ಬೆಂಗಳೂರು, ಮಾರ್ಚ್ 22: ಮುಂದೆ ನಡೆಯಲಿರುವ ಟಾಟಾ ಐಪಿಎಲ್ 2026 ಪಂದ್ಯಗಳ ಹಿನ್ನೆಲೆಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೈಗೊಳ್ಳಲಾಗುವ ಬಂದೋಬಸ್ತ್ ವ್ಯವಸ್ಥೆಗಳ ಕುರಿತು ಕೇಂದ್ರ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ ಅಕ್ಷಯ್ ಎಂ. ಹಾಕೆ ಅವರು ಇಂದು ಸ್ಥಳ ಪರಿಶೀಲನೆ ನಡೆಸಿದರು.
ಅವರು ಕ್ರೀಡಾಂಗಣದಲ್ಲಿನ ವಿವಿಧ ಸ್ಟ್ಯಾಂಡ್‌ಗಳು, ಹೋಲ್ಡಿಂಗ್ ಏರಿಯಾ ಹಾಗೂ ಇತರೆ ಪ್ರಮುಖ ಸ್ಥಳಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರು. ನಂತರ ಕೆಎಸ್ಸಿಎ (KSCA), ಡಿಎನ್ಎ (DNA), ಎನ್ಡಿಎ (NDA) ಅಧಿಕಾರಿಗಳು ಮತ್ತು ಸಿಬ್ಬಂದಿಗಳೊಂದಿಗೆ ಸಮಾಲೋಚನೆ ನಡೆಸಿ, ಅಭಿಮಾನಿಗಳ ಸುರಕ್ಷತೆ ಮತ್ತು ಸುಗಮ ಸಂಚಾರ ವ್ಯವಸ್ಥೆಗೆ ಅಗತ್ಯ ಕ್ರಮಗಳ ಕುರಿತು ಚರ್ಚಿಸಿದರು
ಐಪಿಎಲ್ ಪಂದ್ಯಗಳನ್ನು ಗಮನದಲ್ಲಿಟ್ಟುಕೊಂಡು ಪೊಲೀಸ್ ಇಲಾಖೆಯಿಂದ ಸಮಗ್ರ ಭದ್ರತಾ ವ್ಯವಸ್ಥೆಯನ್ನು ಕೈಗೊಳ್ಳಲಾಗುವುದು ಎಂದು ಡಿಸಿಪಿ ಅಕ್ಷಯ್ ಎಂ. ಹಾಕೆ ಅವರು ತಿಳಿಸಿದರು.

Post a Comment