Top News

ಸಂಜೀವಿನಿ ಯುಗಾದಿ ಮೇಳಕ್ಕೆ ಭರ್ಜರಿ ಸ್ಪಂದನೆ: ಮೊದಲ ದಿನವೇ ₹12.45 ಲಕ್ಷ ವಹಿವಾಟು




ಚಿಕ್ಕಬಳ್ಳಾಪುರ: ಜಿಲ್ಲಾ ಪಂಚಾಯತ್ ವತಿಯಿಂದ ಯುಗಾದಿ ಹಾಗೂ ರಂಜಾನ್ ಹಬ್ಬಗಳ ಅಂಗವಾಗಿ ಆಯೋಜಿಸಿರುವ ಸಂಜೀವಿನಿ ಡೇ NRLM ಮಹಿಳಾ ಸ್ವಸಹಾಯ ಸಂಘಗಳ ವಿಶೇಷ ಹೋಳಿಗೆ ಕಿಟ್ ಮೇಳಕ್ಕೆ ಮೊದಲ ದಿನವೇ ಭರ್ಜರಿ ಸ್ಪಂದನೆ ವ್ಯಕ್ತವಾಗಿದೆ.


ಮಾರ್ಚ್ 16, 2026ರಂದು ನಡೆದ ಮೇಳದ ಮೊದಲ ದಿನದಲ್ಲಿ ಒಟ್ಟು ₹12,45,633 ರೂಪಾಯಿಗಳ ವಹಿವಾಟು ದಾಖಲಾಗಿದ್ದು, ಜಿಲ್ಲೆಯಾದ್ಯಂತ 1,742 ಹೋಳಿಗೆ ಕಿಟ್‌ಗಳು ಮಾರಾಟವಾಗಿರುವುದು ಗಮನಾರ್ಹವಾಗಿದೆ.


ಈ ಕುರಿತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ CEO Chikkaballapur ಸಂತಸ ವ್ಯಕ್ತಪಡಿಸಿದ್ದು, ಮುಂದಿನ ಎರಡು ದಿನಗಳಲ್ಲಿಯೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಖರೀದಿ ಮಾಡುವ ಮೂಲಕ ಮಹಿಳಾ ಸ್ವಸಹಾಯ ಸಂಘಗಳಿಗೂ ಹಾಗೂ ರೈತರಿಗೆ ಉತ್ತೇಜನ ನೀಡಬೇಕೆಂದು ಕರೆ ನೀಡಿದ್ದಾರೆ.


ಸಂಜೀವಿನಿ ಮೇಳದ ಮೂಲಕ ಸ್ಥಳೀಯ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವುದರ ಜೊತೆಗೆ ಮಹಿಳಾ ಸಬಲೀಕರಣಕ್ಕೆ ಸಹಕಾರಿಯಾಗುತ್ತಿದೆ. ಹಬ್ಬದ ಸಂದರ್ಭದಲ್ಲಿ ಜನರು ಸ್ವದೇಶಿ ಉತ್ಪನ್ನಗಳನ್ನು ಖರೀದಿಸುವ ಮೂಲಕ ಸ್ಥಳೀಯ ಆರ್ಥಿಕತೆಯನ್ನು ಬಲಪಡಿಸುತ್ತಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

Post a Comment

Previous Post Next Post