▪️ ದೂರು ದಿನಾಂಕ: 06-08-2025
▪️ ಬಂಧನ ದಿನಾಂಕ: 16-07-2026
▪️ ಬಂಧಿತ ಆರೋಪಿ: ನರಸಿಂಗ್ ತಗರಖೇಡೆ (32), ಬೀದರ ಜಿಲ್ಲೆ
▪️ ವಂಚನಾ ಮಾರ್ಗ: ನಕಲಿ Facebook/Instagram ಖಾತೆಗಳು, ಮುರ್ಡೇಶ್ವರ ದೇವಸ್ಥಾನದ ಚಿತ್ರಗಳ ದುರ್ಬಳಕೆ
▪️ ಪ್ರಕರಣ ಸಂಖ್ಯೆ: 90/2025, ಕಲಂ 318(4), 319(2), 336(2), 62 BNS-2023
ಮುರ್ಡೇಶ್ವರ: ಶ್ರೀ ಮುರ್ಡೇಶ್ವರ ದೇವಸ್ಥಾನದ ಅದೃಷ್ಟ ಡ್ರಾ ಹೆಸರಿನಲ್ಲಿ ನಕಲಿ Facebook ಮತ್ತು Instagram ಮೂಲಕ ಲಾಟರಿ ಟಿಕೇಟ್ ಮಾರಾಟ ಮಾಡಿ ಸಾರ್ವಜನಿಕರಿಗೆ ವಂಚಿಸುತ್ತಿದ್ದ ಆರೋಪಿತನನ್ನು ಮುರ್ಡೇಶ್ವರ ಪೊಲೀಸರು 1 ವರ್ಷದ ನಿರಂತರ ತನಿಖೆಯ ಬಳಿಕ ಬಂಧಿಸಿದ್ದಾರೆ.
ಯಾರೋ ಅಪರಿಚಿತ ವ್ಯಕ್ತಿಯು "ಮುರ್ಡೇಶ್ವರ ಅದೃಷ್ಟ ಡ್ರಾ" ಹೆಸರಿನಲ್ಲಿ ನಕಲಿ ಪೇಸ್ ಬುಕ್ ಮತ್ತು ಇನ್ ಸ್ಟಾಗ್ರಾಮ್ ಮೂಲಕ, ದೇವಸ್ಥಾನದ ಫೋಟೋವನ್ನು ಬಳಸಿಕೊಂಡು ಲಕ್ಕಿ ಡ್ರಾ ಮೂಲಕ ಸಾರ್ವಜನಿಕರಿಗೆ ಮೋಸ ಮಾಡುವ ಉದ್ದೇಶದಿಂದ, ಶ್ರೀ ಮುರುಡೇಶ್ವರ ಅದೃಷ್ಟ ಡ್ರಾ ಎಂದು ಪ್ಯಾಂಪ್ಲೆಟ್ ತಯಾರಿಸಿ, ನಕಲಿ ಲಾಟರಿ ಟಿಕೇಟ್ಗಳನ್ನು ಹರಿಬಿಟ್ಟು ಜನರಿಂದ ಹಣ ಪಡೆಯುತ್ತಿದ್ದನು.
"ಶ್ರೀ ಮುರ್ಡೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಶ್ರೀ ಮಂಜುನಾಥ (ತಂದೆ ಮದನ ಶೆಟ್ಟಿ, 73 ವರ್ಷ, ಮ್ಯಾನೇಜರ್, ಮುರ್ಡೇಶ್ವರ) ಅವರು ದಿನಾಂಕ 06-08-2025 ರಂದು ಮುರ್ಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಠಾಣಾ ಗುನ್ನಾ ಸಂಖ್ಯೆ: 90/2025, ಕಲಂ 318(4), 319(2), 336(2), 62 BNS-2023 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು."
ಸದ್ರಿ ಪ್ರಕರಣದಲ್ಲಿ ಮೇಲಾಧಿಕಾರಿಗಳ ಆದೇಶದಂತೆ ಒಂದು ವಿಶೇಷ ತಂಡವನ್ನು ರಚಿಸಿ, ರಾಜಸ್ಥಾನ, ಮಹಾರಾಷ್ಟ್ರ, ಬೀದರ ಜಿಲ್ಲೆಗಳಲ್ಲಿ ಆರೋಪಿತನ ಇರುವಿಕೆಯ ಬಗ್ಗೆ ಕಳೆದ ಒಂದು ವರ್ಷದಿಂದ ನಿರಂತರವಾಗಿ ಮಾಹಿತಿ ಸಂಗ್ರಹಿಸಿ, ನಂತರ ಖಚಿತವಾದ ಹಾಗೂ ತಾಂತ್ರಿಕ ಮಾಹಿತಿಯ ಆಧಾರದ ಮೇಲೆ ದಿನಾಂಕ: 16-07-2026 ರಂದು ಆಪಾದಿತನನ್ನು ದಸ್ತಗಿರಿ ಮಾಡಲಾಯಿತು.
▪️ ಹೆಸರು: ನರಸಿಂಗ್ ತಂದೆ ವೆಂಕಟರಾವ್ ತಗರಖೇಡೆ
▪️ ವಯಸ್ಸು: 32 ವರ್ಷ
▪️ ವೃತ್ತಿ: ಹೋಟೆಲ್ ಕೆಲಸ
▪️ ವಾಸ: ಸಾಲಖನಗಾಂವ, ಬಾಲ್ಕಿ ತಾಲ್ಲೂಕು, ಬೀದರ ಜಿಲ್ಲೆ
ಆರೋಪಿಯನ್ನು ಬಂಧಿಸಿ, ಸೂಕ್ತ ರಿಮಾಂಡ್ನೊಂದಿಗೆ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಶ್ರೀ ದೀಪನ್ ಎನ್.ಎಮ್. IPS (ಪೊಲೀಸ್ ಅಧೀಕ್ಷಕರು, ಉತ್ತರ ಕನ್ನಡ ಜಿಲ್ಲೆ), ಶ್ರೀ ಕೃಷ್ಣಮೂರ್ತಿ ಜಿ. (ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಉತ್ತರ ಕನ್ನಡ), ಶ್ರೀ ಗಿರೀಶ್ ಬಿ (ಪೊಲೀಸ್ ಉಪಾಧೀಕ್ಷಕರು, ಭಟ್ಕಳ ಉಪ ವಿಭಾಗ) ಹಾಗೂ ಶ್ರೀ ಜಗದೀಶ್ ಹಂಚನಾಳ (ಸಿಪಿಐ, ಮುರ್ಡೇಶ್ವರ ವೃತ್ತ) ರವರ ಮಾರ್ಗದರ್ಶನದಲ್ಲಿ ಪಿಎಸ್ಐ ಹಣಮಂತ ಬಿರಾದಾರ ಮತ್ತು ಲೋಕನಾಥ ರಾಥೋಡ ನೇತೃತ್ವದಲ್ಲಿ ಠಾಣೆಯ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಸಿಪಿಸಿ-1094 ಮಂಜುನಾಥ ಲಕ್ಕಾಪುರ
ಸಿಪಿಸಿ-603 ಬಿಲಾಲ್ ಹೃದ ಸಿದ್ದಾಪೂರ
ಸಿಪಿಸಿ-2037 ವಿಜಯ ನಾಯ್ಕ
ಸಿಪಿಸಿ-767 ಸಿದ್ದಪ್ಪ ಕಾಂಬಳೆ
ಈ ಕಾರ್ಯಾಚರಣೆಯು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯ ಸಮರ್ಥ ಕಾರ್ಯವೈಖರಿಯನ್ನು ಪ್ರತಿಬಿಂಬಿಸುತ್ತದೆ. ಸಾಮಾಜಿಕ ಜಾಲತಾಣಗಳ ಮೂಲಕ ನಡೆಯುವ ವಂಚನೆಗಳನ್ನು ಪತ್ತೆಹಚ್ಚುವಲ್ಲಿ ಪೊಲೀಸರ ನಿರಂತರ ಪ್ರಯತ್ನ ಮುಂದುವರಿಯುತ್ತದೆ. 💐💐💐
"ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ವಂಚನೆಗಳ ಬಗ್ಗೆ ಎಚ್ಚರಿಕೆಯಿಂದಿರಿ – ಪೊಲೀಸರ ಬದ್ಧತೆ"
ದೀಪನ್ ಎನ್.ಎಮ್., IPS
ಜಿಲ್ಲಾ ಪೊಲೀಸ್ ಅಧೀಕ್ಷಕರು, ಉತ್ತರ ಕನ್ನಡ
*ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ವಂಚನೆಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದಿರಿ.*

Post a Comment