Top News

ರಾತ್ರಿ ಸುಲಿಗೆ, ಬೆಳಿಗ್ಗೆ ಬಂಧನ: ಮುರ್ಡೇಶ್ವರ ಪೊಲೀಸರ ಫುಲ್ ಸ್ಪೀಡ್ ಆಕ್ಷನ್

24 ಗಂಟೆಯೊಳಗೆ ಸುಲಿಗೆ ಆರೋಪಿ ಬಂಧನ: ಮುರ್ಡೇಶ್ವರ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ | ಕರ್ನಾಟಕ ನ್ಯೂಸ್ 24 ಲೈವ್
🚔 ಉತ್ತರ ಕನ್ನಡ ಜಿಲ್ಲಾ ಪೊಲೀಸ್ | ಕ್ಷಿಪ್ರ ಕಾರ್ಯಾಚರಣೆ
ವೇಗವಾದ ಮಾಹಿತಿ | ಜನರ ವಿಶ್ವಾಸ | ಕನ್ನಡದ ನಿಖರ ಸುದ್ದಿ
📅 ಜುಲೈ 22, 2026 | ಮುರ್ಡೇಶ್ವರ, ಉತ್ತರ ಕನ್ನಡ 🏛️ ಉತ್ತರ ಕನ್ನಡ ಜಿಲ್ಲಾ ಪೊಲೀಸ್ | ಪ್ರಕರಣ ಸಂಖ್ಯೆ: 85/2026
24 ಗಂಟೆಯೊಳಗೆ ಸುಲಿಗೆ ಆರೋಪಿ ಬಂಧನ: ಮುರ್ಡೇಶ್ವರ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ – 3 ಲಕ್ಷ ರೂ. ಮೌಲ್ಯದ ಸ್ವತ್ತು ವಶ
ಮುರ್ಡೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ನಡೆದ ಬಂಗಾರದ ಚೈನ್ ಸುಲಿಗೆ ಪ್ರಕರಣವನ್ನು ದಾಖಲಾದ 24 ಗಂಟೆಯೊಳಗೆ ಬಗ್ಗರಿಸಲಾಗಿದೆ. ಆರೋಪಿ ನಾಗರಾಜನನ್ನು ಬಂಧಿಸಿ, ಸುಮಾರು ₹3,00,000 ಮೌಲ್ಯದ ಚೈನ್, ಮೊಬೈಲ್ ಮತ್ತು ಮೋಟಾರ್ ಸೈಕಲ್ ವಶಪಡಿಸಿಕೊಳ್ಳಲಾಗಿದೆ.
📋 ಪ್ರಕರಣದ ಪ್ರಮುಖಾಂಶಗಳು:

▪️ ಸ್ಥಳ: ರಾಷ್ಟ್ರೀಯ ಹೆದ್ದಾರಿ-66, ದೊಡ್ಡ ಬಲಸೆ ಕ್ರಾಸ್
▪️ ಅಪರಾಧ: 22 ಗ್ರಾಂ ಬಂಗಾರದ ಚೈನ್ ಸುಲಿಗೆ
▪️ ಪ್ರಕರಣ ಸಂಖ್ಯೆ: 85/2026, ಕಲಂ 309(4) ಭಾರತೀಯ ನ್ಯಾಯ ಸಂಹಿತೆ-2023
▪️ ಬಂಧಿತ ಆರೋಪಿ: ನಾಗರಾಜ (ವಯಸ್ಸು 29), ಭಟ್ಕಳ ತಾಲೂಕು
▪️ ವಶಪಡಿಸಿದ ಸ್ವತ್ತು: ಚೈನ್ ಸರ + ಮೊಬೈಲ್ + ಮೋಟಾರ್ ಸೈಕಲ್ ≈ ₹3,00,000
▪️ ಸಮಯ: ಪ್ರಕರಣ ದಾಖಲಾದ 24 ಗಂಟೆಯ ಒಳಗೆ ಆರೋಪಿ ಬಂಧನ

📄 ಉತ್ತರ ಕನ್ನಡ ಜಿಲ್ಲಾ ಪೊಲೀಸ್ – ಪತ್ರಿಕಾ ಪ್ರಕಟಣೆ


ದಿನಾಂಕ: 20-07-2026 ರಂದು ರಾತ್ರಿ ಪಿರ್ಯಾದಿಯವರು ರಾಷ್ಟ್ರೀಯ ಹೆದ್ದಾರಿ-66ರ ಮುಖಾಂತರ ತಮ್ಮ ಮನೆಗೆ ಹೋಗುತ್ತಿರುವಾಗ ದೊಡ್ಡ ಬಲಸೆ ಕ್ರಾಸ್ ಹತ್ತಿರ ಯಾರೋ ಅಪರಿಚಿತ ಇಬ್ಬರು ವ್ಯಕ್ತಿಗಳು ಬೈಕನಲ್ಲಿ ಬಂದು ಪಿರ್ಯಾದಿಯ ಕುತ್ತಿಗೆಯಲ್ಲಿ ಇದ್ದ ಅಂದಾಜು 22 ಗ್ರಾಂ ತೂಕದ ಬಂಗಾರದ ಚೈನ್ ಸರವನ್ನು ಕಿತ್ತುಕೊಂಡು ಹೋದ ಬಗ್ಗೆ ಮುರ್ಡೇಶ್ವರ ಪೊಲೀಸ್ ಠಾಣಾ ಗುನ್ನಾ ನಂ: 85/2026 ಕಲಂ: 309(4) ಭಾರತೀಯ ನ್ಯಾಯ ಸಂಹಿತೆ-2023 ನೇದರಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಸದ್ರಿ ಪ್ರಕರಣದಲ್ಲಿ ಆರೋಪಿತರ ಪತ್ತೆಗೆ ಒಂದು ವಿಶೇಷ ತಂಡವನ್ನು ರಚನೆ ಮಾಡಿದ್ದು, ಮಾಹಿತಿಯ ಮೇರೆಗೆ ಆರೋಪಿತನಾದ ನಾಗರಾಜ ತಂದೆ ಗಣಪತಿ ಗೊಂಡ, ಪ್ರಾಯ:29 ವರ್ಷ, ವೃತ್ತಿ: ಶೋ ರೂಮ್ ನಲ್ಲಿ ಕೆಲಸ ಸಾ॥ ಹಲ್ಲಂದಿ, ಕಟಗಾರಕೊಪ್ಪ, ಭಟ್ಕಳ ತಾಲೂಕ ಇತನನ್ನು ಪ್ರಕರಣ ದಾಖಲಾದ 24 ಗಂಟೆಯ ಒಳಗಡೆ ಪತ್ತೆ ಹಚ್ಚಿ ವಶಕ್ಕೆ ಪಡೆದು, ದಸ್ತಗಿರಿ ಮಾಡಿ ಸುಲಿಗೆ ಮಾಡಿಕೊಂಡು ಹೋದ ಚೈನ್ ಸರ ಮತ್ತು ಕೃತ್ಯಕ್ಕೆ ಬಳಿಸಿದ ಮೊಬೈಲ ಹಾಗೂ ಮೊಟಾರ ಸೈಕಲ್ ಹೀಗೆ ಒಟ್ಟು ಅಂದಾಜು 3,00,000/- ರೂ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ.

ಸದರಿ ಆರೋಪಿತನನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದ್ದು ಇರುತ್ತದೆ. ಹಾಗೂ ಸದರಿ ಪ್ರಕರಣದಲ್ಲಿ ಇನ್ನೊಬ್ಬ ಆರೋಪಿತನ ಪತ್ತೆ ಕಾರ್ಯ ಮುಂದುವರೆದಿದೆ.

🏅 ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಅಭಿನಂದನೆಗಳು

ಮಾರ್ಗದರ್ಶನ: ಶ್ರೀ ದೀಪನ ಎಮ್.ಎನ್ ಐ.ಪಿ.ಎಸ್, ಪೊಲೀಸ್ ಅಧೀಕ್ಷಕರು, ಉತ್ತರ ಕನ್ನಡ ಜಿಲ್ಲೆ.
ಸಹ ಮಾರ್ಗದರ್ಶನ: ಶ್ರೀ ಕೃಷ್ಣಮೂರ್ತಿ. ಜಿ. ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಉ.ಕ ಜಿಲ್ಲೆ.
ಉಪಾಧೀಕ್ಷಕರು: ಶ್ರೀ ಗಿರೀಶ ಬಿ. ಪೊಲೀಸ್ ಉಪಾಧೀಕ್ಷಕರು, ಭಟ್ಕಳ ಉಪ ವಿಭಾಗ.


ನೇತೃತ್ವ: ಶ್ರೀ ಜಗಧೀಶ ಹಂಚನಾಳ ಸಿಪಿಐ, ಮುರ್ಡೇಶ್ವರ ವೃತ್ತ.
ತನಿಖಾ ತಂಡ: ಶ್ರೀ ಹಣಮಂತ ಬಿರಾದಾರ ಪೊಲೀಸ್ ಉಪ ನಿರೀಕ್ಷಕರು, ಮುರ್ಡೇಶ್ವರ ಪೊಲೀಸ್ ಠಾಣೆ.


ಸಿಬ್ಬಂದಿಗಳು:
ಸಿ.ಹೆಚ್.ಸಿ1188 ಸುಬ್ರಹ್ಮಣ್ಯ ನಾಯ್ಕ, ಸಿ.ಹೆಚ್.ಸಿ-716 ಅರುಣ ಪಿಂಟೋ, ಸಿಪಿಸಿ-1094 ಮಂಜುನಾಥ ಲಕ್ಷ್ಮಾಪುರ, ಸಿಪಿಸಿ-603 ಬಿಲಾಲಹ್ಮದ ಸಿದ್ದಾಪೂರ, ಸಿಪಿಸಿ-2037 ವಿಜಯ ನಾಯ್ಕ, ಸಿಪಿಸಿ-1143 ಮಹೇಶ ಸಮನಳ್ಳಿ, ಸಿಪಿಸಿ-767 ಸಿದ್ದಪ್ಪ ಕಾಂಬಳೆ, ಸಿಪಿಸಿ-842 ಸದಾಶಿವ ಕಟ್ಟಿಮನಿ ರವರು ಈ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದು ಇರುತ್ತದೆ.

🚔 ಸದರಿ ಪ್ರಕರಣದ ಆರೋಪಿ ಪತ್ತೆ ಮಾಡುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಎಲ್ಲಾ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಅಭಿನಂದಿಸಲಾಗಿದೆ

"ಕ್ಷಿಪ್ರ ಕಾರ್ಯಾಚರಣೆ – ಸಾರ್ವಜನಿಕರ ಸುರಕ್ಷತೆಗೆ ಪೊಲೀಸರ ಬದ್ಧತೆ"

DESHMAR CIRCLE – ಪೊಲೀಸ್ ಠಾಣಿ, ಮುರ್ಡೇಶ್ವರ

🏷️ ಪ್ರಮುಖ ಹ್ಯಾಶ್ಟ್ಯಾಗ್ಗಳು:
#karnatakanews24live #UttaraKannadaPolice #Murdeshwar #GoldSnatching #QuickAction #PoliceAlert #CrimeNews #KannadaNews #ಉತ್ತರಕನ್ನಡಪೊಲೀಸ್ #ಮುರ್ಡೇಶ್ವರ #ಸುಲಿಗೆಪ್ರಕರಣ #ಕ್ಷಿಪ್ರಕಾರ್ಯಾಚರಣೆ #ಕನ್ನಡಸುದ್ದಿ

*ಉತ್ತರ ಕನ್ನಡ ಜಿಲ್ಲಾ ಪೊಲೀಸ್ – ಪತ್ರಿಕಾ ಪ್ರಕಟಣೆ ಆಧಾರಿತ ವರದಿ. ಪ್ರಕರಣ ಸಂಖ್ಯೆ: 85/2026*

Post a Comment

Previous Post Next Post