▪️ ಸ್ಥಳ: ಆವಣಿ ಗ್ರಾಮ, ಮುಳಬಾಗಿಲು ತಾಲ್ಲೂಕು, ಕೋಲಾರ ಜಿಲ್ಲೆ
▪️ ಬಾಧಿತೆ: ಶ್ರೀಮತಿ ಪಾಪಮ್ಮ (75), ಕೋಂ ಲೇಟ್ ಜಯರಾಮಪ್ಪ
▪️ ಘಟನಾ ದಿನಾಂಕ: 22-06-2026 (ಸಂಜೆ)
▪️ ಪ್ರಕರಣ ಸಂಖ್ಯೆ: 188/2026, ಕಲಂ 309(4) GSS
▪️ ವಶಪಡಿಸಿದ ಆಭರಣ ಮೌಲ್ಯ: ₹90,000
▪️ ಬಂಧಿತ ಆರೋಪಿ: ಶ್ರೀಧರ.ಕೆ – ರೆಡ್ಡಿಪಲ್ಲಿ, ನಲ್ಲಮಾಡ ಮಂಡಲಂ, ಕದಿರಿ ತಾಲ್ಲೂಕು, ಸತ್ಯಸಾಯಿ ಜಿಲ್ಲೆ, ಆಂಧ್ರಪ್ರದೇಶ
ಕೋಲಾರ: ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಆವಣಿ ಗ್ರಾಮದಲ್ಲಿ ವಾಸಿಸುತ್ತಿದ್ದ ಸುಮಾರು 75 ವರ್ಷದ ಹಿರಿಯ ಮಹಿಳೆ ಶ್ರೀಮತಿ ಪಾಪಮ್ಮ ಅವರು ತಮ್ಮ ಮನೆಯಲ್ಲಿ ಒಬ್ಬಳೇ ವಾಸವಾಗಿದ್ದರು. ದಿನಾಂಕ 22-06-2026 ರಂದು ಸಂಜೆ ಕರೆಂಟ್ ಹೋಗಿದ್ದ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಮನೆಗೆ ಬಂದು ನೀರು ಕೇಳಿ ಕುಡಿದು, ತಕ್ಷಣವೇ ಪಾಪಮ್ಮ ಅವರನ್ನು ತಳ್ಳಿ ಮನೆಯ ಬಾಗಿಲು ಹಾಕಿ ಅವರ ಕುತ್ತಿಗೆಯಲ್ಲಿದ್ದ ಕರಿಮಣಿ ಸರ ಹಾಗೂ ಎರಡೂ ಕಿವಿಯಲ್ಲಿದ್ದ ಬಂಗಾರದ ಓಲೆಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದನು.
ಈ ಘಟನೆಗೆ ಸಂಬಂಧಿಸಿದಂತೆ ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 188/2026, ಕಲಂ 309(4) GSS ಅಡಿಯಲ್ಲಿ ತನಿಖೆ ಆರಂಭಿಸಲಾಯಿತು.
ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಕನ್ನಿಕಾ ಸಿಕ್ರಿವಾಲ್, IPS ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಹೆಚ್ಚುವರಿ ಅಧೀಕ್ಷಕರಾದ ಶ್ರೀ ರವಿಶಂಕರ್ ಹಾಗೂ ಶ್ರೀ ಜಗದೀಶ್ ರವರ ಮಾರ್ಗದರ್ಶನದಲ್ಲಿ ಮತ್ತು ಕುಮಾರಿ ಮನಿಷಾ, IPS (ಸಹಾಯಕ ಪೊಲೀಸ್ ಅಧೀಕ್ಷಕರು, ಮುಳಬಾಗಲು ಉಪ ವಿಭಾಗ) ರವರ ನೇತೃತ್ವದಲ್ಲಿ ತಂಡವು ಕಾರ್ಯನಿರ್ವಹಿಸಿತು.
ಶ್ರೀ ಸತೀಶ್ – ಸಿಪಿಐ, ಮುಳಬಾಗಲು ವೃತ್ತ
ಶ್ರೀ ಅರುಣ್ ಗೌಡ ಪಾಟೀಲ್ – ಪಿಎಸ್ಐ, ಮುಳಬಾಗಿಲು ಗ್ರಾಮಾಂತರ ಠಾಣೆ
ಎ.ಎಸ್.ಐ ಮುನಿಸ್ವಾಮಿ, ವೆಂಕಟಾಚಲಪತಿ, ಶಂಕರಪ್ಪ, ಮಂಜುನಾಥರೆಡ್ಡಿ, ಶಂಕರ, ವಿಜಯ್ ಕುಮಾರ್, ಚಂದ್ರಶೇಖರ್, ಮಹಂತೇಶ್ ಪೂಜಾರಿ, ಚಾಲಕ ನಾಗಾರ್ಜುನ
ಈ ತಂಡವು ಶ್ರದ್ಧೆಯಿಂದ ಕಾರ್ಯನಿರ್ವಹಿಸಿ ಆರೋಪಿ ಶ್ರೀಧರ.ಕೆ (ಬಿನ್ ರವಿ), ರೆಡ್ಡಿಪಲ್ಲಿ ಗ್ರಾಮ, ನಲ್ಲಮಾಡ ಮಂಡಲಂ, ಕದಿರಿ ತಾಲ್ಲೂಕು, ಸತ್ಯಸಾಯಿ ಜಿಲ್ಲೆ, ಆಂಧ್ರಪ್ರದೇಶ ನಿವಾಸಿಯನ್ನು ಪತ್ತೆಹಚ್ಚಿ ಬಂಧಿಸಿ ಅವರಿಂದ ಸುಮಾರು ₹90,000 ಮೌಲ್ಯದ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.
"ಹಿರಿಯ ಮಹಿಳೆಯೊಬ್ಬರ ಮೇಲೆ ನಡೆದ ದಾಳಿ ಪ್ರಕರಣವನ್ನು ಕ್ಷಿಪ್ರವಾಗಿ ಪತ್ತೆಹಚ್ಚಿ ಆರೋಪಿಯನ್ನು ಬಂಧಿಸಿ, ಆಭರಣಗಳನ್ನು ವಶಪಡಿಸಿಕೊಂಡ ಮುಳಬಾಗಿಲು ಗ್ರಾಮಾಂತರ ಪೊಲೀಸ್ ತಂಡದ ಕಾರ್ಯವನ್ನು ನಾನು ಮನಃಪೂರ್ವಕವಾಗಿ ಶ್ಲಾಘಿಸುತ್ತೇನೆ. ಸಾರ್ವಜನಿಕರ ಸುರಕ್ಷತೆಗಾಗಿ ಪೊಲೀಸ್ ಇಲಾಖೆಯ ಬದ್ಧತೆ ಮುಂದುವರಿಯುತ್ತದೆ."
👮 "ಅಪರಾಧಿಗಳಿಗೆ ಯಾವುದೇ ರಿಯಾಯತಿ ಇಲ್ಲ – ಕೋಲಾರ ಪೊಲೀಸರ ನಿರಂತರ ಕಣ್ಗಾವಲು"
ಈ ಕಾರ್ಯಾಚರಣೆಯು ಕೋಲಾರ ಜಿಲ್ಲಾ ಪೊಲೀಸ್ ಇಲಾಖೆಯ ಸಮರ್ಥ ಕಾರ್ಯವೈಖರಿಗೆ ಸಾಕ್ಷಿಯಾಗಿದೆ. ಆಂಧ್ರಪ್ರದೇಶದಿಂದ ಆಗಮಿಸಿ ಅಪರಾಧ ಎಸಗಿದ್ದ ಆರೋಪಿಯನ್ನು ಶೀಘ್ರ ಪತ್ತೆಹಚ್ಚಿ ಕಾನೂನು ಕ್ರಮಕ್ಕೆ ಒಳಪಡಿಸಲಾಗಿದೆ. 💐💐💐
"ಹಿರಿಯ ನಾಗರಿಕರ ಸುರಕ್ಷತೆಗೆ ಪೊಲೀಸರ ಬದ್ಧತೆ – ಅಪರಾಧಿಗಳಿಗೆ ಶೀಘ್ರ ಶಿಕ್ಷೆ"
ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು
ಶ್ರೀಮತಿ ಕನ್ನಿಕಾ ಸಿಕ್ರಿವಾಲ್, IPS
*ಹಿರಿಯ ನಾಗರಿಕರ ಸುರಕ್ಷತೆಗಾಗಿ ಕೋಲಾರ ಜಿಲ್ಲಾ ಪೊಲೀಸರ ಸಮಾಜಮುಖಿ ಕಾರ್ಯಾಚರಣೆ.*

Post a Comment