Top News

ತುಮಕೂರು ಜಿಲ್ಲಾ ಪೊಲೀಸರ ಎಚ್ಚರಿಕೆ: ಸಾಮಾಜಿಕ ಜಾಲತಾಣಗಳಲ್ಲಿ ಮತೀಯ ದ್ವೇಷ, ಸುಳ್ಳು ಸುದ್ದಿ ಹರಡಿಸಿದರೆ ಕಾನೂನು ಕ್ರಮ

 



ತುಮಕೂರು, ಮಾರ್ಚ್ 23: ಸಾಮಾಜಿಕ ಜಾಲತಾಣಗಳ ಬಳಕೆದಾರರು ಮತೀಯ ದ್ವೇಷ, ವ್ಯಕ್ತಿ ನಿಂದನೆ, ಪ್ರಚೋದನಾತ್ಮಕ ಸಂದೇಶಗಳು, ಅವಹೇಳನಕಾರಿ ಪೋಸ್ಟ್ಗಳು ಹಾಗೂ ಸುಳ್ಳು ಸುದ್ದಿಗಳನ್ನು ಹರಡಬಾರದು ಎಂದು ತುಮಕೂರು ಜಿಲ್ಲಾ ಪೊಲೀಸ್ ವಿಭಾಗವು ಎಚ್ಚರಿಕೆ ನೀಡಿದೆ.


ಈ ಕುರಿತು ಪ್ರಕಟಣೆ ಹೊರಡಿಸಿರುವ ಜಿಲ್ಲಾ ಪೊಲೀಸ್ ವಿಭಾಗ, ಉಲ್ಲಂಘನೆ ಮಾಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದೆ.


ಸಾರ್ವಜನಿಕರಿಗೆ ನೀಡಿರುವ ಸೂಚನೆಯಲ್ಲಿ, ಜವಾಬ್ದಾರಿಯುತ ನಾಗರಿಕರಾಗಿ ವರ್ತಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ. ಡಿಜಿಟಲ್ ವೇದಿಕೆಗಳಲ್ಲಿ ಅಶ್ಲೀಲ, ಅಸಾಮಾಜಿಕ, ಸಂವಿಧಾನ ವಿರೋಧಿ ಅಥವಾ ಸಮುದಾಯಗಳ ನಡುವೆ ಉದ್ವಿಗ್ನತೆ ಉಂಟುಮಾಡುವಂಥ ಪೋಸ್ಟ್ಗಳು, ಕಾಮೆಂಟ್ಗಳು, ವೀಡಿಯೊಗಳನ್ನು ಹಂಚಿಕೊಳ್ಳದಂತೆ ಎಚ್ಚರಿಕೆ ನೀಡಲಾಗಿದೆ.


ಜಿಲ್ಲಾ ಪೊಲೀಸ್ ಇಲಾಖೆಯ ಈ ಪ್ರಕಟಣೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಚಾರಕ್ಕೆ ಬಂದಿದ್ದು, ಸೈಬರ್ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆಯಡಿ ಅಪರಾಧವೆಂದು ಪರಿಗಣಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.


ನಾಗರಿಕರು ಯಾವುದೇ ಸಂಶಯಾಸ್ಪದ ಮಾಹಿತಿಯನ್ನು ಹಂಚಿಕೊಳ್ಳುವ ಮುನ್ನ ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಿಕೊಳ್ಳಬೇಕು ಮತ್ತು ಕಾನೂನು ಸುವ್ಯವಸ್ಥೆಗೆ ಸಹಕರಿಸಬೇಕು ಎಂದು ಜಿಲ್ಲಾ ಪೊಲೀಸ್ ವಿಭಾಗ ಕೋರಿದೆ

Post a Comment

Previous Post Next Post