🕉️ ಸನಾತನ ಧರ್ಮ – ಚಂಡಿಕೇಶ್ವರನ ನಿಜಾಂಶ
ಕರ್ನಾಟಕ ನ್ಯೂಸ್ 24 ಲೈವ್
ವೇಗವಾದ ಮಾಹಿತಿ | ಜನರ ವಿಶ್ವಾಸ | ಕನ್ನಡದ ನಿಖರ ಸುದ್ದಿ
ಚಂಡೀಶ್ವರ ಅಥವಾ ಚಂಡಿಕೇಶ್ವರ: ಚಿಟಿಕೆ ಹೊಡೆಯುವುದು ಅಥವಾ ಚಪ್ಪಾಳೆ ತಟ್ಟುವುದು ಏಕೆ? – "ಕಿವುಡು" ಎಂಬ ತಪ್ಪು ಕಲ್ಪನೆಯ ನಿಜಾಂಶ ಇಲ್ಲಿದೆ
ಎಲ್ಲಾ ಶಿವಾಲಯಗಳಲ್ಲಿ ಶಿವ, ಪಾರ್ವತಿ, ವಿನಾಯಕ, ಸುಬ್ರಹ್ಮಣ್ಯ, ನಂದಿ, ಬೃಂಗಿ ಹಾಗೂ ಚಂಡಿಕೇಶ್ವರ ಮೂರ್ತಿಗಳನ್ನು ಕಾಣುವುದು ಸಾಮಾನ್ಯ. ಶಿವಾಲಯಗಳಲ್ಲಿ ಚಂಡಿಕೇಶ್ವರನ ದರ್ಶನಕ್ಕೆ ಬಂದಾಗ ಚಿಟಿಕೆ ಹೊಡೆದು, ಚಪ್ಪಾಳೆ ತಟ್ಟಿ ಚಂಡಿಕೇಶ್ವರನ ದರ್ಶನ ಮಾಡುವುದು ವಾಡಿಕೆ. ಬಹುತೇಕ ಭಕ್ತಾದಿಗಳಿಗೆ ಚಂಡಿಕೇಶ್ವರನಿಗೆ "ಕಿವುಡು" ಎಂಬ ಅಭಿಪ್ರಾಯ. ಆದರೆ ಇದು ತಪ್ಪಾದ ತಿಳುವಳಿಕೆ.
❓ ಈ ಚಂಡಿಕೇಶ್ವರ ಯಾರು?
ದಕ್ಷಿಣ ಭಾರತದ 'ಮಣಿಯಾರ್' ನದಿಯ ತಟದಲ್ಲಿನ ಒಂದು ಅಗ್ರಹಾರ. ವೇದಾಧ್ಯಯನಕ್ಕೆ ಪ್ರಖ್ಯಾತವಾದ ಪ್ರಶಸ್ತ ಪ್ರದೇಶ. ಅಲ್ಲಿ 'ಈಚದತ್ತ' ಎಂಬ ಪ್ರಖ್ಯಾತ ಬ್ರಾಹ್ಮಣ ಪಂಡಿತ ಇದ್ದ. ಅವನ ಮಗ ಚಂದೇಶ ಶರ್ಮ (ಚಂದ್ರೇಶ್ವರ ಶರ್ಮ). ವೇದಾಧ್ಯಯನದಲ್ಲಿ ತಂದೆಯಂತೆ ತಾನೂ ಪಾರಂಗತನು, ಆರಾಧ್ಯ ದೈವವಾದ ಪರಶಿವನ ಮಹಾ ಭಕ್ತ.

🐄 ಗೋವುಗಳ ಪಾಲನೆ ಮತ್ತು ಶಿವಭಕ್ತಿ:
ಒಂದು ದಿನ ನಿತ್ಯಕರ್ಮಗಳನ್ನು ಮುಗಿಸಿ ಹಿಂತಿರುಗುವಾಗ ಒಬ್ಬ ಗೋಪಾಲಕ ತನ್ನ ಗೋವನ್ನು ಹಿಗ್ಗಾ ಮುಗ್ಗ ಹೊಡೆಯುತ್ತಿದ್ದ. ಇದನ್ನು ಕಂಡ ಚಂದೇಶ ಶರ್ಮನಿಗೆ ನೋವಾಯಿತು. ಗೋವು ದೈವ ಸಮಾನವಾದುದು ಎಂದು ತಿಳಿಸಿ, ತಾನೇ ಅದರ ಪಾಲನೆ ಮಾಡುವುದಾಗಿ ಹೇಳಿದ.
ಗೋಪಾಲಕನ ಷರತ್ತುಗಳಿಗೆ ಒಪ್ಪಿದ ಚಂದೇಶ ಶರ್ಮ, ಸಂತೋಷದಿಂದ ಗೋವುಗಳ ಪಾಲನೆಯ ಜೊತೆಗೆ ನದಿಯ ತಟದಲ್ಲಿ ವೇದಾಧ್ಯಯನ ಮುಂದುವರೆಸಿದ. ಚಂದೇಶ ಗೋವುಗಳಿಗೆ ಆಹಾರ ನೀಡಲು ಎಲೆಗಳು, ಗಿಡಗಳನ್ನು ಕತ್ತರಿಸಲು ಸದಾಕಾಲ ತನ್ನಲ್ಲಿ ಕೊಡಲಿಯನ್ನು ಇಟ್ಟುಕೊಳ್ಳುತ್ತಿದ್ದ. (ದೇವಾಲಯಗಳಲ್ಲಿ ಚಂಡಿಕೇಶ್ವರ ಮೂರ್ತಿಯ ಕೈಯಲ್ಲಿ ಕೊಡಲಿ ಇರುವುದನ್ನು ನಾವು ಗಮನಿಸಬಹುದು.)

🕉️ ಮರಳಿನ ಶಿವಲಿಂಗ ಮತ್ತು ಗೋವುಗಳ ಹಾಲಿನ ಅಭಿಷೇಕ:
ಚಂದೇಶ ಶರ್ಮ ಪಕ್ಕದ ನದಿಯಿಂದ ಮರಳು ತಂದು ಅದರಿಂದ ಲಿಂಗಾಕೃತಿಯ ಶಿವಲಿಂಗ ತಯಾರಿಸಿ ಅಭಿಷೇಕ, ಪೂಜಾ ಕೈಂಕರ್ಯಗಳನ್ನು ಮಾಡಿ ವೇದಾಧ್ಯಯನದಲ್ಲಿ ತೊಡಗುತ್ತಿದ್ದ. ಚಂದೇಶನ ಪೋಷಣೆಗೆ ಸಂತೋಷಗೊಂಡ ಗೋವುಗಳು, ಪ್ರೀತಿಯಿಂದ ತಾವಾಗಿಯೇ ಹಾಲು ಸುರಿಸಲು ಪ್ರಾರಂಭಿಸಿದವು. ಗೋವುಗಳು ನೀಡಿದ ಹಾಲನ್ನು ಒಂದು ಮಣ್ಣಿನ ಮಡಕೆಯಲ್ಲಿ ಶೇಖರಿಸಿ ಮರಳಿನಿಂದ ತಯಾರಿಸಿದ ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಿದ್ದ.

⚡ ಅಲ್ಲಿ ನಡೆದದ್ದು ಏನು?
ಮಗನ ಈ ವರ್ತನೆಯಿಂದ ಕೋಪಗೊಂಡ 'ಈಚದತ್ತ' ಮರುದಿನ ಖುದ್ದಾಗಿ ತೆರಳಿದ. ಚಂದೇಶ ಇಹಲೋಕದ ಅರಿವೇ ಇಲ್ಲದೆ ಧ್ಯಾನ ಮಗ್ನನಾಗಿ ಮರಳಿನ ಲಿಂಗಕ್ಕೆ ಹಾಲಿನ ಅಭಿಷೇಕ ಮಾಡುತ್ತಿದ್ದ. ತಂದೆ ಕೂಗಿದ, ಅಲುಗಾಡಿಸಲು ಪ್ರಯತ್ನಿಸಿದ. ಆದರೆ ಧ್ಯಾನದಲ್ಲಿದ್ದ ಚಂದೇಶ ಎಚ್ಚರವಾಗಲಿಲ್ಲ.
ಕೋಪಗೊಂಡ ಈಚದತ್ತ ಅಲ್ಲಿನ ಮಡಕೆಗಳಲ್ಲಿದ್ದ ಹಾಲನ್ನು ತನ್ನ ಕಾಲಿಂದ ಒದೆದನು. ಹಾಲಿನ ಮಡಕೆ ಚೂರುಗಳು ಮರಳಿನ ಲಿಂಗಕ್ಕೆ ತಾಗಿ ಲಿಂಗವು ಭಿನ್ನವಾಯಿತು. ತಕ್ಷಣವೇ ಕಣ್ಣು ತೆರೆದ ಚಂದೇಶ, ತನ್ನ ಬಳಿ ಇದ್ದ ಕೊಡಲಿಯಿಂದ ತಂದೆಯ ಕಾಲುಗಳನ್ನು ಕತ್ತರಿಸಿದ. "ಯಾವ ಕಾಲಿನಿಂದ ಶಿವನ ಧ್ಯಾನವನ್ನು ಭಂಗ ಮಾಡಿ ಶಿವನಿಗೆ ಅಪಚಾರ ಮಾಡಿದೆಯೋ, ಆ ಕಾಲುಗಳಿಗೆ ಇದೇ ತಕ್ಕ ಶಾಸ್ತಿ" ಎಂದ.

🕉️ ಪ್ರತ್ಯಕ್ಷವಾದ ಪರಶಿವ:
ಚಂದೇಶ ಶರ್ಮ ತನ್ನ ಆರಾಧ್ಯದೈವವಾದ ಶಿವನ ಧ್ಯಾನಕ್ಕೆ ಅಪಚಾರ ಮಾಡಿದ ತನ್ನ ತಂದೆಯನ್ನೂ ಲೆಕ್ಕಿಸದೆ ಕಾಲುಗಳನ್ನು ಕತ್ತರಿಸಿದ ಪರಮ ಭಕ್ತಿಗೆ ಮೆಚ್ಚಿದ ಪರಶಿವ ಅಲ್ಲಿ ಪ್ರತ್ಯಕ್ಷವಾದ.

👨👩👦 ಪರಶಿವನ ಕುಟುಂಬಕ್ಕೆ ಚಂದೇಶ ಶರ್ಮನ ಸೇರ್ಪಡೆ:
ಪ್ರತ್ಯಕ್ಷವಾದ ಪರಶಿವ, ಸಾಮಾನ್ಯ ಮಾನವನಾದ ಚಂದೇಶ ಶರ್ಮನ ಶ್ರದ್ಧೆ ಭಕ್ತಿಗೆ ಮೆಚ್ಚಿ, ಅಂದಿನಿಂದ ತನ್ನ ಕುಟುಂಬದ ಸದಸ್ಯರಾದ ಪಾರ್ವತಿ, ವಿನಾಯಕ, ಸುಬ್ರಹ್ಮಣ್ಯರ ಜೊತೆಗೆ, ಚಂದೇಶನನ್ನು ತನ್ನ ಮೂರನೇ ಮಗನಾಗಿ ಸ್ವೀಕರಿಸಿದ. ಈಚದತ್ತನಿಗೆ ಕಾಲುಗಳು ಮತ್ತೆ ಬರುವಂತೆ ಅನುಗ್ರಹಿಸಿದ. ಪರಶಿವನು ಚಂದೇಶನಿಗೆ "ಚಂಡಿಕೇಶ್ವರ" ಎಂದು ಮರುನಾಮಕರಣ ಮಾಡಿದ.

🔔 ಚಂಡಿಕೇಶ್ವರನಿಗೆ ಚಿಟಿಕೆ, ಚಪ್ಪಾಳೆ ಏಕೆ?
ಶಿವ ಪುರಾಣದ ಉಲ್ಲೇಖದಂತೆ, ಚಂಡಿಕೇಶ್ವರ ಸದಾಕಾಲವೂ ಪರಶಿವನ ಧ್ಯಾನದಲ್ಲಿ ಮಗ್ನನಾಗಿರುತ್ತಾನೆ.
ಶಿವಾಲಯಕ್ಕೆ ತೆರಳುವ ಭಕ್ತರು, ಶಿವಾಲಯದಿಂದ ಚಂಡಿಕೇಶ್ವರನಿಗೆ ತಿಳಿಯದಂತೆ ಏನನ್ನೂ ಹೊರಗೆ ಕೊಂಡೊಯ್ಯುವಂತಿಲ್ಲ. ಅದು ದೇವರ ಪ್ರಸಾದವಾಗಲಿ, ದೇವರ ನಿರ್ಮಾಲ್ಯವಾಗಲಿ, ಧ್ಯಾನದಲ್ಲಿ ಇರುವ ಚಂಡಿಕೇಶ್ವರನಿಗೆ ಚಿಟಿಕೆ, ಚಪ್ಪಾಳೆ ತಟ್ಟಿ, ನಮ್ಮತ್ತ ಚಂಡಿಕೇಶ್ವರನ ಗಮನ ಸೆಳೆದು, ನಂತರ ನಾವು ಹೊರಗೆ ತೆಗೆದುಕೊಂಡು ಹೋಗಬೇಕು.
ಹೊರಗೆ ಹೋಗುವ ನಿರ್ಮಾಲ್ಯಗಳಾದ ಬಿಲ್ವಪತ್ರೆ, ಹೂವು, ವಿಭೂತಿ ಅಥವಾ ಪ್ರಸಾದಗಳನ್ನು ಚಂಡಿಕೇಶ್ವರನಿಗೆ ತೋರಿಸಿಯೇ ಹೊರಗೆ ತೆಗೆದುಕೊಂಡು ಹೋಗಬೇಕೆಂಬ ನಿಯಮ ಉಂಟು. ಹಾಗಾಗಿ ಚಂಡಿಕೇಶ್ವರನಿಗೆ ಚಿಟಿಕೆ, ಚಪ್ಪಾಳೆ ತಟ್ಟಿ, "ನಿನಗೆ ತಿಳಿಯದಂತೆ ಇಲ್ಲಿಂದ ಏನನ್ನೂ ಹೊರಗೆ ತೆಗೆದುಕೊಂಡು ಹೋಗುತ್ತಿಲ್ಲ" ಎಂಬುದನ್ನು ತಿಳಿಸಿ ಹೊರಗೆ ಕೊಂಡೊಯ್ಯುವುದು ಪದ್ದತಿ.

ಇಂದಿಗೂ ಶಿವಾಲಯಗಳಲ್ಲಿ ಹಿಂದಿನ ದಿನದ ಮೂರ್ತಿಗಳ ನಿರ್ಮಾಲ್ಯಗಳನ್ನು (ಪೂಜೆ ಮಾಡಿದ ಹೂವು ಪತ್ರೆಗಳು) ತೆಗೆದು, ಚಂಡಿಕೇಶ್ವರನಿಗೆ ತೋರಿಸಿದ ನಂತರವೇ ಅವುಗಳನ್ನು ವಿಸರ್ಜನೆ ಮಾಡುವ ಪದ್ದತಿ ಉಂಟು.
⚠️ ಮುಖ್ಯ ಸಂದೇಶ:
ಬಹುತೇಕರು ತಿಳಿದಹಾಗೆ 'ಚಂಡಿಕೇಶ್ವರ'ನಿಗೆ ಕಿವಿ ಕೇಳಿಸೊಲ್ಲ, ಕಿವುಡು ಎಂಬ ತಪ್ಪು ಅಭಿಪ್ರಾಯ ಬದಿಗಿಟ್ಟು ನಿಜಾಂಶ ತಿಳಿಸುವ ಉದ್ದೇಶ. ಈ ವಿಚಾರವನ್ನು ಇತರರಿಗೂ ತಿಳಿಸಿ.

🕉️ "ಚಂಡಿಕೇಶ್ವರನಿಗೆ ಕಿವುಡಲ್ಲ – ಧ್ಯಾನ ಮಗ್ನನಿಗೆ ಗಮನ ಸೆಳೆಯುವ ಕ್ರಮ" 🕉️
*ಸನಾತನ ಧರ್ಮದ ನಿಜಾಂಶ – ತಪ್ಪು ಕಲ್ಪನೆಗಳ ನಿವಾರಣೆಗೆ ಕಿರು ಪ್ರಯತ್ನ.*

Post a Comment