ಬೆಂಗಳೂರು: ಮುಖ್ಯ ಚುನಾವಣಾಧಿಕಾರಿಗಳ ಕಛೇರಿ, ಕರ್ನಾಟಕ ಇವರು ವಿಶೇಷ ಸಮಗ್ರ ಪರಿಷ್ಕರಣೆ (Special Intensive Revision-SIR) ಯನ್ನು ಕೈಗೊಳ್ಳುತ್ತಿದ್ದು, ನಾಗರಿಕರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವುದು, ತಿದ್ದುಪಡಿ ಮಾಡುವುದು ಮತ್ತು ಹೆಸರು ತೆಗೆದುಹಾಕುವಿಕೆಗೆ ಅವಕಾಶ ಕಲ್ಪಿಸಲಾಗಿದೆ.
2026ರ ಅಕ್ಟೋಬರ್ 1 ಅರ್ಹತಾ ದಿನಾಂಕವಾಗಿದ್ದು, 2026ರ ಜೂನ್ 30ರಿಂದ ಜುಲೈ 29ರವರೆಗೆ ಬೂತ್ ಮಟ್ಟದ ಅಧಿಕಾರಿಗಳು (BLO) ಮನೆ-ಮನೆಗೆ ಭೇಟಿ ನೀಡಿ ಎನ್ಯೂಮರೇಷನ್ ಫಾರಂಗಳನ್ನು ವಿತರಿಸುತ್ತಾರೆ ಮತ್ತು ಭರ್ತಿ ಮಾಡಲು ಸಹಾಯ ಮಾಡುತ್ತಾರೆ.
▪️ 2026 ಜೂನ್ 16 ರವರೆಗೆ ಮತದಾರರ ಪಟ್ಟಿಯಲ್ಲಿ ಇರುವ ಎಲ್ಲಾ ಮತದಾರರಿಗೆ ಎನ್ಯೂಮರೇಷನ್ ಫಾರಂಗಳನ್ನು ವಿತರಿಸುತ್ತಾರೆ.
▪️ 2026 ರ ಜೂನ್ 30 ರಿಂದ ಜುಲೈ 29 ರವರೆಗೆ ನಿಮ್ಮ ಮನೆಗಳಿಗೆ ಭೇಟಿ ನೀಡುತ್ತಾರೆ.
▪️ ಎನ್ಯೂಮರೇಷನ್ ಫಾರಂಗಳನ್ನು ದ್ವಿ ಪ್ರತಿಯಲ್ಲಿ ನಿಮಗೆ ಒದಗಿಸಿ, ಫಾರಂನ್ನು ಭರ್ತಿ ಮಾಡಲು ಸಹಾಯ ಮಾಡುತ್ತಾರೆ.
▪️ ನಿಮ್ಮಿಂದ ಭರ್ತಿ ಮಾಡಿದ ಫಾರಂಗಳನ್ನು ಸಂಗ್ರಹಿಸಿ, ಅದಕ್ಕೆ ಸ್ವೀಕೃತಿ ನೀಡುತ್ತಾರೆ.
▪️ ಭಾರತ ದೇಶದ ನಾಗರೀಕರಾಗಿರಬೇಕು.
▪️ ಕನಿಷ್ಠ 18 ವರ್ಷ ವಯಸ್ಸಿರಬೇಕು (ಅಕ್ಟೋಬರ್ 1, 2026ರ ಅರ್ಹತಾ ದಿನಾಂಕದಂದು).
▪️ ಸಂಬಂಧಿತ ವಿಧಾನಸಭಾ ಕ್ಷೇತ್ರದ ಸಾಮಾನ್ಯ ನಿವಾಸಿಯಾಗಿರಬೇಕು.
▪️ ಯಾವುದೇ ಕಾನೂನು ಅಡಿಯಲ್ಲಿ ಅನರ್ಹರಾಗಿರಬಾರದು.
ಈ ಕೆಳಕಂಡ ವಿಧಾನಗಳ ಮೂಲಕ ನೀವು ಪರಿಶೀಲಿಸಬಹುದು:
✅ ಬೂತ್ ಮಟ್ಟದ ಅಧಿಕಾರಿಯ (BLO) ಹತ್ತಿರವಿರುವ ಮತದಾರರ ಪಟ್ಟಿಯಿಂದ.
✅ ECINET ಮೊಬೈಲ್ ಅಪ್ಲಿಕೇಷನ್ ಮೂಲಕ.
✅ voters.eci.gov.in ನಲ್ಲಿ ಲಭ್ಯವಿರುವ ಮತದಾರರ ಪಟ್ಟಿಯ ಮೂಲಕ.
✅ CEO ಕರ್ನಾಟಕ ಮತ್ತು ಸಂಬಂಧಿತ ಜಿಲ್ಲಾ ಚುನಾವಣಾಧಿಕಾರಿಯ ವೆಬ್‌ಸೈಟ್ಗಳ ಮುಖಾಂತರ.
▪️ ನಮೂನೆ 6 – ಹೊಸ ಮತದಾರರ ನೋಂದಣಿ
▪️ ನಮೂನೆ 6ಎ – ಸಾಗರೋತ್ತರ ಮತದಾರರಾಗಿ ನೊಂದಾಯಿಸಲು
▪️ ನಮೂನೆ 7 – ಹೆಸರು ತೆಗೆದುಹಾಕುವಿಕೆ
▪️ ನಮೂನೆ 8 – ನಿವಾಸ ಸ್ಥಳ ಬದಲಾವಣೆ/ನಮೂದುಗಳ ತಿದ್ದುಪಡಿ/ಎಪಿಕ್ ಬದಲಾವಣೆ
ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲದಿದ್ದರೆ, ನಮೂನೆ 6 ರನ್ನು ಭರ್ತಿ ಮಾಡಿ, ಘೋಷಣಾ ಫಾರಂ ಜೊತೆಗೆ ಬೂತ್ ಮಟ್ಟದ ಅಧಿಕಾರಿ (BLO) ಗೆ ಸಲ್ಲಿಸಬಹುದು ಅಥವಾ voters.eci.gov.in ಅಥವಾ ECINET ಮೊಬೈಲ್ ಆ್ಯಪ್ ಮೂಲಕವೂ ಸಲ್ಲಿಸಬಹುದು.
ಪ್ರಜಾ ಪ್ರತಿನಿಧಿ ಕಾಯ್ದೆ, 1950 ರ ಕಲಂ 24 ರ ಅನ್ವಯ, ಚುನಾವಣಾ ನೋಂದಣಾಧಿಕಾರಿ (ERO) ಅವರ ಯಾವುದೇ ನಿರ್ಧಾರದ ವಿರುದ್ಧ ಜಿಲ್ಲಾ ದಂಡಾಧಿಕಾರಿ / ಜಿಲ್ಲಾ ಚುನಾವಣಾಧಿಕಾರಿ ಅವರ ಮುಂದೆ ಮೇಲ್ಮನವಿ ಸಲ್ಲಿಸಬಹುದಾಗಿದೆ.
🌐 https://www.ceo.karnataka.gov.in
🌐 https://voters.eci.gov.in
📞 1950 (ಟೋಲ್ ಫ್ರೀ)
📱 ECINET ಮೊಬೈಲ್ ಅಪ್ಲಿಕೇಷನ್ (App Store / Google Play ನಲ್ಲಿ ಲಭ್ಯ)
*ಪ್ರಜಾಪ್ರಭುತ್ವದ ಭದ್ರ ಅಡಿಪಾಯವಾದ SIRನ ಭಾಗವಾಗಿರಿ – ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿದೆಯೇ ಎಂದು ಖಚಿತಪಡಿಸಿಕೊಳ್ಳಿ.*

Post a Comment