₹7,50,000/-
ಒಟ್ಟು ವಶಪಡಿಸಿಕೊಂಡ ಮೌಲ್ಯ
💍 ₹6,00,000/- ಚಿನ್ನದ ಸರ | 🏍️ ₹1,50,000/- ಬೈಕ್

ತುಮಕೂರು, ಕರ್ನಾಟಕ ನ್ಯೂಸ್ 24 ಲೈವ್ ನ್ಯೂಸ್ ಡೆಸ್ಕ್: ದಿನಾಂಕ 26-05-2026 ರಂದು ಬೆಳಗ್ಗೆ 10:15 ಗಂಟೆಗೆ, ಪಿರ್ಯಾದಿ ಸತ್ಯಲಕ್ಷ್ಮೀ.ಬಿ.ಕೆ ಅವರು ತಮ್ಮ ಮನೆಯ ಬಾಗಿಲು ತೆಗೆಯುತ್ತಿದ್ದಾಗ, ಮಾಸ್ಕ್ ಧರಿಸಿದ ವ್ಯಕ್ತಿಯೊಬ್ಬ ಬಂದು ಅವರ ಕತ್ತಿನಲ್ಲಿದ್ದ ಸುಮಾರು 60 ಗ್ರಾಂ ತೂಕದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ನೆರೆಯವರು ಬೈಕ್ ಮೇಲೆ ಕುಳಿತ ಆರೋಪಿಯ ಷರ್ಟ್ ಹಿಡಿದಾಗ, ಅವರು ತಪ್ಪಿಸಿಕೊಂಡು ತಮ್ಮ ಬಳಿಯಿದ್ದ ಕವರ್ ಅನ್ನು ಬೀಳಿಸಿದ್ದರು. ಆ ಕವರ್ನಲ್ಲಿ "ARMY" ಮತ್ತು KA64R6805 ಎಂಬ ನಂಬರ್ ಪ್ಲೇಟ್ ಇತ್ತು.

ಈ ಸಂಬಂಧ ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಗಂಭೀರತೆಯನ್ನು ಅರಿತ ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಅಶೋಕ್ ಕೆ.ವಿ. ಐ.ಪಿ.ಎಸ್. ರವರು ತನಿಖೆಗೆ ಮಾರ್ಗದರ್ಶನ ನೀಡಿದರು.

⚠️ ಬಂಧಿತ ಆರೋಪಿಗಳ ವಿವರ:

ಆರೋಪಿ 1: ರಾಜು (30 ವರ್ಷ)
ಪಿತೃ ಹೆಸರು: ಲೇ. ತಿಮ್ಮರಾಜು
ವೃತ್ತಿ: ಡೈವರ್
ವಾಸ: ತಿಮ್ಮಸಮುದ್ರಂ ಗ್ರಾಮ, ಕಲ್ಯಾಣದುರ್ಗ ತಾಲ್ಲೂಕು, ಅನಂತಪುರ ಜಿಲ್ಲೆ

ಆರೋಪಿ 2: ಕೊಂಡ ಓಬನ್ನ (48 ವರ್ಷ)
ತಂದೆ ಹೆಸರು: ಲೇ. ಮುತ್ಯಾಲಪ್ಪ
ವೃತ್ತಿ: ಅಂಗಡಿ ವ್ಯಾಪಾರ
ವಾಸ: ಪಂಪನೂರು ಗ್ರಾಮ, ಆತ್ಮಕೂರು ಮಂಡಲ್, ಅನಂತಪುರ ಜಿಲ್ಲೆ

🕵️ ತನಿಖಾ ತಂಡದ ಕಾರ್ಯಾಚರಣೆ:

• ಮಾನ್ಯ ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಶೋಕ್ ಕೆ.ವಿ. ಐ.ಪಿ.ಎಸ್. ರವರ ಮಾರ್ಗದರ್ಶನ
• ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಗೋಪಾಲ್ ಕೆ.ಎಸ್.ಪಿ.ಎಸ್ ಮತ್ತು ಪುರುಷೋತ್ತಮ್ ಕೆ.ಎಸ್.ಪಿ.ಎಸ್ ರವರ ನೇತೃತ್ವ
• ಮಧುಗಿರಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಮಂಜುನಾಥ್ ಜಿ ರವರ ಮಾರ್ಗಸೂಚನೆ
• ಮಧುಗಿರಿ ವೃತ್ತದ ಸಿಪಿಐ ಹನುಮಂತರಾಯಪ್ಪ ಹೆಚ್.ಜಿ ರವರ ನೇತೃತ್ವದಲ್ಲಿ ತಂಡ ರಚನೆ

👮‍♂️ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು:

ಪಿಎಸ್ಐ ಗಳು:
• ಚಂದ್ರಶೇಖರ್ – ಮಧುಗಿರಿ ಪೊಲೀಸ್ ಠಾಣೆ
• ರಾಜೇಶ್ ಆರ್ – ಕೊಡಿಗೇನಹಳ್ಳಿ ಠಾಣೆ
• ರವೀಂದ್ರ ಪಿ.ಲಕೋಲೆ – ಮಿಡಿಗೇಶಿ ಪೊಲೀಸ್ ಠಾಣೆ

ಸಿಬ್ಬಂದಿಗಳು: ಎಎಸ್ಐ ವಿನೋದ್ ಜಿ.ಪಿ, ಪ್ರಕಾಶ್ ಜಿ.ಆರ್, ಮಲ್ಲಿಕಾರ್ಜುನ, ರಂಗರಾಜು, ಮೋಹನ್ ಎಂ.ಎಲ್, ಮುದ್ದುರಾಜು ವಿ, ರಮೇಶ್, ಮತ್ತು ಜಿಲ್ಲಾ ಪೊಲೀಸ್ ಕಛೇರಿಯ ರಮೇಶ್

💰 ವಶಪಡಿಸಿಕೊಂಡ ವಸ್ತುಗಳು:

• ₹6,00,000/- ಮೌಲ್ಯದ ಚಿನ್ನದ ಮಾಂಗಲ್ಯ ಸರ
• ₹1,50,000/- ಮೌಲ್ಯದ TVS ಅಪಾಚಿ ದ್ವಿಚಕ್ರ ವಾಹನ (ನಂ: KA-64-R-6805)
• "ARMY" ಬರೆದ ನಂಬರ್ ಪ್ಲೇಟ್ ಸೇರಿದಂತೆ ಇತರೆ ಪುರಾವೆಗಳು

ಕಾರ್ಯಾಚರಣೆಯ ವಿಶೇಷತೆ: ಆರೋಪಿಗಳು ಕೃತ್ಯದ ವೇಳೆ ಮಾಸ್ಕ್ ಧರಿಸಿದ್ದರೂ, ಪಿರ್ಯಾದಿಯ ಸಹಾಯಕ್ಕೆ ಬಂದ ನೆರೆಯವರು ಬೈಕ್ ಮೇಲೆ ಕುಳಿತ ಆರೋಪಿಯ ಷರ್ಟ್ ಹಿಡಿಯಲು ಪ್ರಯತ್ನಿಸಿದಾಗ ಆರೋಪಿಗಳು ತಪ್ಪಿಸಿಕೊಂಡು ತಮ್ಮ ಬಳಿಯಿದ್ದ ಕವರ್ ಅನ್ನು ಬೀಳಿಸಿದ್ದರು. ಆ ಕವರ್ನಲ್ಲಿದ್ದ ನಂಬರ್ ಪ್ಲೇಟ್ ಸಹಾಯದಿಂದ ಪೊಲೀಸರು ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾದರು.

🏅 ಪ್ರಶಂಸೆ:

ತನಿಖಾ ತಂಡದ ಅಧಿಕಾರಿಗಳು ಹಾಗೂ ಸಿಬ್ಬಂದಿಯವರ ಈ ಅದ್ಭುತ ಕಾರ್ಯಾಚರಣೆಯನ್ನು ಮಾನ್ಯ ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಅಶೋಕ್ ಕೆ.ವಿ. ಐ.ಪಿ.ಎಸ್. ರವರು ಪ್ರಶಂಸಿಸಿದ್ದಾರೆ.

ಕರ್ನಾಟಕ ನ್ಯೂಸ್ 24 ಲೈವ್ ನ್ಯೂಸ್ ಡೆಸ್ಕ್: ತುಮಕೂರು ಜಿಲ್ಲಾ ಪೊಲೀಸರು ಕೇವಲ ನಂಬರ್ ಪ್ಲೇಟ್ ಮಾಹಿತಿಯ ಆಧಾರದಲ್ಲಿ ಮಾಸ್ಕ್ ಧರಿಸಿ ಸರಗಳ್ಳತನ ಮಾಡಿದ ಆರೋಪಿಗಳನ್ನು ಪತ್ತೆ ಮಾಡಿರುವುದು ಶ್ಲಾಘನೀಯ. ಪೊಲೀಸರ ತ್ವರಿತ ಕಾರ್ಯಾಚರಣೆ ಮತ್ತು ಸಮರ್ಪಕ ತನಿಖೆಗೆ ಇದು ಮತ್ತೊಂದು ಉದಾಹರಣೆಯಾಗಿದೆ.