Top News

ಶಿಡ್ಲಘಟ್ಟ ರೈಲು ನಿಲ್ದಾಣದ ಬಳಿ 3 ವರ್ಷದ ಬಾಲಕ ಪತ್ತೆ: ಪೋಷಕರಿಗಾಗಿ ಪೊಲೀಸರ ಹುಡುಕಾಟ

ಶಿಡ್ಲಘಟ್ಟ ನಗರದ ಶಿಡ್ಲಘಟ್ಟ ರೈಲ್ವೆ ನಿಲ್ದಾಣ ಸಮೀಪ ಸುಮಾರು 3 ವರ್ಷದ ಗಂಡು ಮಗು ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಸ್ಥಳೀಯರ ಗಮನಕ್ಕೆ ಬಂದ ಈ ಮಗುವನ್ನು ಬಳಿಕ ಪೊಲೀಸರ ಗಮನಕ್ಕೆ ತರಲಾಗಿದ್ದು, ಪ್ರಸ್ತುತ ಮಗು ಸುರಕ್ಷಿತವಾಗಿದ್ದು ಅದರ ತಂದೆ-ತಾಯಿ ಅಥವಾ ಸಂಬಂಧಿಕರ ಕುರಿತು ಮಾಹಿತಿ ಪತ್ತೆಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಆದರೆ ಇದುವರೆಗೆ ಮಗುವಿನ ಪೋಷಕರ ವಿಳಾಸ ಅಥವಾ ಮಾಹಿತಿ ದೊರೆತಿಲ್ಲ ಎಂದು ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ಮಗುವಿನ ಪೋಷಕರು ಅಥವಾ ಸಂಬಂಧಿಕರು ಯಾರಾದರೂ ಇದ್ದರೆ ತಕ್ಷಣವೇ ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಪೊಲೀಸರು ಮನವಿ ಮಾಡಿದ್ದಾರೆ.

ಮಗುವಿನ ಕುರಿತು ಯಾವುದೇ ಮಾಹಿತಿ ಇದ್ದರೆ Sidlaghatta Town Police Station ನ ಪಿಎಸ್ಐ ಅವರನ್ನು ಸಂಪರ್ಕಿಸಲು ಸೂಚಿಸಲಾಗಿದೆ.

ಸಂಪರ್ಕ ಸಂಖ್ಯೆ: 9480802557

ಪೋಷಕರಿಂದ ತಪ್ಪಿಸಿಕೊಂಡಿರಬಹುದಾದ ಈ ಮಗುವಿನ ಕುರಿತು ಮಾಹಿತಿ ನೀಡಲು ಸಾರ್ವಜನಿಕರು ಸಹಕರಿಸಬೇಕು ಎಂದು ಪೊಲೀಸರು ಕೋರಿದ್ದಾರೆ.


 

Post a Comment

Previous Post Next Post