▪️ ನ್ಯಾಯಬೆಲೆ ಅಂಗಡಿ ಸಮಯ: ಬೆಳಿಗ್ಗೆ 6-00 ರಿಂದ ರಾತ್ರಿ 10-00 ಗಂಟೆವರೆಗೆ
▪️ ವಿತರಿಸಬೇಕಾದ ವಸ್ತುಗಳು: ಅನ್ನಭಾಗ್ಯ ಅಕ್ಕಿ + NFSA ಆಹಾರಧಾನ್ಯ
▪️ ಗಡುವು: ಜುಲೈ 2026 ಮಾಹೆಯ ಅಂತ್ಯ
▪️ ಆದೇಶ ಪತ್ರ ಸಂಖ್ಯೆ: CFS/PD/I/FG/11/2024-25
▪️ ದಿನಾಂಕ: 20-07-2026
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ
(ಸಂಗ್ರಹಣೆ ಮತ್ತು ವಿತರಣೆ)
📞 ದೂರವಾಣಿ: 22354857 | ✉️ E-mail: ddpd.fcs-ka@nic.in
ಪತ್ರ ಸಂಖ್ಯೆ: CFS/PD/I/FG/11/2024-25 | ದಿನಾಂಕ: 20-07-2026
ಅಪರ ನಿರ್ದೇಶಕರು-1
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಬೆಂಗಳೂರು.
ರಾಜ್ಯದ ಎಲ್ಲಾ ಜಂಟಿ/ಉಪ ನಿರ್ದೇಶಕರು,
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ.
ಮಾನ್ಯರೇ,
ವಿಷಯ: ನ್ಯಾಯಬೆಲೆ ಅಂಗಡಿಗಳ ಮುಖಾಂತರ ಪ್ರತಿ ದಿವಸ ಬೆಳಿಗ್ಗೆ 6-00 ಗಂಟೆಯಿಂದ ರಾತ್ರಿ 10-00 ಗಂಟೆಯವರೆಗೆ ಪಡಿತರ ಹಂಚಿಕೆ ಮಾಡುವ ಬಗ್ಗೆ.
ಉಲ್ಲೇಖಗಳು:
1) FCI letter No. RO KA-34.0020.0/12026-SLS-RO-KA, ದಿನಾಂಕ: 15-07-2026.
2) CFS/PD/IFG/11/2024-25, ದಿನಾಂಕ: 16-07-2026.
ವಿಷಯಕ್ಕೆ ಸಂಬಂಧಿಸಿದಂತೆ, ಈಗಾಗಲೇ ಎಲ್ಲಾ ಜಿಲ್ಲೆಗಳಿಗೆ ಜುಲೈ-2026 ರ ಮಾಹೆಯ ಅನ್ನಭಾಗ್ಯ ಅಕ್ಕಿ ಮತ್ತು ರಾಜ್ಯ NFSA ಅಕ್ಕಿ ಹಂಚಿಕೆಯನ್ನು ನೀಡಲಾಗಿದ್ದು, ಉಲ್ಲೇಖ(1)ರಲ್ಲಿ ಭಾರತ ಆಹಾರ ನಿಗಮದಿಂದ ಹಂಚಿಕೆ ಆದೇಶ ಸ್ವೀಕೃತವಾಗಿರುತ್ತದೆ. ಅದರಂತೆ, ಕೂಡಲೇ ಎತ್ತುವಳಿ ಮಾಡಿ ವಿತರಣೆಯನ್ನು ಪ್ರಾರಂಭಿಸುವಂತೆ ಹಾಗೂ ಎತ್ತುವಳಿ ಮತ್ತು ವಿತರಣೆಯಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ಉಲ್ಲೇಖ(2)ರ ಪತ್ರದಲ್ಲಿ ಅಗತ್ಯ ಸೂಚನೆ ನೀಡಲಾಗಿರುತ್ತದೆ.
ನ್ಯಾಯಬೆಲೆ ಅಂಗಡಿಗಳಲ್ಲಿ NFSA ಆಹಾರಧಾನ್ಯ ಮತ್ತು ಅನ್ನಭಾಗ್ಯ ಅಕ್ಕಿಯನ್ನು ಫಲಾನುಭವಿಗಳಿಗೆ ಒಟ್ಟಿಗೆ ವಿತರಿಸಬೇಕಾಗಿದ್ದು, ಭಾರತ ಆಹಾರ ನಿಗಮದಿಂದ OMSS (D) ಅಕ್ಕಿ ಎತ್ತುವಳಿ ಪ್ರಗತಿಯಲ್ಲಿರುವುದರಿಂದ, ನ್ಯಾಯಬೆಲೆ ಅಂಗಡಿಗಳಿಗೆ ಅಗತ್ಯ ಪ್ರಮಾಣದ ಆಹಾರಧಾನ್ಯ ಲಭ್ಯವಾಗುತ್ತಿದ್ದಂತೆಯೇ ವಿಳಂಬಕ್ಕೆ ಅವಕಾಶ ನೀಡದಂತೆ ವಿತರಣೆಯನ್ನು ಪ್ರಾರಂಭಿಸಬೇಕಾಗಿರುತ್ತದೆ.
ಆದರೆ, ರಾಜ್ಯದ ಹಲವು ಜಿಲ್ಲೆಗಳಲ್ಲಿ ನ್ಯಾಯಬೆಲೆ ಅಂಗಡಿಯವರು ಎಲ್ಲಾ ವರ್ಗಗಳ ಆಹಾರಧಾನ್ಯಗಳನ್ನು ಸಗಟು ಮಳಿಗೆಗಳಿಂದ ಪೂರ್ಣ ಪ್ರಮಾಣದಲ್ಲಿ ಎತ್ತುವಳಿ ಮಾಡಿಕೊಂಡಿದ್ದರೂ ಸಹ ಪಡಿತರ ವಿತರಣೆಯನ್ನು ತಕ್ಷಣ ಪ್ರಾರಂಭಿಸದೆ ವಿಳಂಬ ಮಾಡುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿರುತ್ತದೆ. ಈ ರೀತಿಯ ವಿಳಂಬ ನೀತಿಯನ್ನು ಅನುಸರಿಸದೇ ಎಲ್ಲಾ ನ್ಯಾಯಬೆಲೆ ಅಂಗಡಿಯವರು ತಮ್ಮ ದಾಸ್ತಾನು ಲಭ್ಯವಾದ ಕೂಡಲೇ ವಿತರಣೆಯನ್ನು ಕಡ್ಡಾಯವಾಗಿ ಪ್ರಾರಂಭಿಸುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.
ಮುಂದುವರೆದು, NFSA ಆಹಾರ ಧಾನ್ಯ ಮತ್ತು ಅನ್ನಭಾಗ್ಯ ಅಕ್ಕಿಯನ್ನು ಜುಲೈ 2026 ರ ಮಾಹೆಯ ಅಂತ್ಯದೊಳಗಾಗಿ ಪಡಿತರ ಚೀಟಿದಾರರಿಗೆ ವಿತರಿಸಿ, ವಿತರಣಾ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸಬೇಕಾಗಿರುವುದರಿಂದ ಎಲ್ಲಾ ನ್ಯಾಯಬೆಲೆ ಅಂಗಡಿಗಳು ಪ್ರತಿ ದಿವಸ ಕಡ್ಡಾಯವಾಗಿ ಬೆಳಿಗ್ಗೆ 6-00 ಗಂಟೆಯಿಂದ ರಾತ್ರಿ 10-00 ಗಂಟೆಯವರೆಗೆ ನ್ಯಾಯಬೆಲೆ ಅಂಗಡಿಯನ್ನು ತೆರೆದಿಟ್ಟು ಪಡಿತರ ವಿತರಣೆ ಮಾಡುವಂತೆ ಸೂಚಿಸಿದೆ.
ಎಲ್ಲಾ ಜಂಟಿ/ಉಪ ನಿರ್ದೇಶಕರು ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳು ಮೇಲ್ಕಂಡ ಕಾರ್ಯನಿರ್ವಹಣಾ ಅವಧಿಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕ್ರಮವಹಿಸಿ, ಯಾವುದೇ ದೂರುಗಳಿಗೆ ಆಸ್ಪದ ನೀಡದಂತೆ ಎಲ್ಲಾ ಅರ್ಹ ಪಡಿತರ ಚೀಟಿದಾರರಿಗೆ ಪಡಿತರ ಆಹಾರಧಾನ್ಯವನ್ನು ಸಂಪೂರ್ಣವಾಗಿ ಹಾಗೂ ಕಡ್ಡಾಯವಾಗಿ ವಿತರಿಸುವುದನ್ನು ಖಚಿತಪಡಿಸಿಕೊಳ್ಳುವಂತೆ ಸೂಚಿಸಿದೆ.
ಮೇಲಿನ ಸೂಚನೆಗಳನ್ನು ಎಲ್ಲಾ ನ್ಯಾಯಬೆಲೆ ಅಂಗಡಿಯವರು ಕಟ್ಟುನಿಟ್ಟಾಗಿ ಪಾಲಿಸುವ ನಿಟ್ಟಿನಲ್ಲಿ ಜಂಟಿ/ಉಪ ನಿರ್ದೇಶಕರು ಹಾಗೂ ಆಹಾರ ನಿರೀಕ್ಷಕರು ನಿಯಮಿತವಾಗಿ ಮೇಲ್ವಿಚಾರಣೆ ನಡೆಸಿ, ಉಲ್ಲಂಘನೆ ಕಂಡುಬಂದಲ್ಲಿ ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿ ವಿತರಕರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.
⚠️ ಸಾರ್ವಜನಿಕರ ಗಮನಕ್ಕೆ: ಪಡಿತರ ವಿತರಣೆಯಲ್ಲಿ ಯಾವುದೇ ಅವ್ಯವಹಾರ ಅಥವಾ ತೊಂದರೆ ಕಂಡುಬಂದಲ್ಲಿ ತಕ್ಷಣ ಇಲಾಖೆಗೆ ದೂರು ನೀಡಲು ಮನವಿ.
📧 ಇಮೇಲ್: ddpd.fcs-ka@nic.in
📞 ದೂರವಾಣಿ: 22354857
🏢 ಆಯುಕ್ತರ ಕಛೇರಿ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಬೆಂಗಳೂರು.
"ಸಕಾಲಿಕ ಪಡಿತರ ವಿತರಣೆ – ನಿಮ್ಮ ಹಕ್ಕು, ನಮ್ಮ ಜವಾಬ್ದಾರಿ"
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಕರ್ನಾಟಕ ಸರ್ಕಾರ
*ಆಹಾರ ಇಲಾಖೆಯ ಅಧಿಕೃತ ಆದೇಶ ಸಂಖ್ಯೆ: CFS/PD/I/FG/11/2024-25, ದಿನಾಂಕ: 20-07-2026*

Post a Comment