▪️ ಹಿಂದಿನ ಅಧ್ಯಕ್ಷರು: ಜಸ್ಟಿಸ್ ಶ್ರೀ ಎನ್.ಕೆ.ಸುಧೀಂದ್ರ ರಾವ್ – ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳು
▪️ ಅಧಿಕಾರಾವಧಿ ಅಂತ್ಯ: 31-07-2026
▪️ ಸರ್ಕಾರದ ಅಧಿಸೂಚನೆ: ಹೆಚ್ಡಿ/112/ಪಿಪಿಎ/2026, ದಿನಾಂಕ 14-08-2026
▪️ ಸ್ಥಾನ ತೆರವು: 1 ತಿಂಗಳು ಕಳೆದಿದೆ – ನೂತನ ಅಧ್ಯಕ್ಷರ ನೇಮಕವಾಗಿಲ್ಲ
▪️ ಪ್ರಕರಣಗಳ ಸ್ಥಿತಿ:
▪️ ಹಲವಾರು ಪ್ರಕರಣಗಳು ದಾಖಲಾಗಿವೆ
▪️ ಉಚ್ಚ ನ್ಯಾಯಾಲಯದ ನಿರ್ದೇಶನಕ್ಕೊಳಪಟ್ಟ ಪ್ರಕರಣಗಳು
▪️ ದೂರುದಾರರ ಸ್ವಾತಂತ್ರ್ಯ ಮತ್ತು ಹಕ್ಕುಗಳಿಗೆ ಸಂಬಂಧಿಸಿದ ದೂರುಗಳು
▪️ ಕೆಲವು ಪ್ರಕರಣಗಳು ಅಂತಿಮ ವಿಲೇವಾರಿ ಹಂತದಲ್ಲಿವೆ
▪️ ಪರಿಣಾಮಗಳು:
▪️ ಪ್ರಕರಣಗಳ ತ್ವರಿತ ವಿಲೇವಾರಿಗೆ ಅಡಚಣೆ
▪️ ಆಡಳಿತಾತ್ಮಕ ನಿರಂತರತೆಗೆ ಧಕ್ಕೆ
▪️ ದೂರುದಾರರ ಹಿತಾಸಕ್ತಿಯ ಮೇಲೆ ನೇರ ಪರಿಣಾಮ
▪️ ಸಾರ್ವಜನಿಕ ವಿಶ್ವಾಸಾರ್ಹತೆಗೆ ಧಕ್ಕೆ
"ಸಕಾಲದಲ್ಲಿ ದೂರುದಾರರ ದೂರುಗಳನ್ನು ತ್ವರಿತಗತಿಯಲ್ಲಿ ವಿಲೇ ಮಾಡಲು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರಕ್ಕೆ ನೂತನ ಅಧ್ಯಕ್ಷರ ನೇಮಕಾತಿ ಮಾಡಲು ತ್ವರಿತವಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ" ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಲಾಗಿದೆ.
ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದಲ್ಲಿ ಅಧ್ಯಕ್ಷರ ಸ್ಥಾನ ತೆರವುಗೊಂಡು 1 ತಿಂಗಳು ಕಳೆದಿದ್ದು, ನೂತನ ಅಧ್ಯಕ್ಷರ ನೇಮಕವಾಗದಿರುವುದರಿಂದ ಪ್ರಕರಣಗಳ ತ್ವರಿತ ವಿಲೇವಾರಿ ಮತ್ತು ಆಡಳಿತಾತ್ಮಕ ನಿರಂತರತೆಗೆ ಅಡಚಣೆ ಉಂಟಾಗಿದೆ.
ಪ್ರಾಧಿಕಾರದ ಸದಸ್ಯ ಮೋಹನ್ ಕುಮಾರ್ ದಾನಪ್ಪ ಅವರು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿ, ತ್ವರಿತವಾಗಿ ನೂತನ ಅಧ್ಯಕ್ಷರ ನೇಮಕಾತಿ ಮಾಡುವಂತೆ ಕೋರಿದ್ದಾರೆ.
ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಜಸ್ಟಿಸ್ ಶ್ರೀ ಎನ್.ಕೆ.ಸುಧೀಂದ್ರ ರಾವ್ ಅವರ ಅಧಿಕಾರವಧಿಯು 31-07-2026ರಂದು ಪೂರ್ಣಗೊಂಡಿದ್ದು, ಸರ್ಕಾರದ ಅಧಿಸೂಚನೆ ಸಂಖ್ಯೆ: ಹೆಚ್ಡಿ/112/ಪಿಪಿಎ/2026, ದಿನಾಂಕ: 14-08-2026ರಲ್ಲಿ ಬಿಡುಗಡೆಗೊಳಿಸಲಾಗಿದೆ.
ಪ್ರಾಧಿಕಾರದಲ್ಲಿ ಹಲವಾರು ಪ್ರಕರಣಗಳು ದಾಖಲಾಗಿದ್ದು, ಗೌರವಾನ್ವಿತ ಕರ್ನಾಟಕ ಉಚ್ಚ ನ್ಯಾಯಾಲಯದ ನಿರ್ದೇಶನಕ್ಕೊಳಪಟ್ಟ ಪ್ರಕರಣಗಳು ಮತ್ತು ದೂರುದಾರರ ಸ್ವಾತಂತ್ರ್ಯ ಹಾಗೂ ಹಕ್ಕುಗಳಿಗೆ ಸಂಬಂಧಿಸಿದ ದೂರುಗಳು ಅಂತಿಮ ವಿಲೇವಾರಿ ಹಂತದಲ್ಲಿವೆ.
ಅಧ್ಯಕ್ಷರ ಸ್ಥಾನ ತೆರವು/ಖಾಲಿಯಾಗಿರುವುದರಿಂದ ಪ್ರಕರಣಗಳ ತ್ವರಿತ ವಿಲೇವಾರಿ ಹಾಗೂ ಆಡಳಿತಾತ್ಮಕ ನಿರಂತರತೆಗೆ ಅಡಚಣೆ ಉಂಟಾಗಿ ದೂರುದಾರರ ಹಿತಾಸಕ್ತಿಯ ಮೇಲೆ ನೇರ ಪರಿಣಾಮ ಬೀರುತ್ತಿದೆ.
ಪ್ರಾಧಿಕಾರದ ಮತ್ತು ಸಾರ್ವಜನಿಕರ ವಿಶ್ವಾಸಾರ್ಹತೆಗೆ ಧಕ್ಕೆ ಯಾಗುತ್ತಿದ್ದು, ಪ್ರಾಧಿಕಾರಕ್ಕೆ ಅಧ್ಯಕ್ಷರ ಸೇವೆಯು ಅತ್ಯಗತ್ಯವಾಗಿರುತ್ತದೆ.
ಸದಸ್ಯ ಮೋಹನ್ ಕುಮಾರ್ ದಾನಪ್ಪ ಅವರು "ಸಕಾಲದಲ್ಲಿ ದೂರುದಾರರ ದೂರುಗಳನ್ನು ತ್ವರಿತಗತಿಯಲ್ಲಿ ವಿಲೇ ಮಾಡಲು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರಕ್ಕೆ ನೂತನ ಅಧ್ಯಕ್ಷರ ನೇಮಕಾತಿ ಮಾಡಲು ತ್ವರಿತವಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ" ಕೋರಿದ್ದಾರೆ.
📜 "ಪೊಲೀಸ್ ದೂರುಗಳ ಪ್ರಾಧಿಕಾರಕ್ಕೆ ನೂತನ ಅಧ್ಯಕ್ಷರ ನೇಮಕ – ಸಾರ್ವಜನಿಕ ಹಿತಕ್ಕಾಗಿ ತ್ವರಿತ ಕ್ರಮ ಅಗತ್ಯ!"
#PoliceComplaintsAuthority #ChairmanAppointment #Karnataka #KannadaNews

Post a Comment