▪️ ದಿನಾಂಕ: 14-07-2026
▪️ ಸ್ಥಳ: ಬನವಾಸಿ ರಸ್ತೆಯ ಹಾರ್ಟಿಕಲ್ಟರ್ ಕಾಲೇಜಿನ ಹತ್ತಿರ, ಶಿರಸಿ
▪️ ಬಂಧಿತ ಆರೋಪಿ: ಇಮ್ರಾನ್ ಅಹ್ಮದ್ (29), ದಾಸನಕೊಪ್ಪ
▪️ ವಶಪಡಿಸಿದ ಗಾಂಜಾ: 253 ಗ್ರಾಂ (₹20,000 ಮೌಲ್ಯ)
▪️ ವಶಪಡಿಸಿದ ವಾಹನ: ಹುಂಡೈ ಐ10 ಕಾರು (₹1,00,000 ಮೌಲ್ಯ)
▪️ ಒಟ್ಟು ಮೌಲ್ಯ: ₹1,20,000
▪️ ಪ್ರಕರಣ ಸಂಖ್ಯೆ: 84/2026, ಕಲಂ 8(c) & 20(B)(ii)(A) NDPS ಆಕ್ಟ್
ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರ ಠಾಣಾ ವ್ಯಾಪ್ತಿಯ ಬನವಾಸಿ ರಸ್ತೆಯ ಹಾರ್ಟಿಕಲ್ಟರ್ ಕಾಲೇಜಿನ ಹತ್ತಿರ ಗಾಂಜಾ ಸಾಗಾಟ ಮತ್ತು ಮಾರಾಟ ಮಾಡುತ್ತಿದ್ದ ಪೆಡ್ಲರ್ನನ್ನು ಶಿರಸಿ ನಗರ ಪೊಲೀಸರು ಬಂಧಿಸಿ, 253 ಗ್ರಾಂ ಗಾಂಜಾ ಹಾಗೂ ಹುಂಡೈ ಐ10 ಕಾರು ವಶಪಡಿಸಿಕೊಂಡಿದ್ದಾರೆ.
ದಿನಾಂಕ: 14-07-2026 ರಂದು ಸಾಯಾಂಕಾಲ 07:30 ಗಂಟೆಯ ಸಮಯಕ್ಕೆ ಗಾಂಜಾ ಸಾಗಾಟ ಮಾಡಿಕೊಂಡು ಬಂದು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯ ಮೇಲೆ ಪೊಲೀಸರು ದಾಳಿ ಮಾಡಿದರು. ಆರೋಪಿತನಾದ ಇಮ್ರಾನ್ ಅಹ್ಮದ್ (ತಂದೆ: ಮಲ್ಬಲ್ ಅಹ್ಮದ್, ವಯಸ್ಸು 29, ನವನಗರ, 4ನೇ ಕ್ರಾಸ್, ಹಾವೇರಿ, ಹಾಲಿ ದಾಸನಕೊಪ್ಪ) ನನ್ನು ದಸ್ತಗಿರಿ ಮಾಡಲಾಯಿತು.
ಸದರಿ ಆರೋಪಿಯ ಮೇಲೆ ಈ ಹಿಂದೆ ಮುಂಡಗೋಡ ಪೊಲೀಸ್ ಠಾಣೆಯಲ್ಲಿ 02 ಗಾಂಜಾ ಸಾಗಾಟ & ಮಾರಾಟ ಪ್ರಕರಣಗಳು, ಅಂಕೋಲಾ ಪೊಲೀಸ್ ಠಾಣೆಯಲ್ಲಿ ಮನೆ ಕಳ್ಳತನ ಪ್ರಕರಣ ಹಾಗೂ ಹಾನಗಲ್ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣಗಳು ದಾಖಲಾಗಿವೆ.
▪️ 253 ಗ್ರಾಂ ಗಾಂಜಾ – ₹20,000 ಮೌಲ್ಯ
▪️ ಹುಂಡೈ ಐ10 ಕಾರು – ₹1,00,000 ಮೌಲ್ಯ
▪️ ಒಟ್ಟು ಮೌಲ್ಯ: ₹1,20,000
ಆರೋಪಿತನ ವಿರುದ್ಧ ಶಿರಸಿ ನಗರ ಪೊಲೀಸ್ ಠಾಣಾ ಗುನ್ನಾ ಸಂಖ್ಯೆ: 84/2026, ಕಲಂ. 8(c) & 20(B)(ii)(A) NDPS ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ಆರೋಪಿತನನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಸದರಿ ಪ್ರಕರಣದ ಕಾರ್ಯಾಚರಣೆಯಲ್ಲಿ ಶ್ರೀ ದೀಪನ್ ಎಂ.ಎನ್. IPS (ಪೊಲೀಸ್ ಅಧೀಕ್ಷಕರು, ಉತ್ತರ ಕನ್ನಡ ಜಿಲ್ಲೆ, ಕಾರವಾರ), ಶ್ರೀ ಕೃಷ್ಣಮೂರ್ತಿ ಜಿ. (ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1), ಶ್ರೀಮತಿ ಗೀತಾ ಪಾಟೀಲ್ (ಪೊಲೀಸ್ ಉಪಾಧೀಕ್ಷಕರು, ಶಿರಸಿ ಉಪವಿಭಾಗ), ಮತ್ತು ಶ್ರೀ ಸಂಪತ್ ಈ.ಸಿ (ಪೊಲೀಸ್ ವೃತ್ತ ನಿರೀಕ್ಷಕರು, ಶಿರಸಿ) ರವರ ಮಾರ್ಗದರ್ಶನದಲ್ಲಿ ಶ್ರೀ ನರಸಿಂಹಲು .ಟಿ. (PSI, L&O) ಮತ್ತು ಶ್ರೀ ನಾರಾಯಣ ರಾಠೋಡ (PSI, ತನಿಖೆ) ಶಿರಸಿ ನಗರ ಠಾಣೆ ರವರ ನೇತೃತ್ವದಲ್ಲಿ ಅಪರಾಧ ವಿಭಾಗದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.
ಬಸವರಾಜ ಹಗರಿ, ರಾಮಯ್ಯ ಪೂಜಾರಿ, ಹನುಮಂತ ಮಾಕಾಪೂರ, ಸದ್ದಾಂ ಹುಸೇನ್, ಹನುಮಂತ ಕಬಾಡಿ, ತುಕಾರಾಮ ಬಣಕಾರ, ಸುನೀಲ್, ಪ್ರಶಾಂತ, ರಾಜಶೇಖರ
"ಮಾದಕ ವಸ್ತುಗಳ ಸಾಗಾಟ ಮತ್ತು ಮಾರಾಟದ ವಿರುದ್ಧ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯ ಕಾರ್ಯಾಚರಣೆ ಮುಂದುವರಿಯುತ್ತದೆ. ಆರೋಪಿಯು ಹಿಂದಿನ ಅಪರಾಧಗಳನ್ನು ಹೊಂದಿದ್ದು, ಇವನ ಬಂಧನದಿಂದ ಪ್ರದೇಶದಲ್ಲಿ ಮಾದಕ ವಸ್ತುಗಳ ವ್ಯಾಪಾರಕ್ಕೆ ತಡೆಯೊಡ್ಡಲಾಗಿದೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ."
⚖️ "ಮಾದಕ ವಸ್ತುಗಳ ವಿರುದ್ಧದ ಹೋರಾಟ ಮುಂದುವರಿಯುತ್ತದೆ – ಅಪರಾಧಿಗಳಿಗೆ ಯಾವುದೇ ರಿಯಾಯತಿ ಇಲ್ಲ"
ಈ ಕಾರ್ಯಾಚರಣೆಯು ಮಾದಕ ವಸ್ತುಗಳ ವಿರುದ್ಧ ಉತ್ತರ ಕನ್ನಡ ಪೊಲೀಸ್ ಇಲಾಖೆಯ ಕಣ್ಗಾವಲು ಮತ್ತು ಸಾರ್ವಜನಿಕರ ಸುರಕ್ಷತೆಯ ಕುರಿತಾದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. 💐💐💐
"ಮಾದಕ ವಸ್ತುಗಳ ವಿರುದ್ಧ ಉತ್ತರ ಕನ್ನಡ ಪೊಲೀಸರ ಕಣ್ಗಾವಲು – ಅಪರಾಧಿಗಳಿಗೆ ಯಾವುದೇ ರಿಯಾಯತಿ ಇಲ್ಲ"
ದೀಪನ್ ಎಂ.ಎನ್., IPS
ಜಿಲ್ಲಾ ಪೊಲೀಸ್ ಅಧೀಕ್ಷಕರು, ಉತ್ತರ ಕನ್ನಡ
*ಮಾದಕ ವಸ್ತುಗಳ ವಿರುದ್ಧ ಉತ್ತರ ಕನ್ನಡ ಪೊಲೀಸ್ ಇಲಾಖೆಯ ಸಮಾಜಮುಖಿ ಕಾರ್ಯಾಚರಣೆ.*

Post a Comment