Top News

ಮದ್ಯರಾತ್ರಿ ಮನೆಗೆ ನುಗ್ಗಿ 50 ಗ್ರಾಂ ಚಿನ್ನದ ಸರ ಕಳವು: ತಮಿಳುನಾಡಿನ ಕಳ್ಳನನ್ನು ತುಮಕೂರು ಪೊಲೀಸರು ಬಂಧಿಸಿದರು; 40 ಗ್ರಾಂ ಚಿನ್ನ ವಶ

ತುಮಕೂರು ಪೊಲೀಸರ ಯಶಸ್ವಿ ಕಾರ್ಯಾಚರಣೆ: ಮನೆಗೆ ನುಗ್ಗಿ ಚಿನ್ನ ಕಳವು ಮಾಡಿದ್ದ ಅಂತರರಾಜ್ಯ ಕಳ್ಳನ ಬಂಧನ – 40 ಗ್ರಾಂ ಚಿನ್ನ ವಶ | ಕರ್ನಾಟಕ ನ್ಯೂಸ್ 24 ಲೈವ್
🚨 ತುಮಕೂರು ಪೊಲೀಸರ ಯಶಸ್ವಿ ಕಾರ್ಯಾಚರಣೆ – ಅಂತರರಾಜ್ಯ ಕಳ್ಳನ ಬಂಧನ
ವೇಗವಾದ ಮಾಹಿತಿ | ಜನರ ವಿಶ್ವಾಸ | ಕನ್ನಡದ ನಿಖರ ಸುದ್ದಿ
📅 ಜುಲೈ 1, 2026 | ತುಮಕೂರು ವಿಶೇಷ ವರದಿ 🚨 ಮನೆಗೆ ನುಗ್ಗಿ ಚಿನ್ನ ಕಳವು – 40 ಗ್ರಾಂ ಚಿನ್ನ ವಶ
ತುಮಕೂರು ಪೊಲೀಸರ ಯಶಸ್ವಿ ಕಾರ್ಯಾಚರಣೆ: ಮನೆಗೆ ನುಗ್ಗಿ ಚಿನ್ನ ಕಳವು ಮಾಡಿದ್ದ ಅಂತರರಾಜ್ಯ ಕಳ್ಳನ ಬಂಧನ – 40 ಗ್ರಾಂ ಚಿನ್ನ ವಶ; ಎಸ್ಪಿ ಅಶೋಕ್ ಕೆ.ವಿ, ಡಿಐಜಿ ಗಿರೀಶ್ ಪ್ರಶಂಸೆ
ತುಮಕೂರು ನಗರದ ಆದರ್ಶ ನಗರದ ವಾಸಿ ವಸಂತಕುಮಾರ್ ಅವರ ಮನೆಯಲ್ಲಿ ಮದ್ಯರಾತ್ರಿ ಸುಮಾರು 2-30 ಗಂಟೆಗೆ ನುಗ್ಗಿ 50 ಗ್ರಾಂ ಚಿನ್ನದ ಸರ ಕಳವು ಮಾಡಿದ್ದ ಅಂತರರಾಜ್ಯ ಕಳ್ಳನನ್ನು ತುಮಕೂರು ಪೊಲೀಸರು ತಮಿಳುನಾಡು ರಾಜ್ಯದಲ್ಲಿ ದಸ್ತಗಿರಿ ಮಾಡಿದ್ದಾರೆ. ಆರೋಪಿಯಿಂದ 40 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ.
📋 ಪ್ರಕರಣದ ಪ್ರಮುಖ ಮಾಹಿತಿ:

▪️ ಘಟನೆಯ ದಿನಾಂಕ: 27/04/2026 (ಮದ್ಯರಾತ್ರಿ 2-30 ಗಂಟೆ)
▪️ ಸ್ಥಳ: ಆದರ್ಶ ನಗರ, ತುಮಕೂರು – ವಸಂತಕುಮಾರ್ ನಿವಾಸ
▪️ ಕಳವಾದ ಚಿನ್ನ: 50 ಗ್ರಾಂ ಚಿನ್ನದ ಸರ
▪️ ಪ್ರಕರಣ ಸಂಖ್ಯೆ: ತುಮಕೂರು ನಗರ ಪೊಲೀಸ್ ಠಾಣಾ ಮೊ.ನಂ: 133/2026, ಕಲಂ 331(4), 305(ಎ) BNS-2023
▪️ ಬಂಧಿತ ಆರೋಪಿ: ಮುತ್ತುಕೃಷ್ಣನ್ ಬಿನ್ ಹರಿಕೃಷ್ಣನ್, 37 ವರ್ಷ, ತಮಿಳುನಾಡು
▪️ ವಶಪಡಿಸಿಕೊಂಡಿದ್ದು: 40 ಗ್ರಾಂ ಚಿನ್ನ

ತುಮಕೂರು: ತುಮಕೂರು ನಗರದ ಆದರ್ಶ ನಗರದ ವಾಸಿ ವಸಂತಕುಮಾರ್ ಅವರ ಮನೆಯಲ್ಲಿ ಮದ್ಯರಾತ್ರಿ ಸುಮಾರು 2-30 ಗಂಟೆಗೆ ನುಗ್ಗಿ 50 ಗ್ರಾಂ ಚಿನ್ನದ ಸರ ಕಳವು ಮಾಡಿದ್ದ ಅಂತರರಾಜ್ಯ ಕಳ್ಳನನ್ನು ತುಮಕೂರು ಪೊಲೀಸರು ತಮಿಳುನಾಡು ರಾಜ್ಯದಲ್ಲಿ ದಸ್ತಗಿರಿ ಮಾಡಿದ್ದಾರೆ.

ದಿನಾಂಕ: 27/04/2026 ರಂದು ಮದ್ಯರಾತ್ರಿ ಸುಮಾರು 2-30 ಗಂಟೆಯ ಸಮಯದಲ್ಲಿ ಆದರ್ಶ ನಗರದ ವಾಸಿ ವಸಂತಕುಮಾರ್ ಅವರ ಮನೆಯಲ್ಲಿ ಪಿರ್ಯಾದಿಯ ತಮ್ಮ ಮೋಹನ್‌ಕುಮಾರ್ ಮತ್ತು ಅವರ ಹೆಂಡತಿ ನಯನಾ ಅವರು ಮನೆಯ ಮೇಲ್ಬಾಗದ ಒಂದು ರೂಮಿನಲ್ಲಿ ಮಲಗಿದ್ದರು. ಮಲಗುವ ಸಮಯದಲ್ಲಿ ನಯನಾ ಅವರು ತನ್ನ ಕೊರಳಲ್ಲಿದ್ದ ಸುಮಾರು 50 ಗ್ರಾಂ ಚಿನ್ನದ ಸರವನ್ನು ರೂಮಿನ ಮಿರರ್ ಕಬೋರ್ಡನ ಮೇಲೆ ಇಟ್ಟಿದ್ದರು.

ಮಲಗಿದ್ದ ಸಮಯದಲ್ಲಿ ಯಾರೋ ಅಪರಿಚಿತ ಕಳ್ಳನು ಮನೆಯ ಮೇಲ್ಬಾಗದಿಂದ ಬಂದು ಅಕ್ರಮವಾಗಿ ಮನೆ ಒಳಗಡೆ ಪ್ರವೇಶಿಸಿ ಸದರಿ ಚಿನ್ನದ ಸರವನ್ನು ಕಳವು ಮಾಡಿಕೊಂಡು ಹೋಗಿದ್ದನು. ಈ ಬಗ್ಗೆ ತುಮಕೂರು ನಗರ ಪೊಲೀಸ್ ಠಾಣಾ ಮೊ.ನಂ: 133/2026, ಕಲಂ 331(4), 305(ಎ) ಬಿ.ಎನ್.ಎಸ್-2023 ರ ರೀತ್ಯ ಪ್ರಕರಣ ದಾಖಲಾಗಿ ತನಿಖೆಯಲ್ಲಿತ್ತು.

🚨 ಬಂಧಿತ ಆರೋಪಿ:

ಮುತ್ತುಕೃಷ್ಣನ್ ಬಿನ್ ಹರಿಕೃಷ್ಣನ್, 37 ವರ್ಷ, ತರಕಾರಿ ವ್ಯಾಪಾರ,
ವಾಸ: 1/14 ಸತುವೇತಿ ನಗರ್, ಸಂಗನೂರ್ ಮೆನ್ ರೋಡ್, ಗಣಪತಿ ಬಡಾವಣೆ, ಕೊಯಮತ್ತೂರ್, ತಮಿಳುನಾಡು.
📌 ತನಿಖಾ ತಂಡ:

ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಶೋಕ್.ಕೆ.ವಿ. ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸಿ.ಗೋಪಾಲ್ ಕೆ.ಎಸ್.ಪಿ.ಎಸ್ ಮತ್ತು ಪುರುಷೋತ್ತಮ.ಎಂ.ಎಲ್ ಕೆ.ಎಸ್.ಪಿ.ಎಸ್ ರವರ ನೇತೃತ್ವದಲ್ಲಿ, ತುಮಕೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಕೆ.ಆರ್.ಚಂದ್ರಶೇಖರ್ ಅವರ ಮಾರ್ಗಸೂಚನೆ ಮೇರೆಗೆ ನಗರ ಪೊಲೀಸ್ ಇನ್ಸ್‌ಪೆಕ್ಟರ್ ಅವಿನಾಶ್ ವಿ., ತುಮಕೂರು ನಗರ ಪೊಲೀಸ್ ಠಾಣೆಯ ಪಿ.ಎಸ್.ಐ ಮಂಜುಳಾ.ಎಂ.ಎನ್ ಮತ್ತು ಸಿಬ್ಬಂದಿಗಳು ಆರೋಪಿಯನ್ನು ಪತ್ತೆ ಮಾಡುವಲ್ಲಿ ಶ್ರಮಿಸಿದರು.
🌟 ಅಧಿಕಾರಿಗಳ ಪ್ರಶಂಸೆ:

ಆರೋಪಿಯನ್ನು ಬಂಧಿಸುವಲ್ಲಿ ಶ್ರಮಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗಳ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರಾದ ಅಶೋಕ್.ಕೆ.ವಿ, ಐ.ಪಿ.ಎಸ್ ರವರು ಮತ್ತು ಕೇಂದ್ರವಲಯ ಡಿ.ಐ.ಜಿ.ಪಿ ರವರಾದ ಎಸ್. ಗಿರೀಶ್ ಐ.ಪಿ.ಎಸ್ ರವರು ಶ್ಲಾಘಿಸಿರುತ್ತಾರೆ.

#TumakuruPolice #InterStateThief #GoldTheft #Arrest #AshokKV #KannadaNews – ತುಮಕೂರು ಪೊಲೀಸರ ಯಶಸ್ವಿ ಕಾರ್ಯಾಚರಣೆಯು ಅಂತರರಾಜ್ಯ ಕಳ್ಳತನ ಪ್ರಕರಣಗಳಿಗೆ ಕಡಿವಾಣವಾಗಿದೆ.

*ಕಳ್ಳತನ ಪ್ರಕರಣಗಳ ಪತ್ತೆಗೆ ಪೊಲೀಸರ ಕಾರ್ಯಾಚರಣೆ ಮುಂದುವರಿಯಲಿದೆ.*

Post a Comment

Previous Post Next Post