ / ಬೆಂಗಳೂರು (ಏಪ್ರಿಲ್ 3, 2026): ಸರ್ಕಾರದ ಈ ತೆರಿಗೆ ನಿರ್ಧಾರವನ್ನು "ಹಿಂದಿನ ಹೆಜ್ಜೆ" ಎಂದು ಕೇಂದ್ರ ಸಚಿವರು ಬಣ್ಣಿಸಿದ್ದಾರೆ. ಮಧ್ಯಮ ವರ್ಗ, ಪರಿಸರ ಮತ್ತು ಅಭಿವೃದ್ಧಿ ವಿರೋಧಿ ಕಾಂಗ್ರೆಸ್ನ ನಿಜವಾದ ಮುಖ ಇದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ
ದೇಶವು ಸ್ವಚ್ಛ ಇಂಧನ ಮತ್ತು ಎಲೆಕ್ಟ್ರಿಕ್ ಮೊಬಿಲಿಟಿ ಕಡೆಗೆ ವೇಗವಾಗಿ ಸಾಗುತ್ತಿರುವ ಸಂದರ್ಭದಲ್ಲಿ, ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರ ಎಲೆಕ್ಟ್ರಿಕ್ ವಾಹನಗಳ (ಇವಿ) ಮೇಲೆ ಹೊಸ ಜೀವಮಾನ ತೆರಿಗೆ ವಿಧಿಸಿ, ಪ್ರಗತಿಪರ ನೀತಿಗೆ ಧಕ್ಕೆ ತಂದಿದೆ ಎಂದು ಕೇಂದ್ರ ಆಹಾರ ಮತ್ತು ಸಚಿವ ಪ್ರಹ್ಲಾದ್ ಜೋಷಿ ತೀವ್ರ ಟೀಕೆ ಮಾಡಿದ್ದಾರೆ.
ಏನಿದು ಹೊಸ ತೆರಿಗೆ
ಕರ್ನಾಟಕದ ಇತ್ತೀಚಿನ ಬಜೆಟ್ನಲ್ಲಿ ಪ್ರಸ್ತಾಪಿಸಲಾದ ಈ ನಿಯಮದ ಪ್ರಕಾರ:
· 10 ಲಕ್ಷ ರೂ.ವರೆಗಿನ EV ಕಾರುಗಳು: 5% ಜೀವಮಾನ ತೆರಿಗೆ
· 10–25 ಲಕ್ಷ ರೂ. EV ಕಾರುಗಳು: 8% ತೆರಿಗೆ
· 25 ಲಕ್ಷ ರೂ.ಗಿಂತ ಮೇಲ್ಪಟ್ಟ EV: 10% ತೆರಿಗೆ
· ಎಲೆಕ್ಟ್ರಿಕ್ ಬಸ್ ಮತ್ತು ಜೀಪುಗಳು: ತೆರಿಗೆಯ ವ್ಯಾಪ್ತಿಗೆ
· ಎರಡು ಚಕ್ರದ ವಾಹನಗಳು ಮಾತ್ರ: ಹೊರತಾಗಿವೆ
ಈ ತೆರಿಗೆಯಿಂದ ರಾಜ್ಯ ಸರ್ಕಾರಕ್ಕೆ 250–260 ಕೋಟಿ ರೂ. ಹೆಚ್ಚುವರಿ ಆದಾಯದ ನಿರೀಕ್ಷೆಯಿದೆ
ಪ್ರೋತ್ಸಾಹದ ಬದಲು ತೆರಿಗೆ – ಕಾಂಗ್ರೆಸ್ನ ಅಭಿವೃದ್ಧಿ ವಿರೋಧಿ ಮನೋಭಾವ"
ಕೇಂದ್ರ ಸಚಿವರು ತಮ್ಮ ಹೇಳಿಕೆಯಲ್ಲಿ, "ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರವು EVಗಳಿಗೆ ಸಬ್ಸಿಡಿ, ಚಾರ್ಜಿಂಗ್ ಮೂಲಸೌಕರ್ಯ ಮತ್ತು ಜಿಎಸ್ಟಿಯಲ್ಲಿ ರಿಯಾಯಿತಿ ನೀಡುತ್ತಾ ಮುಂದಡಿ ಇರಿಸಿದೆ. ಆದರೆ ಕಾಂಗ್ರೆಸ್ ಸರ್ಕಾರವೋ, ಮಧ್ಯಮ ವರ್ಗದವರು ಸ್ವಚ್ಛ ವಾಹನ ಖರೀದಿಸಬೇಕೆಂದರೆ ತೆರಿಗೆಯ ಹೊರೆ ಹೆಚ್ಚಿಸಿದೆ."
ಸಚಿವರ ಎಚ್ಚರಿಕೆ: "ಈ ತೆರಿಗೆ ಸ್ವಚ್ಛ ಇಂಧನ ಕನಸನ್ನು ಬಡತನದ ಕಡೆಗೆ ತಳ್ಳುವ ಕೆಲಸ ಮಾಡುತ್ತದೆ. ಕಾಂಗ್ರೆಸ್ ಸರ್ಕಾರವು ತನ್ನ ಖಾತರಿಗಳ ಅನುಷ್ಠಾನಕ್ಕಾಗಿ ಭವಿಷ್ಯದ ತಂತ್ರಜ್ಞಾನದ ಮೇಲೆಯೇ ತೆರಿಗೆ ವಿಧಿಸಿದೆ."ಇತರ ರಾಜ್ಯಗಳಿಗಿಂತ ಕರ್ನಾಟಕ ಹಿಂದೆ
ಮಹಾರಾಷ್ಟ್ರ, ತಮಿಳುನಾಡು, ದೆಹಲಿ, ಗುಜರಾತ್ ಮುಂತಾದ ರಾಜ್ಯಗಳು EVಗಳಿಗೆ ರಿಜಿಸ್ಟ್ರೇಶನ್ ಶುಲ್ಕದಲ್ಲಿ ರಿಯಾಯಿತಿ, ರಸ್ತೆ ತೆರಿಗೆಯಿಂದ ವಿನಾಯಿತಿ ನೀಡುತ್ತಾ ಪ್ರೋತ್ಸಾಹಿಸುತ್ತಿವೆ. ಆದರೆ ಕರ್ನಾಟಕ ಕಾಂಗ್ರೆಸ್ ಸರ್ಕಾರ ಮಾತ್ರ ವಿರುದ್ಧ ದಿಕ್ಕಿನಲ್ಲಿ ಸಾಗಿದೆ.
ಕೇಂದ್ರ ಸಚಿವರು ಪ್ರಶ್ನಿಸಿದ್ದಾರೆ:
· "ಕಾಂಗ್ರೆಸ್ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಎಲೆಕ್ಟ್ರಿಕ್ ವಾಹನಗಳ ಬೆಲೆ ಏರಿಸಿದರೆ ಮಾಲಿನ್ಯ ಕಡಿಮೆಯಾಗುತ್ತದೆಯೇ?"
· "ಇದು ಪರಿಸರ ಪ್ರೇಮಿಯ ಮುಖವೋ
, ಆದಾಯದ ದಾಹವೋ?"
.webp)
Post a Comment