ಕಸ್ತೂರಿ ಕಾಲೋನಿಯಲ್ಲಿ ಕವರ್ ಅಳವಡಿಸಿ ನಿವಾರಣೆ
ವಿಜಯಪುರ, ಮಾರ್ಚ್ 21: ನಗರದ ಕಸ್ತೂರಿ ಕಾಲೋನಿಯಲ್ಲಿ ಒಳಚರಂಡಿಗೆ ಕವರ್ ಅಳವಡಿಸಬೇಕೆಂದು ಮುಖ್ಯಮಂತ್ರಿಗಳ ಕಚೇರಿಯ ಕುಂದುಕೊರತೆ ವಿಭಾಗಕ್ಕೆ ಸಾರ್ವಜನಿಕರೊಬ್ಬರು ಮಾಡಿಕೊಂಡ ಮನವಿಗೆ ತ್ವರಿತ ಸ್ಪಂದನೆ ದೊರಕಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ಸಮಸ್ಯೆಯನ್ನು ಬಗೆಹರಿಸಿದ್ದಾರೆ.
ವಾರ್ಡ್ ನಂ. 19ರ ಕಸ್ತೂರಿ ಕಾಲೋನಿಯ ನಿವಾಸಿ ಮೊಹ್ಸಿನ್ ಇನಾಮ್ದಾರ್ ಎಂಬುವವರು ಒಳಚರಂಡಿಗೆ ಕವರ್ ಅಳವಡಿಸುವಂತೆ ಇಮೇಲ್ ಮೂಲಕ ಮುಖ್ಯಮಂತ್ರಿಗಳ ಕಚೇರಿಯ ಕುಂದುಕೊರತೆ ವಿಭಾಗಕ್ಕೆ ಮನವಿ ಸಲ್ಲಿಸಿದ್ದರು.
ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿದ ವಿಶೇಷ ಕರ್ತವ್ಯಾಧಿಕಾರಿಗಳ ಸೂಚನೆಯ ಮೇರೆಗೆ ಸ್ಥಳೀಯ ಅಧಿಕಾರಿಗಳು ತಕ್ಷಣ ಕ್ರಿಯಾಶೀಲರಾಗಿ, ಒಳಚರಂಡಿಗೆ ಕವರ್ ಅಳವಡಿಸುವ ಕಾರ್ಯವನ್ನು ಪೂರ್ಣಗೊಳಿಸಿದ್ದಾರೆ. ಇದರಿಂದಾಗಿ ಸ್ಥಳೀಯ ಜನತೆಗೆ ಒಳಚರಂಡಿ ತೆರೆದುಕೊಂಡು ಉಂಟಾಗುತ್ತಿದ್ದ ತೊಂದರೆ ನಿವಾರಣೆಯಾಗಿದೆ.
ಮುಖ್ಯಮಂತ್ರಿಗಳ ಕಚೇರಿಯ ಕುಂದುಕೊರತೆ ವಿಭಾಗವು ಸಾರ್ವಜನಿಕರ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಪರಿಹರಿಸಲು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ನಿದರ್ಶನವೂ ಅದಕ್ಕೆ ಮತ್ತೊಂದು ಉದಾಹರಣೆಯಾಗಿದೆ.

Post a Comment