▪️ ಬಂಧಿತ ಆರೋಪಿ: ಮಂಜೇಶ್ @ ಹೊಟ್ಟೆಮಂಜ @ ಚೌಟರಿ ಮಂಜ (45 ವರ್ಷ), ಹುರುಳಿ ಚಿಕ್ಕನಹಳ್ಳಿ, ಹೆಸರಘಟ್ಟ ಹೋಬಳಿ, ನೆಲಮಂಗಲ ತಾಲ್ಲೂಕು, ಬೆಂಗಳೂರು ಜಿಲ್ಲೆ
▪️ ವಶಪಡಿಸಿದ ಆಭರಣ: 110 ಗ್ರಾಂ ಚಿನ್ನ (₹17,00,000 ಮೌಲ್ಯ)
▪️ ಪ್ರಕರಣಗಳು: ಅ.ಸಂ. 328/2025, 253/2026, 291/2026, 295/2026
▪️ ಕಾರ್ಯಾಚರಣಾ ತಂಡ: ಎಸ್ಪಿ ಕನ್ನಿಕಾ ಸಿಕ್ರವಾಲ್, ASP ರವಿಶಂಕರ್, ಸಿ.ಆರ್., ಹೆಚ್.ಸಿ.ಜಗದೀಶ್, ಡಿವೈಎಸ್ಪಿ ಕೃಷ್ಣಪ್ಪ ವಿ.
▪️ ಮಾಲೂರು ಪೊಲೀಸ್ ತಂಡ: ಇನ್ಸ್ಪೆಕ್ಟರ್ ರಾಮಪ್ಪ ಗುತ್ತೇರ್, PSI ಶಾಂತಮ್ಮ, ಪ್ರೊ. PSI ದಿಲೀಪ್ ಕುಮಾರ್, ಕುಮಾರಿ ಪವಿತ್ರ, ASI ಮುನಿರಾಜು, ರಮೇಶ್ ಬಾಬು, ಮೂರ್ತಿ, ಮುರಳಿ, ನಾಗರಾಜ್ ಪೂಜಾರ್, ಮೋಹನ್, ಚಾಲಕರು ಆಂಜನೇಯ, ಅಯ್ಯಪ್ಪ
ಕೋಲಾರ: ಇತ್ತೀಚಿನ ದಿನಗಳಲ್ಲಿ ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಹಾಗೂ ಸಾರ್ವಜನಿಕ ಬಸ್ಸುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಬಳಿ ಚಿನ್ನದ ಆಭರಣಗಳ ಕಳುವು ಪ್ರಕರಣಗಳ ಬಗ್ಗೆ ಹೆಚ್ಚು ದೂರುಗಳು ದಾಖಲಾಗಿದ್ದವು. ಈ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಕನ್ನಿಕಾ ಸಿಕ್ರವಾಲ್, IPS ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು.
ಅಪರ ಪೊಲೀಸ್ ಅಧೀಕ್ಷಕರಾದ ಶ್ರೀ ರವಿಶಂಕರ್, ಸಿ.ಆರ್. ಮತ್ತು ಹೆಚ್.ಸಿ. ಜಗದೀಶ್ ಹಾಗೂ ಪೊಲೀಸ್ ಉಪಾಧೀಕ್ಷಕರು ಶ್ರೀ ಕೃಷ್ಣಪ್ಪ ವಿ. ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ವಿಶೇಷ ತಂಡವು ತಮ್ಮ ಅಪ್ತ ಮಾಹಿತಿದಾರರು ಮತ್ತು ಗುಪ್ತ ಮಾಹಿತಿದಾರರ ಸಹಾಯದಿಂದ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಯಿತು.
ಆರೋಪಿ ಮಂಜೇಶ್ @ ಹೊಟ್ಟೆಮಂಜ @ ಚೌಟರಿ ಮಂಜ ಈ ಕೆಳಕಂಡ ಪ್ರಕರಣಗಳಲ್ಲಿ ಭಾಗಿಯಾಗಿರುವುದು ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ:
▪️ ಅಪರಾಧ ಸಂಖ್ಯೆ 328/2025
▪️ ಅಪರಾಧ ಸಂಖ್ಯೆ 253/2026
▪️ ಅಪರಾಧ ಸಂಖ್ಯೆ 291/2026
▪️ ಅಪರಾಧ ಸಂಖ್ಯೆ 295/2026
ಆರೋಪಿಯು ಬೀಗಹಾಕಿರುವ ಮನೆಗಳನ್ನು ಹಗಲಿನ ವೇಳೆಯಲ್ಲಿ ನೋಡಿಕೊಂಡು ರಾತ್ರಿವೇಳೆ ಮನೆಯ ಬೀಗ ಒಡೆದು ಕಳ್ಳತನ ಮಾಡುತ್ತಿದ್ದ. ಜೊತೆಗೆ ಸಾರ್ವಜನಿಕ ಬಸ್ಸುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಬಳಿ ಚಿನ್ನದ ಆಭರಣಗಳನ್ನು ಕದಿಯುತ್ತಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
"ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಹೆಚ್ಚಿನ ದೂರುಗಳು ದಾಖಲಾಗಿದ್ದ ಹಿನ್ನೆಲೆಯಲ್ಲಿ ವಿಶೇಷ ತಂಡವನ್ನು ರಚಿಸಿ ಕಾರ್ಯಾಚರಣೆ ನಡೆಸಲಾಯಿತು. ಮಾಲೂರು ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯವರ ಪ್ರಯತ್ನದಿಂದ ಆರೋಪಿ ಬಂಧನಕ್ಕೊಳಪಟ್ಟಿದ್ದಾನೆ. ಈ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ನಾನು ಮನಃಪೂರ್ವಕವಾಗಿ ಶ್ಲಾಘಿಸುತ್ತೇನೆ."
👮 "ಸಾರ್ವಜನಿಕರ ಸುರಕ್ಷತೆಗಾಗಿ ಪೊಲೀಸ್ ಇಲಾಖೆಯ ಬದ್ಧತೆ ಮುಂದುವರಿಯುತ್ತದೆ"
ವಿಚಾರಣೆಯ ವೇಳೆ ಆರೋಪಿತನಿಂದ ಸುಮಾರು ₹17,00,000 ಮೌಲ್ಯದ 110 ಗ್ರಾಂ ತೂಕದ ಚಿನ್ನದ ವಿವಿಧ ರೀತಿಯ ಆಭರಣಗಳನ್ನು ವಶಪಡಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ. 💐💐💐
"ಅಪರಾಧಿಗಳಿಗೆ ಯಾವುದೇ ರಿಯಾಯತಿ ಇಲ್ಲ – ಕೋಲಾರ ಪೊಲೀಸರ ನಿರಂತರ ಕಣ್ಗಾವಲು"
ಶ್ರೀಮತಿ ಕನ್ನಿಕಾ ಸಿಕ್ರವಾಲ್, IPS
ಜಿಲ್ಲಾ ಪೊಲೀಸ್ ಅಧೀಕ್ಷಕರು, ಕೋಲಾರ
*ಸಾರ್ವಜನಿಕರ ಆಸ್ತಿ ಮತ್ತು ಸುರಕ್ಷತೆಗಾಗಿ ಕೋಲಾರ ಜಿಲ್ಲಾ ಪೊಲೀಸರ ಸಮಾಜಮುಖಿ ಕಾರ್ಯಾಚರಣೆ.*

Post a Comment