ಸಂಚಾರ ಸಲಹೆ: ಕಾಮರಾಜ ರಸ್ತೆಯಲ್ಲಿ ಕಲ್ವರ್ಟ್ ನಿರ್ಮಾಣ – 60 ದಿನಗಳ ಕಾಲ ಮಾರ್ಗಪರಿವರ್ತನೆ
🚫 ವಾಹನ ಸಂಚಾರ ನಿರ್ಬಂಧಿಸಿರುವ ರಸ್ತೆಗಳು
ಕಾಮರಾಜ ರಸ್ತೆಯ ವಿಠೋಬಾ ದೇವಸ್ಥಾನದಿಂದ ನಾಲಾ ರಸ್ತೆಯವರೆಗೆ – ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ಸಂಪೂರ್ಣ ನಿರ್ಬಂಧಿಸಲಾಗಿದೆ.
ಕಾಮರಾಜ ರಸ್ತೆಯ ಕೆ.ಆರ್ ರಸ್ತೆ - ಕಬ್ಬನ್ ರಸ್ತೆ ಜಂಕ್ಷನ್ನಿಂದ ಡಿಕನ್ಸನ್ ಜಂಕ್ಷನ್ ಕಡೆಗೆ – ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ಸಂಪೂರ್ಣ ನಿರ್ಬಂಧಿಸಲಾಗಿದೆ.
🗺️ ನಿರ್ಬಂಧಿಸಲಾದ ಸಂಚಾರಕ್ಕೆ ಪರ್ಯಾಯ ಮಾರ್ಗಗಳು
ಕಮರ್ಷಿಯಲ್ ಸ್ಟ್ರೀಟ್ ಕಡೆಯಿಂದ ಕಾಮರಾಜ ರಸ್ತೆಯ ಮೂಲಕ ಪುಲಕೇಶಿನಗರ ಮತ್ತು ಬಾಣಸವಾಡಿ ಕಡೆಗೆ ಸಂಚರಿಸುವ ಎಲ್ಲಾ ರೀತಿಯ ವಾಹನಗಳು:
✅ ಕಾಮರಾಜ ರಸ್ತೆಯ ವಿಠೋಬಾ ದೇವಸ್ಥಾನದ ಹತ್ತಿರ ಬಲ ತಿರುವು ಪಡೆದು → ವೀರಪಿಳ್ಳೆ ಸ್ಟ್ರೀಟ್ ಮೂಲಕ → ನಾಗಮ್ಮ ದೇವಸ್ಥಾನದ ಹತ್ತಿರ ಎಡ ತಿರುವು ಪಡೆದು → ಸೇಂಟ್ ಜಾನ್ ರಸ್ತೆ ಮೂಲಕ → ಪುಲಕೇಶಿನಗರ ಮತ್ತು ಬಾಣಸವಾಡಿ ಕಡೆಗೆ ಸಂಚರಿಸಬಹುದು.
ಕಬ್ಬನ್ ರಸ್ತೆ ಕಡೆಯಿಂದ ಕಾಮರಾಜ ರಸ್ತೆಯ ಮೂಲಕ ಪುಲಕೇಶಿನಗರ ಮತ್ತು ಬಾಣಸವಾಡಿ ಕಡೆಗೆ ಸಂಚರಿಸುವ ಎಲ್ಲಾ ರೀತಿಯ ವಾಹನಗಳು:
✅ ಕೆ.ಆರ್ ರಸ್ತೆ - ಕಬ್ಬನ್ ರಸ್ತೆ ಜಂಕ್ಷನ್ ಹತ್ತಿರ ಬಲ ತಿರುವು ಪಡೆದು → ಕಬ್ಬನ್ ರಸ್ತೆ ಮೂಲಕ → ಮಣಿಪಾಲ್ ಜಂಕ್ಷನ್ ಹತ್ತಿರ ಎಡ ತಿರುವು ಪಡೆದು → ಡಿಕನ್ಸನ್ ರಸ್ತೆ ಮೂಲಕ ನೇರವಾಗಿ → ಬ್ಲೂ-ಸ್ಟೋನ್ ಹತ್ತಿರ ಬಲ ತಿರುವು ಪಡೆದುಕೊಂಡು → ಸೇಂಟ್ ಜಾನ್ ರಸ್ತೆ ಮೂಲಕ → ಪುಲಕೇಶಿನಗರ ಮತ್ತು ಬಾಣಸವಾಡಿ ಕಡೆಗೆ ಸಂಚರಿಸಬಹುದು.
ಡಿಸ್ಪೆನ್ಸರಿ ರಸ್ತೆ (ಆಲೀಸ್ ಜಂಕ್ಷನ್) ಕಡೆಯಿಂದ ಕಾಮರಾಜ ರಸ್ತೆಯ ಮೂಲಕ ಪುಲಕೇಶಿನಗರ ಮತ್ತು ಬಾಣಸವಾಡಿ ಕಡೆಗೆ ಸಂಚರಿಸುವ ಎಲ್ಲಾ ರೀತಿಯ ವಾಹನಗಳು:
✅ ಡಿಕನ್ಸನ್ ರಸ್ತೆ ಮೂಲಕ ನೇರವಾಗಿ ಚಲಿಸಿ → ಬ್ಲೂ-ಸ್ಟೋನ್ ಹತ್ತಿರ ಎಡ ತಿರುವು ಪಡೆದು → ಸೇಂಟ್ ಜಾನ್ ರಸ್ತೆ ಮೂಲಕ → ಪುಲಕೇಶಿನಗರ ಮತ್ತು ಬಾಣಸವಾಡಿ ಕಡೆಗೆ ಸಂಚರಿಸಬಹುದು.
📢 ಸಾರ್ವಜನಿಕರಿಗೆ ಮನವಿ
ಶಿವಾಜಿನಗರ ಸಂಚಾರ ಪೊಲೀಸ್ ಠಾಣೆಯು ಸಾರ್ವಜನಿಕರು ಮತ್ತು ವಾಹನ ಸವಾರರು ಮೇಲಿನ ಪರ್ಯಾಯ ಮಾರ್ಗಗಳನ್ನು ಬಳಸಿಕೊಳ್ಳುವಂತೆ ಮತ್ತು ನಿರ್ಬಂಧಿತ ರಸ್ತೆಗಳಲ್ಲಿ ಪ್ರವೇಶಿಸದಂತೆ ವಿನಂತಿಸಿದೆ. ಕಾಮಗಾರಿ ಅವಧಿಯಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಂಚಾರ ಸಿಬ್ಬಂದಿಯ ಸೂಚನೆಗಳನ್ನು ಪಾಲಿಸಬೇಕಾಗಿ ಕೋರಲಾಗಿದೆ.
ಪ್ರಮುಖ ಸೂಚನೆ: ಈ ಸಂಚಾರ ಮಾರ್ಪಾಡು 24-05-2026 ರಂದು ಪ್ರಾರಂಭವಾಗಿ ಮುಂದಿನ 60 ದಿನಗಳವರೆಗೆ ಜಾರಿಯಲ್ಲಿರುತ್ತದೆ. ಕಾಮಗಾರಿ ಪೂರ್ಣಗೊಂಡ ನಂತರ ಸಂಚಾರವನ್ನು ಮತ್ತೆ ಹಿಂದಿನ ಸ್ಥಿತಿಗೆ ತರಲಾಗುವುದು.
📖 ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು: ನೈಸರ್ಗಿಕ ಉತ್ತರಾಧಿಕಾರಿಗಳ ಹೊರಗಿಡುವಿಕೆ ಮಾತ್ರ ಉಯಿಲನ್ನು ಅಮಾನ್ಯಗೊಳಿಸುವುದಿಲ್ಲ – ಸಂಪೂರ್ಣ ಸುದ್ದಿ ಓದಿರಿ:
📚 ಇದನ್ನು ಓದಿ⇒ ‘ಶಂಕಾಸ್ಪದ ಸಂದರ್ಭಗಳಿಲ್ಲದೆ ನೈಸರ್ಗಿಕ ಉತ್ತರಾಧಿಕಾರಿಗಳನ್ನು ಹೊರಗಿಡಬಹುದು’ – Daksha Legal SC 102 ತೀರ್ಪಿನ ಪೂರ್ಣ ವರದಿ
✉️ ಸುದ್ದಿ ಮತ್ತು ಸಲಹೆಗಳನ್ನು ನಮಗೆ ತಿಳಿಸಿ: karnatakanews24live@gmail.com ಗೆ ಮೇಲ್ ಮಾಡಿ.

Post a Comment