▪️ ದಿನಾಂಕ: 11-07-2026
▪️ ಸ್ಥಳ: ಶೇಷಾದ್ರಿಪುರಂ ಕಾಲೇಜು ಸಮೀಪದ ರಸ್ತೆ, ತಿಲಕ್‌ಪಾರ್ಕ್ ಠಾಣಾ ವ್ಯಾಪ್ತಿ, ತುಮಕೂರು
▪️ ಬಂಧಿತ ಆರೋಪಿಗಳು: 06
▪️ ವಶಪಡಿಸಿದ ಗಾಂಜಾ: 1 ಕೆ.ಜಿ. 655 ಗ್ರಾಂ (₹2,00,000 ಮೌಲ್ಯ)
▪️ ವಶಪಡಿಸಿದ ಹೈಡೋವೀಡ್ ಗಾಂಜಾ: 23 ಗ್ರಾಂ (₹2,30,000 ಮೌಲ್ಯ)
▪️ ವಶಪಡಿಸಿದ ವಾಹನ: 01 ಬಿಳಿ ಫಾರ್ಚೂನರ್ ಕಾರು (₹40,00,000 ಮೌಲ್ಯ)
▪️ ಒಟ್ಟು ಮೌಲ್ಯ: ₹44,30,000
ತುಮಕೂರು: ತುಮಕೂರು ನಗರದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ನಿಷೇಧಿತ ಮಾದಕ ವಸ್ತುಗಳನ್ನು ಸಪ್ಪೆ ಮಾಡುತ್ತಿದ್ದ ಗ್ಯಾಂಗ್ನ ಪತ್ತೆಗೆ ತುಮಕೂರು ಜಿಲ್ಲಾ ಪೊಲೀಸ್ ಇಲಾಖೆಯು ವಿಶೇಷ ಕಾರ್ಯಾಚರಣೆ ನಡೆಸಿತು. 11-07-2026 ರಂದು 06 ಆರೋಪಿಗಳನ್ನು ಮಾದಕ ವಸ್ತುಗಳ ಮಾಲು ಸಮೇತವಾಗಿ ಬಂಧಿಸಿ ಯಶಸ್ವಿ ಕಾರ್ಯಾಚರಣೆ ನಡೆಸಲಾಯಿತು.
ದಿನಾಂಕ:10/07/2026 ರಂದು ಸಂಜೆ 5-00 ಗಂಟೆಯಲ್ಲಿ ತಿಲಕ್‌ಪಾರ್ಕ್ ಪೊಲೀಸ್ ಠಾಣಾ ಸರಹದ್ದಿನ ಶೇಷಾದ್ರಿಪುರಂ ಕಾಲೇಜು ಸಮೀಪದ ರಸ್ತೆಯಲ್ಲಿ ಆರೋಪಿಗಳು ಮಾದಕ ವಸ್ತುವಾದ ಗಾಂಜಾ ಸೊಪ್ಪನ್ನು ಮಾರಾಟ ಮಾಡುತ್ತಿರುವ ಬಗ್ಗೆ ದೂರು ದಾಖಲಾಗಿತ್ತು. ಈ ದೂರಿನ ಮೇರೆಗೆ ತಿಲಕ್‌ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ: 81/2026, ಕಲಂ 20(b)(ii)(B) NDPS ಆಕ್ಟ್ ರೀತ್ಯಾ ಪ್ರಕರಣ ದಾಖಲಾಗಿತ್ತು.
ಮಾನ್ಯ ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಶೋಕ್.ಕೆ.ವಿ. IPS ಅವರ ಮಾರ್ಗದರ್ಶನದಲ್ಲಿ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಸಿ.ಗೋಪಾಲ್ ಕೆ.ಎಸ್.ಪಿ.ಎಸ್ ಮತ್ತು ಪುರುಷೋತ್ತಮ.ಎಂ.ಎಲ್ ಕೆ.ಎಸ್.ಪಿ.ಎಸ್ ರವರ ನೇತೃತ್ವದಲ್ಲಿ, ತುಮಕೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಕೆ.ಆರ್.ಚಂದ್ರಶೇಖರ್ ರವರ ಮುಂದಾಳತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು.
1. ಸತೀಶ್ ಸಿ. (37) – ಕುವೆಂಪುನಗರ, ತುಮಕೂರು
2. ಪ್ರಮೋದ್ ಕುಮಾರ್ (28) – ಎಸ್.ಐ.ಟಿ. ಮೈನ್ ರೋಡ್, ತುಮಕೂರು
3. ದಿಶಾಂತ್ ಆರ್ (21) – ಪೊಲೀಸ್ ಕ್ವಾರ್ಟಸ್, ಬಟವಾಡಿ, ತುಮಕೂರು
4. ದರ್ಶನ್ (28) – ಹೆಗ್ಗೆರೆ, ತುಮಕೂರು
5. ಅಮೋಘ ನಾಗಭೂಷಣ್ (31) – ಸಿದ್ದಗಂಗಾ ಬಡಾವಣೆ, ತುಮಕೂರು
6. ಮಂಜುನಾಥ (35) – ಮಾರತ್ ಹಳ್ಳಿ, ಬೆಂಗಳೂರು
▪️ 1 ಕೆ.ಜಿ. 655 ಗ್ರಾಂ ಗಾಂಜಾ ಸೊಪ್ಪು – ₹2,00,000 ಮೌಲ್ಯ
▪️ 23 ಗ್ರಾಂ ಹೈಡೋವೀಡ್ ಗಾಂಜಾ – ₹2,30,000 ಮೌಲ್ಯ
▪️ 01 ಬಿಳಿ ಫಾರ್ಚೂನರ್ ಕಾರು – ₹40,00,000 ಮೌಲ್ಯ
▪️ ಒಟ್ಟು ಮೌಲ್ಯ: ₹44,30,000
ತಂಡದ ಅಧಿಕಾರಿಗಳಾದ ತಿಲಕ್ಪಾರ್ಕ್ ವೃತ್ತದ ಸಿಪಿಐ ಎಫ್.ಕೆ.ನದಾಫ್, ತಿಲಕ್‌ಪಾರ್ಕ್ ಪೊಲೀಸ್ ಠಾಣೆಯ ಪಿಎಸ್‌ಐ ಯೋಗೀಶ್ ಟಿ.ಕೆ., ಲೋಕೇಶ್ ಬಾಬು, ತಿಲಕ್ಪಾರ್ಕ್ ವೃತ್ತದ ಅಪರಾಧ ಪತ್ತೆ ವಿಭಾಗದ ಸಿಬ್ಬಂದಿಗಳಾದ ರಾಮಕೃಷ್ಣ, ಶಶಿಕುಮಾರ್ ನಾಯ್ಕ, ನಿಜಾಮುದ್ದೀನ್ ಷಾ, ನಾಸೀರ್ ಉದ್ದೀನ್, ಲೋಕೇಶ್, ಸುನೀಲ್ ಲಮಾಣಿ, ಪರಶುರಾಮ್ ಹೊಸಮನಿ, ಸುನೀಲ್ ಕುಮಾರ್, ಜೀಪ್ ಚಾಲಕರಾದ ಸತೀಶ್ ಯಡವಾಣಿ, ಸಿದ್ದೇಶ್ ರವರುಗಳು ಆರೋಪಿಗಳನ್ನು ಮಾದಕ ವಸ್ತುಗಳ ಮಾಲು ಸಮೇತವಾಗಿ ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾದರು.
"ಮೇಲ್ಕಂಡ ಪ್ರಕರಣದಲ್ಲಿ ಆರೋಪಿಗಳನ್ನು ದಸ್ತಗಿರಿ ಮಾಡಿ, ₹44,30,000 ಬೆಲೆಬಾಳುವ ಮಾದಕ ವಸ್ತುಗಳನ್ನು ಅಮಾನತ್ತು ಪಡಿಸಿಕೊಳ್ಳುವಲ್ಲಿ ಶ್ರಮಿಸಿದ ತನಿಖಾ ತಂಡವನ್ನು ಮಾನ್ಯ ಪೊಲೀಸ್ ಅಧೀಕ್ಷಕರಾದ ಅಶೋಕ್.ಕೆ.ವಿ, IPS ರವರು ಮತ್ತು ಕೇಂದ್ರವಲಯ ಡಿಐಜಿಪಿ ರವರಾದ ಎಸ್. ಗಿರೀಶ್ IPS ರವರು ಮನಃಪೂರ್ವಕವಾಗಿ ಶ್ಲಾಘಿಸಿರುತ್ತಾರೆ."
⚖️ "ಮಾದಕ ವಸ್ತುಗಳ ವಿರುದ್ಧದ ಹೋರಾಟ ಮುಂದುವರಿಯುತ್ತದೆ – ಅಪರಾಧಿಗಳಿಗೆ ಯಾವುದೇ ರಿಯಾಯತಿ ಇಲ್ಲ"
ಆರೋಪಿಗಳ ವಿಚಾರಣೆ ಮುಂದುವರಿದಿದ್ದು, ಅವರು ಮಾದಕ ವಸ್ತುಗಳನ್ನು ಯಾರಿಗೆ ಸಪ್ಪೆ ಮಾಡುತ್ತಿದ್ದರು ಮತ್ತು ಇನ್ನೂ ಯಾರು ಈ ಜಾಲದಲ್ಲಿ ಭಾಗಿಯಾಗಿದ್ದಾರೆ ಎಂಬುದರ ಕುರಿತು ತನಿಖೆ ಮುಂದುವರಿದಿದೆ. 💐💐💐
"ಮಾದಕ ವಸ್ತುಗಳ ವಿರುದ್ಧ ತುಮಕೂರು ಪೊಲೀಸರ ಕಣ್ಗಾವಲು – ಅಪರಾಧಿಗಳಿಗೆ ಯಾವುದೇ ರಿಯಾಯತಿ ಇಲ್ಲ"
ಅಶೋಕ್.ಕೆ.ವಿ., IPS
ಜಿಲ್ಲಾ ಪೊಲೀಸ್ ಅಧೀಕ್ಷಕರು, ತುಮಕೂರು
*ಮಾದಕ ವಸ್ತುಗಳ ವಿರುದ್ಧ ತುಮಕೂರು ಪೊಲೀಸ್ ಇಲಾಖೆಯ ಸಮಾಜಮುಖಿ ಕಾರ್ಯಾಚರಣೆ.*

Post a Comment