▪️ ಸ್ಥಳ: ಕೋಲಾರ ಆರ್.ಟಿ.ಒ
▪️ ವಾಹನ ನೋಂದಣಿ ಸಂಖ್ಯೆ: KA 03 LB 0010
▪️ ವಾಹನ ಮಾದರಿ: ಯಮಹಾ ಬೈಕ್
▪️ ಪ್ರಕರಣದ ಸಾರಾಂಶ: ಆರ್.ಸಿ. ಕಾರ್ಡ್ ಕಳವು ಮಾಡಿ, ನಕಲಿ ದಾಖಲೆ ಸೃಷ್ಟಿಸಿ ಬೇರೆ ವಾಹನಕ್ಕೆ ವರ್ಗಾವಣೆ
▪️ ಕ್ರಮ ಕೈಗೊಂಡವರು: ಆರ್.ಟಿ.ಒ ಅಧಿಕಾರಿ ಎಂ. ವೇಣುಗೋಪಾಲರೆಡ್ಡಿ
▪️ ಪ್ರಕರಣ ದಾಖಲು: ಕೋಲಾರ ನಗರ ಠಾಣೆ – ಕ್ರಿಮಿನಲ್ ಕೇಸ್
ಕೋಲಾರ: ಕೋಲಾರ ಆರ್.ಟಿ.ಒ ನಲ್ಲಿ ಒಂದೇ ನೋಂದಣಿ ಸಂಖ್ಯೆಯ ಎರಡು ವಾಹನಗಳು ಪತ್ತೆಯಾಗಿರುವ ಪ್ರಕರಣಕ್ಕೆ ಸಾರಿಗೆ ಇಲಾಖೆ ತಕ್ಷಣವೇ ಸಮಗ್ರ ತನಿಖೆಗೆ ಆದೇಶಿಸಿದೆ. ಈ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ತಿಳಿಸಿದೆ.
ಕೋಲಾರದ ಪ್ರಾದೇಶಿಕ ಸಾರಿಗೆ ಅಧಿಕಾರಿ ಎಂ. ವೇಣುಗೋಪಾಲರೆಡ್ಡಿ ಅವರು ಈ ಪ್ರಕರಣವನ್ನು ಪತ್ತೆ ಹಚ್ಚಿ ಕ್ರಿಮಿನಲ್ ಕೇಸ್ ದಾಖಲಿಸಿದ್ದಾರೆ. ಬೆಂಗಳೂರಿನ ಕಸ್ತೂರಿನಗರದ ವ್ಯಕ್ತಿಯೊಬ್ಬರಿಗೆ KA 03 LB 0010 ವಾಹನದ ದಾಖಲಾತಿಯನ್ನು ಶಿಡ್ಲಘಟ್ಟದವರಿಗೆ ವರ್ಗಾವಣೆಯಾಗಿರುವ ಕುರಿತು ಕೋಲಾರದ ಆರ್.ಟಿ.ಒ ನಿಂದ ಎಸ್.ಎಂ.ಎಸ್ ಮಾಹಿತಿ ಹೋಗಿದ್ದು, ತಕ್ಷಣ ಎಚ್ಚೆತ್ತುಕೊಂಡು ಈ ಸಂಬಂಧ ಆರ್.ಟಿ.ಒ ಗೆ ದೂರು ನೀಡಿದ್ದರು.
"ಪ್ರಕ್ರಿಯೆಯನ್ನು ಪರಿಶೀಲಿಸಿದಾಗ ಆರ್.ಸಿ. ಕಾರ್ಡ್ ಕಳವು ಮಾಡಿ ಮತ್ತೊಂದು ದಾಖಲೆಯಿಲ್ಲದ ಬೈಕ್‌ಗೆ ನಕಲಿ ದಾಖಲೆಯನ್ನು ಸೃಷ್ಟಿಸಿ ಅಸಲಿಯಾಗಿ ಆರ್.ಟಿ.ಒ ನಿಂದ ವರ್ಗಾವಣೆ ಮಾಡಿ ಮಾರಾಟ ಮಾಡಿರುವುದು ತಿಳಿದುಬಂದಿದೆ. ಎರಡೂ ವಾಹನಗಳನ್ನು ಉಪಾಯವಾಗಿ ಕಚೇರಿಗೆ ತರಿಸಿಕೊಂಡು ಕೋಲಾರ ನಗರ ಠಾಣೆ ಪೊಲೀಸರಿಗೆ ವಾಹನಗಳನ್ನು ಹಸ್ತಾಂತರಿಸಿ ದೂರು ನೀಡಿದ್ದೇನೆ."
⚖️ "ವಾಹನ ನೋಂದಣಿ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಸಾರ್ವಜನಿಕರ ವಿಶ್ವಾಸ ಕಾಪಾಡಲು ಇಲಾಖೆ ಬದ್ಧವಾಗಿದೆ"
ಈ ಸಂಬಂಧ ಕೋಲಾರ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ವಾಹನ ಕಳ್ಳರು ಮತ್ತು ನಕಲಿ ದಾಖಲೆ ಸೃಷ್ಟಿ ಮಾಡುವ ಜಾಲವನ್ನು ಭೇದಿಸುವ ನಿಟ್ಟಿನಲ್ಲಿ ವಿಶೇಷ ತಂಡಗಳನ್ನು ರಚಿಸಲಾಗಿದೆ.
ಒಂದೇ ನೋಂದಣಿ ಸಂಖ್ಯೆಯ ಎರಡು ವಾಹನಗಳು ಪತ್ತೆಯಾಗಿರುವ ಈ ಪ್ರಕರಣವು ವಾಹನ ನೋಂದಣಿ ವ್ಯವಸ್ಥೆಯಲ್ಲಿನ ಗಂಭೀರ ಲೋಪವನ್ನು ಬಯಲಿಗೆಳೆದಿದೆ. ನಕಲಿ ದಾಖಲೆಗಳ ಮೂಲಕ ವಾಹನಗಳನ್ನು ವರ್ಗಾವಣೆ ಮಾಡಿ ಮಾರಾಟ ಮಾಡುವ ಅಪರಾಧಿಗಳ ಜಾಲವನ್ನು ಪತ್ತೆಹಚ್ಚಲು ಪೊಲೀಸರು ಮತ್ತು ಸಾರಿಗೆ ಇಲಾಖೆ ಸಂಯುಕ್ತವಾಗಿ ಕಾರ್ಯಾಚರಣೆ ನಡೆಸುತ್ತಿದೆ. 💐💐💐
"ನಕಲಿ ದಾಖಲೆಗಳಿಗೆ ಕಡಿವಾಣ – ಪಾರದರ್ಶಕ ವಾಹನ ನೋಂದಣಿಗೆ ಇಲಾಖೆಯ ಬದ್ಧತೆ"
ಎಂ. ವೇಣುಗೋಪಾಲರೆಡ್ಡಿ
ಪ್ರಾದೇಶಿಕ ಸಾರಿಗೆ ಅಧಿಕಾರಿ, ಕೋಲಾರ
*ವಾಹನ ನೋಂದಣಿ ವ್ಯವಸ್ಥೆಯಲ್ಲಿ ಪಾರದರ್ಶಕತೆಗಾಗಿ ಸಾರಿಗೆ ಇಲಾಖೆಯ ಸಮಾಜಮುಖಿ ಕ್ರಮ.*

Post a Comment