🔴 ಆರೋಪಿಗಳ ವಿವರಗಳು:
ವಾಸ: ಬೆಳಗುಂಬ, ತುಮಕೂರು
ವಾಸ: ಹೆಬ್ಬಾಳ, ಮೈಸೂರು
ವಾಸ: ದೇವರಯಾಪಟ್ಟಣ, ತುಮಕೂರು
ವಾಸ: ಹಾಸನ (ಮೂಲ: ದೊಡ್ಡಬಳ್ಳಾಪುರ)
▪️ ಘಟನೆ: ದಿನಾಂಕ: 26-07-2026, ರಾತ್ರಿ 7:20 – 8:50
▪️ ಸ್ಥಳ: ಬೆಳಗುಂಬ, ಗರುಡ ಕೆಫೆ ಹತ್ತಿರ, ತುಮಕೂರು
▪️ ಬಲಿಪಶು: ವೀರಣ್ಣ @ ಮಲ್ಲ – ಅಡಿಕೆ ತೋಟದ ಬಳಿ ಕೊಲೆ
▪️ ಪ್ರಕರಣ ಸಂಖ್ಯೆ: ಮೊ.ನಂ. 197/2026, ಕಲಂ 103(1) BNS
▪️ ಠಾಣೆ: ಕ್ಯಾತ್ಸಂದ್ರ ಪೊಲೀಸ್ ಠಾಣೆ
▪️ ತನಿಖಾ ತಂಡ: ಸಿಪಿಐ ರಾಘವೇಂದ್ರ ಕೆ.ಆರ್, ಪಿಎಸ್ಐ ಪ್ರಸನ್ನಕುಮಾರ್ ಕೆ ಮತ್ತು ತಂಡ
▪️ ಬಂಧಿತ ಆರೋಪಿಗಳು: ಚೇತನ್, ಶಿವಕುಮಾರ್, ಕುಮಾರ್, ಸಂದೀಪ್
▪️ ಪ್ರಶಂಸೆ: ಡಿಐಜಿಪಿ ಶ್ರೀ ಎಸ್. ಗಿರೀಶ್ ಐ.ಪಿ.ಎಸ್ ಮತ್ತು ಎಸ್ಪಿ ಅಶೋಕ್.ಕೆ.ವಿ. ಐ.ಪಿ.ಎಸ್
ಮೋಹನ್ ಕುಮಾರ್, ಎ.ಎಸ್.ಐ. ಹನುಮರಂಗಯ್ಯ, ನಿಜಾಮುದ್ದಿನ್, ಸೈಮನ್ ವಿಕ್ಟರ್,
ರಮೇಶ್, ಶಾಂತಕುಮಾರ್ ಕೆ.ಎಸ್., ರಮೇಶ್ ಕೆ, ಗಿರೀಶ್, ಸೈಯದ್ ರಿಫತ್ ಅಲಿ, ಹರೀಶ್,
ಜಿಲ್ಲಾ ಕಛೇರಿ ಸಿಬ್ಬಂದಿ: ನರಸಿಂಹರಾಜು, ರಮೇಶ್, ಜಗದೀಶ್
"ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಶೋಕ್.ಕೆ.ವಿ, ಐ.ಪಿ.ಎಸ್ ರವರು ಮತ್ತು ಕೇಂದ್ರವಲಯ ಡಿ.ಐ.ಜಿ.ಪಿ ರವರಾದ ಶ್ರೀ ಎಸ್. ಗಿರೀಶ್ ಐ.ಪಿ.ಎಸ್ ರವರು ಸದರಿ ಪ್ರಕರಣದಲ್ಲಿ ಆರೋಪಿಗಳನ್ನು ದಸ್ತಗಿರಿ ಮಾಡುವಲ್ಲಿ ಶ್ರಮಿಸಿದ ತನಿಖಾ ತಂಡವನ್ನು ಶ್ಲಾಘಿಸಿದ್ದಾರೆ."
👏🏻 ಕ್ಷಿಪ್ರ, ಸಮರ್ಥ ಮತ್ತು ವೃತ್ತಿಪರ ಕಾರ್ಯಾಚರಣೆಗೆ ಪ್ರಶಂಸೆ
ತುಮಕೂರು: ತುಮಕೂರು ತಾಲ್ಲೂಕು, ಕಸಬಾ ಹೋಬಳಿ, ಬೆಳಗುಂಬ, ಗರುಡ ಕೆಫೆ ಹತ್ತಿರದಲ್ಲಿ ದಿನಾಂಕ: 26-07-2026 ರಂದು ರಾತ್ರಿ 7-20 ರಿಂದ 8-50 ಗಂಟೆಯ ಮದ್ಯದಲ್ಲಿ ವೀರಣ್ಣ @ ಮಲ್ಲ ಎಂಬುವವರ ಕೊಲೆಯಾಗಿತ್ತು. ಈ ಬಗ್ಗೆ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಮೊ.ನಂ. 197/2026 ಕಲಂ 103(1) BNS ರೀತ್ಯ ಪ್ರಕರಣ ದಾಖಲಾಗಿತ್ತು.
ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಶೋಕ್.ಕೆ.ವಿ. ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಸಿ.ಗೋಪಾಲ್ ಕೆ.ಎಸ್.ಪಿ.ಎಸ್ ಮತ್ತು ಪುರುಷೋತ್ತಮ.ಎಂ.ಎಲ್ ಕೆ.ಎಸ್.ಪಿ.ಎಸ್ ರವರ ನೇತೃತ್ವದಲ್ಲಿ, ತುಮಕೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಕೆ.ಆರ್.ಚಂದ್ರಶೇಖರ್ ರವರ ಮುಂದಾಳತ್ವದಲ್ಲಿ ತನಿಖಾ ತಂಡ ರಚಿಸಲಾಗಿತ್ತು.
ಕ್ಯಾತ್ಸಂದ್ರ ಪೊಲೀಸ್ ವೃತ್ತ ನಿರೀಕ್ಷಕರಾದ ರಾಘವೇಂದ್ರ ಕೆ.ಆರ್, ಕ್ಯಾತ್ಸಂದ್ರ ಪೊಲೀಸ್ ಠಾಣೆಯ ಪಿ.ಎಸ್.ಐ-01 ಪ್ರಸನ್ನಕುಮಾರ್ ಕೆ. ಹಾಗೂ ಸಿಬ್ಬಂದಿಗಳಾದ ಮೋಹನ್ ಕುಮಾರ್, ಎ.ಎಸ್.ಐ. ಹನುಮರಂಗಯ್ಯ, ನಿಜಾಮುದ್ದಿನ್, ಸೈಮನ್ ವಿಕ್ಟರ್, ರಮೇಶ್, ಶಾಂತಕುಮಾರ್ ಕೆ.ಎಸ್., ರಮೇಶ್ ಕೆ, ಗಿರೀಶ್, ಸೈಯದ್ ರಿಫತ್ ಅಲಿ, ಹರೀಶ್ ಮತ್ತು ಜಿಲ್ಲಾ ಕಛೇರಿಯ ನರಸಿಂಹರಾಜು, ರಮೇಶ್, ಜಗದೀಶ್ ಅವರುಗಳ ತಂಡವು ತ್ವರಿತವಾಗಿ ಕಾರ್ಯಾಚರಣೆ ನಡೆಸಿತು.
ತನಿಖಾ ತಂಡವು ಈ ಪ್ರಕರಣದಲ್ಲಿ ಕೃತ್ಯವೆಸಗಿದ ಆರೋಪಿಗಳಾದ ಚೇತನ್ @ ಗೂಳಿ, ಶಿವಕುಮಾರ್ @ ಆರ್.ಎಕ್ಸ್ ಹಾಲು, ಕುಮಾರ್ ಡಿ @ ಉಂಡಲೇ, ಮತ್ತು ಸಂದೀಪ್ @ ಹಾಸ್ನ ಅವರನ್ನು ವಶಕ್ಕೆ ಪಡೆದು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದೆ.
ಮಾನ್ಯ ಪೊಲೀಸ್ ಅಧೀಕ್ಷಕರಾದ ಅಶೋಕ್.ಕೆ.ವಿ, ಐ.ಪಿ.ಎಸ್ ರವರು ಮತ್ತು ಕೇಂದ್ರವಲಯ ಡಿ.ಐ.ಜಿ.ಪಿ ರವರಾದ ಶ್ರೀ ಎಸ್. ಗಿರೀಶ್ ಐ.ಪಿ.ಎಸ್ ರವರು ಸದರಿ ತನಿಖಾ ತಂಡದ ಕ್ಷಿಪ್ರ, ಸಮರ್ಥ ಮತ್ತು ವೃತ್ತಿಪರ ಕಾರ್ಯಾಚರಣೆಯನ್ನು ಶ್ಲಾಘಿಸಿದ್ದಾರೆ. 👏🏻
🚔 "ಅಪರಾಧಿಗಳಿಗೆ ಕಡಿವಾಣ – ಸುರಕ್ಷಿತ ಸಮಾಜ ನಿರ್ಮಾಣ"
ತುಮಕೂರು ಜಿಲ್ಲಾ ಪೊಲೀಸ್
ಈ ಲೇಖನವು ಸಂಪೂರ್ಣವಾಗಿ ಸ್ವತಂತ್ರ ಮತ್ತು ಕೃತಿಸ್ವಾಮ್ಯ-ಮುಕ್ತವಾಗಿದೆ
ಕರ್ನಾಟಕ ನ್ಯೂಸ್ 24 ಲೈವ್ – ಸ್ವತಂತ್ರ, ನಿಷ್ಪಕ್ಷಪಾತ, ಸತ್ಯನಿಷ್ಠ ಸುದ್ದಿ
✍️ ಸುದ್ದಿ / ಪ್ರತಿಕ್ರಿಯೆ: karnatakanews24live@gmail.com
#karnatakanews24live #TumakuruPolice #MurderCaseArrest #PoliceAction #KarnatakaPolice #KannadaNews #CrimeDetection #Arrest #AshokKV #DIGPGirish #KyathsandraPolice #ತುಮಕೂರು #ಪೊಲೀಸ್ಕಾರ್ಯಾಚರಣೆ #ಕೊಲೆಪ್ರಕರಣ #ಆರೋಪಿಬಂಧನ #ಕನ್ನಡಸುದ್ದಿ
*ತುಮಕೂರು ಕೊಲೆ ಪ್ರಕರಣ – 4 ಆರೋಪಿಗಳ ಬಂಧನ – ಜುಲೈ 29, 2026*

Post a Comment