ಶೇ.100 ಸಕಾಲ ನೋಂದಣಿ ಅನುಪಾತದ ಗುರಿ ಸಾಧನೆಗೆ NEP 2020ರ ಮಹತ್ವಾಕಾಂಕ್ಷಿ ಯೋಜನೆ
ನವದೆಹಲಿ, ಮಾರ್ಚ್ 21: ಸಾರ್ವತ್ರಿಕ ಶಾಲಾ ಶಿಕ್ಷಣದ ಗುರಿ ಸಾಧನೆಗೆ ಮತ್ತಷ್ಟು ಪೂರಕವಾಗುವಂತೆ, ಶಾಲೆಯಿಂದ ಹೊರಗುಳಿದ (ಔಟ್-ಆಫ್-ಸ್ಕೂಲ್) ಮತ್ತು ಶಾಲಾ ತೊರೆದ (ಡ್ರಾಪ್ಔಟ್) ಮಕ್ಕಳನ್ನು ಗುರುತಿಸಿ ದಾಖಲಾತಿ ಮಾಡಿಸಲು ಕೇಂದ್ರ ಸರ್ಕಾರವು ರಾಷ್ಟ್ರವ್ಯಾಪಿ ಅಭಿಯಾನವನ್ನು ಹಮ್ಮಿಕೊಳ್ಳಲಿದೆ.
ಶಿಕ್ಷಣ ಸಚಿವಾಲಯದ ಪ್ರಕಾರ, ಈ ಕ್ರಮವು 2030ರ ವೇಳೆಗೆ ಪೂರ್ವ-ಪ್ರಾಥಮಿಕದಿಂದ ಮಾಧ್ಯಮಿಕ ಮಟ್ಟದವರೆಗೆ ಶೇ.100 ಸಕಲ ನೋಂದಣಿ ಅನುಪಾತ (ಗ್ರಾಸ್ ಎನ್ರೋಲ್ಮೆಂಟ್ ರೇಷಿಯೋ – ಜಿಇಆರ್) ಸಾಧಿಸುವ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) 2020ರ ಗುರಿಯನ್ನು ತಲುಪಲು ನಿರ್ಣಾಯಕ ಪಾತ್ರ ವಹಿಸಲಿದೆ.
ಪ್ರತಿ ಮಗುವೂ ಶಿಕ್ಷಣದ ವ್ಯಾಪ್ತಿಗೆ ಒಳಗಾಗುವುದು ಸಮಾನತೆ ಮತ್ತು ಸರ್ವಸಮಾವೇಶಕ ಶಿಕ್ಷಣ ವ್ಯವಸ್ಥೆಯನ್ನು ನಿರ್ಮಿಸಲು ಅತ್ಯಗತ್ಯ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಈ ಅಭಿಯಾನದ ಮೂಲಕ ವಿವಿಧ ಕಾರಣಗಳಿಂದ ಶಾಲೆಯಿಂದ ದೂರವಿರುವ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಉದ್ದೇಶಿಸಲಾಗಿದೆ.
ಆರ್ಥಿಕ, ಸಾಮಾಜಿಕ ಅಥವಾ ಭೌಗೋಳಿಕ ಕಾರಣಗಳಿಂದ ನಿಯಮಿತ ಶಾಲೆಗಳಿಗೆ ಹಾಜರಾಗಲು ಸಾಧ್ಯವಾಗದ ಮಕ್ಕಳಿಗೆ ಮುಕ್ತ ಶಾಲಾ ಶಿಕ್ಷಣವು (ಓಪನ್ ಸ್ಕೂಲಿಂಗ್) ಪ್ರಾಯೋಗಿಕ ಪರ್ಯಾಯವನ್ನು ಒದಗಿಸುತ್ತದೆ ಎಂದು ಸಚಿವಾಲಯ ಹೇಳಿದೆ. ಈ ಮೂಲಕ ಶಿಕ್ಷಣದಿಂದ ವಂಚಿತರಾಗುತ್ತಿರುವ ಮಕ್ಕಳನ್ನು ವಿವಿಧ ಮಾಧ್ಯಮಗಳ ಮೂಲಕ ಶಿಕ್ಷಣದ ಜಾಲಕ್ಕೆ ಸೇರ್ಪಡೆಗೊಳಿಸಲು ಸಾಧ್ಯವಾಗಲಿದೆ ಎಂದು ಸಚಿವಾಲಯ ವಿವರಿಸಿದೆ.

Post a Comment