▪️ ನಿರ್ದೇಶನ: ಕೃಷಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ಅವರ ಕಟ್ಟುನಿಟ್ಟಿನ ನಿರ್ದೇಶನ
▪️ ದಾಳಿ ನಡೆಸಿದ ತಂಡ: ಕೃಷಿ ಇಲಾಖೆಯ ವಿಚಕ್ಷಣಾ ದಳದ ಮುಖ್ಯಸ್ಥರ ನೇತೃತ್ವದಲ್ಲಿ ಬಳ್ಳಾರಿ ಜಿಲ್ಲೆಯ ಸಹಾಯಕ ಕೃಷಿ ನಿರ್ದೇಶಕರು, ಸಿರಗುಪ್ಪ ಸಹಾಯಕ ಕೃಷಿ ನಿರ್ದೇಶಕರು (ಜಾರಿದಳ) ಮತ್ತು ಕೃಷಿ ಅಧಿಕಾರಿ (ತಾಂತ್ರಿಕ)
▪️ ಸ್ಥಳ: ಸಿರಗುಪ್ಪ ಬಳಿ, ಬಳ್ಳಾರಿ ಜಿಲ್ಲೆ
▪️ ವಶಪಡಿಸಿಕೊಂಡದ್ದು: ಸುಮಾರು ₹18 ಲಕ್ಷ ಮೌಲ್ಯದ 680 ಚೀಲ ರಸಗೊಬ್ಬರ (ಲಾರಿ ಸಮೇತ)
▪️ ಶಂಕಿತ ಅಕ್ರಮ: ವಿತರಕರಿಂದ ಸಬ್ಸಿಡಿಯ ರಸಗೊಬ್ಬರ ಖರೀದಿ ಮಾಡಿ ಕೇರಳದ ಕೈಗಾರಿಕೆಗಳಿಗೆ ಸಾಗಿಸುತ್ತಿರುವ ಶಂಕೆ
▪️ ಕಾನೂನು ಕ್ರಮ: ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ
ಬೆಂಗಳೂರು: ಕೃಷಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ಅವರು ಕೃಷಿ ಇಲಾಖೆಯ ಅಧಿಕಾರ ವಹಿಸಿಕೊಂಡ ನಂತರ ಇಲಾಖೆಯ ಪ್ರಗತಿ ಪರಿಶೀಲನೆ ಹಾಗೂ ಕಾರ್ಯನಿರ್ವಹಣೆಯ ಬಗ್ಗೆ ಸಭೆಯನ್ನು ನಡೆಸಿ, ಕೃಷಿ ಪರಿಕರಗಳ ಗುಣಮಟ್ಟ ನಿಯಂತ್ರಣದ ಬಗ್ಗೆ ಆದ್ಯತೆ ನೀಡಲು ಕಟ್ಟುನಿಟ್ಟಿನ ನಿರ್ದೇಶನವನ್ನು ನೀಡಿದ್ದರು.
ಈ ಹಿನ್ನೆಲೆಯಲ್ಲಿ, ಕೃಷಿ ಇಲಾಖೆ ವಿಚಕ್ಷಣಾ ದಳವು ಗುರುವಾರ ರಾತ್ರಿ ಸಿರಗುಪ್ಪ ಬಳಿ ದಾಳಿ ಮಾಡಿ ಸುಮಾರು ₹18 ಲಕ್ಷ ಮೌಲ್ಯದ 680 ಚೀಲ ರಸಗೊಬ್ಬರವನ್ನು ವಶಪಡಿಸಿಕೊಂಡಿದೆ.
"ಕೃಷಿ ಇಲಾಖೆಯ ವಿಚಕ್ಷಣಾ ದಳದ ಮುಖ್ಯಸ್ಥರ ನೇತೃತ್ವದಲ್ಲಿ ಬಳ್ಳಾರಿ ಜಿಲ್ಲೆಯ ಸಹಾಯಕ ಕೃಷಿ ನಿರ್ದೇಶಕರು, ಸಿರಗುಪ್ಪ ಸಹಾಯಕ ಕೃಷಿ ನಿರ್ದೇಶಕರು (ಜಾರಿದಳ) ಮತ್ತು ಕೃಷಿ ಅಧಿಕಾರಿ (ತಾಂತ್ರಿಕ) ಇವರ ತಂಡ ದಾಳಿ ನಡೆಸಿ ಅಕ್ರಮ ಸಾಗಾಣಿಕೆಯನ್ನು ಪತ್ತೆ ಮಾಡಿದ್ದು, ಲಾರಿ ಸಮೇತ 680 ಚೀಲ ರಸಗೊಬ್ಬರ ವಶಪಡಿಸಿಕೊಂಡಿದ್ದಾರೆ."
ವಿತರಕರಿಂದ ಸಬ್ಸಿಡಿಯ ರಸಗೊಬ್ಬರ ಖರೀದಿ ಮಾಡಿ ಕೇರಳದ ಕೈಗಾರಿಕೆಗಳಿಗೆ ಸಾಗಿಸುತ್ತಿರುವ ಶಂಕೆ ಇದ್ದು, ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೃಷಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ಅವರು ಕಳಪೆ ಬೀಜ, ಪೀಡೆನಾಶಕ ಮಾರಾಟ ತಡೆ, ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟದಂತಹ ಅಕ್ರಮಗಳನ್ನು ತಡೆಗಟ್ಟುವ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಅಧಿಕಾರಿಗಳು ಜಾಗೃತರಾಗಿ ದಾಳಿ ಆರಂಭಿಸಿದ್ದಾರೆ.
ಕಳೆದ ತಿಂಗಳಿನಲ್ಲಿ ₹2.88 ಕೋಟಿ ಮೌಲ್ಯದ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ಜಪ್ತು ಮಾಡಿ ಒಟ್ಟು 49 ಪ್ರಕರಣಗಳಲ್ಲಿ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲಾಗಿದೆ.
₹50.22 ಲಕ್ಷ ಮೌಲ್ಯದ 113.05 ಕ್ವಿಂಟಾಲ್ ಬಿತ್ತನೆ ಬೀಜಗಳನ್ನು ಜಪ್ತು ಮಾಡಲಾಗಿದೆ. ಪ್ರಮುಖವಾಗಿ ₹50.13 ಲಕ್ಷ ಮೊತ್ತದ ಪರವಾನಗಿ ಇಲ್ಲದೇ ಮಾರಾಟ ಮಾಡುತ್ತಿದ್ದ ಅವರೆ, ಅಲಸಂದೆ ಮತ್ತು ಮುಸುಕಿನ ಜೋಳ ಬಿತ್ತನೆ ಬೀಜಗಳನ್ನು ಚಿಕ್ಕಬಳ್ಳಾಪುರ, ಹಾಸನ ಹಾಗೂ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಜಪ್ತು ಮಾಡಲಾಗಿದೆ.
₹1.89 ಕೋಟಿ ಮೌಲ್ಯದ 487.8 ಮೆಟ್ರಿಕ್ ಟನ್ ರಸಗೊಬ್ಬರವನ್ನು ಜಪ್ತು ಮಾಡಲಾಗಿದೆ. ಕೃಷಿಯೇತರ ಬಳಕೆಗೆ ಸಾಗಿಸಲು ದಾಸ್ತಾನು ಮಾಡಿದ್ದ ₹51.52 ಲಕ್ಷ ಮೊತ್ತದ 86.2 ಮೆಟ್ರಿಕ್ ಟನ್ ಸಹಾಯಧನದ ಯೂರಿಯಾ ರಸಗೊಬ್ಬರವನ್ನು ಕಲಬುರಗಿ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ಜಪ್ತು ಮಾಡಲಾಗಿದೆ.
ಪರವಾನಗಿ ಇಲ್ಲದೇ ದಾಸ್ತಾನು ಮಾಡಿದ್ದ ₹86.49 ಲಕ್ಷ ಮೊತ್ತದ 139.02 ಮೆಟ್ರಿಕ್ ಟನ್ ಮಿಶ್ರಿತ ರಸಗೊಬ್ಬರವನ್ನು ಜಪ್ತು ಮಾಡಿ ದಾವಣಗೆರೆ ಜಿಲ್ಲೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗಿದೆ.
₹9.12 ಲಕ್ಷ ಮೊತ್ತದ 2640 ಲೀಟರ್ ಜೈವಿಕ ಉತ್ಪನ್ನಗಳನ್ನು ಹಾಗೂ ₹49.46 ಲಕ್ಷ ಮೌಲ್ಯದ 662.9 ಲೀ. ಹಾಗೂ 2492 ಕೆ.ಜಿ. ಪೀಡೆನಾಶಕಗಳನ್ನು ಜಪ್ತು ಮಾಡಲಾಗಿದೆ.
ಪ್ರಮುಖವಾಗಿ ಪರವಾನಗಿಯಲ್ಲಿ ಸೇರ್ಪಡೆ ಮಾಡದೇ ಹಾಗೂ ಅವಧಿ ಮೀರಿದ ಪೀಡೆನಾಶಕಗಳನ್ನು ಮಾರಾಟ ಮಾಡುತ್ತಿದ್ದ ಸಂಬಂಧ ₹32.24 ಲಕ್ಷ ಮೊತ್ತದ 375 ಲೀ. ಹಾಗೂ 1982 ಕೆ.ಜಿ. ಪೀಡೆನಾಶಗಳನ್ನು ಕೊಪ್ಪಳ, ರಾಯಚೂರು ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಜಪ್ತು ಮಾಡಲಾಗಿದೆ.
🌾 "ಕೃಷಿ ಸಚಿವರ ಕಟ್ಟುನಿಟ್ಟಿನ ನಿರ್ದೇಶನದಲ್ಲಿ ಅಕ್ರಮ ರಸಗೊಬ್ಬರ ಸಾಗಾಣಿಕೆಗೆ ಕಡಿವಾಣ!"
#karnatakanews24live #Agriculture #FertilizerSeizure #PMNarendraSwamy #VigilanceSquad #KannadaNews
ಈ ಲೇಖನವು ಸಂಪೂರ್ಣವಾಗಿ ಸ್ವತಂತ್ರ ಮತ್ತು ಕೃತಿಸ್ವಾಮ್ಯ-ಮುಕ್ತವಾಗಿದೆ
ಕರ್ನಾಟಕ ನ್ಯೂಸ್ 24 ಲೈವ್ – ಸ್ವತಂತ್ರ, ನಿಷ್ಪಕ್ಷಪಾತ, ಸತ್ಯನಿಷ್ಠ ಸುದ್ದಿ
✍️ ಸುದ್ದಿ / ಪ್ರತಿಕ್ರಿಯೆ: karnatakanews24live@gmail.com
#karnatakanews24live #Agriculture #FertilizerSeizure #PMNarendraSwamy #VigilanceSquad #Siraguppa #Ballari #KannadaNews #BreakingNews #Karnataka #Farmers #Fertilizer #AgricultureDepartment #ಕೃಷಿ #ರಸಗೊಬ್ಬರ #ವಿಚಕ್ಷಣಾದಳ #ಸಿರಗುಪ್ಪ #ಕನ್ನಡಸುದ್ದಿ
*ಸಿರಗುಪ್ಪ: ₹18 ಲಕ್ಷ ಮೌಲ್ಯದ 680 ಚೀಲ ರಸಗೊಬ್ಬರ ವಶ – ಕೃಷಿ ಸಚಿವರ ನಿರ್ದೇಶನದಲ್ಲಿ ವಿಚಕ್ಷಣಾ ದಳದ ದಾಳಿ – ಸೆಪ್ಟೆಂಬರ್ 2026*

Post a Comment