Top News

PNG ಸಂಪರ್ಕ ಹೊಂದಿದವರಿಗೆ LPG ಸಿಲಿಂಡರ್‌ ನಿಷೇಧ? ಪೆಟ್ರೋಲಿಯಂ ಸಚಿವಾಲಯದ ಹೊಸ ನಿಯಮ


ಕೇಂದ್ರ ಪೆಟ್ರೋಲಿಯಂ ಸಚಿವಾಲಯವು ಗೃಹ ಬಳಕೆಯ ಎಲ್‌ಪಿಜಿ (LPG) ಸಿಲಿಂಡರ್‌ ಕುರಿತು ಮಹತ್ವದ ನಿಯಮ ಬದಲಾವಣೆ ಮಾಡಿದೆ. ಹೊಸ ನಿಯಮಗಳ ಪ್ರಕಾರ ಪೈಪ್‌ಡ್ ನ್ಯಾಚುರಲ್ ಗ್ಯಾಸ್ (PNG) ಸಂಪರ್ಕ ಹೊಂದಿರುವ ಗ್ರಾಹಕರು ಇನ್ನು ಮುಂದೆ ಗೃಹ ಬಳಕೆಯ LPG ಸಿಲಿಂಡರ್ ಪಡೆಯಲು ಅರ್ಹರಾಗುವುದಿಲ್ಲ.


ಸಚಿವಾಲಯದ ಈ ನಿರ್ಧಾರದಂತೆ ಈಗಾಗಲೇ PNG ಹಾಗೂ LPG ಎರಡನ್ನೂ ಹೊಂದಿರುವ ಗ್ರಾಹಕರು ತಮ್ಮ LPG ಸಂಪರ್ಕವನ್ನು ತ್ಯಜಿಸಬೇಕಾಗುತ್ತದೆ. ಜೊತೆಗೆ ಇಂತಹ ಗ್ರಾಹಕರಿಗೆ ಮುಂದಿನ ದಿನಗಳಲ್ಲಿ LPG ಸಿಲಿಂಡರ್‌ ರಿಫಿಲ್‌ಗಳನ್ನು ನೀಡುವುದನ್ನು ನಿಷೇಧಿಸಲಾಗುತ್ತದೆ ಎಂದು ತಿಳಿದುಬಂದಿದೆ.


ಈ ಬದಲಾವಣೆ Essential Commodities Act ಅಡಿಯಲ್ಲಿ ಜಾರಿಗೆ ತರಲಾಗುತ್ತಿದ್ದು, ಅಧಿಕೃತ ಗಜೆಟ್‌ನಲ್ಲಿ ಪ್ರಕಟವಾದ ನಂತರ ಈ ನಿಯಮವು ಅಧಿಕೃತವಾಗಿ ಜಾರಿಗೆ ಬರಲಿದೆ.
 ಸರ್ಕಾರದ ಉದ್ದೇಶ


ಸರ್ಕಾರದ ಪ್ರಕಾರ, PNG ಸಂಪರ್ಕ ಇರುವ ಮನೆಗಳಿಗೆ ಈಗಾಗಲೇ ನಿರಂತರ ಗ್ಯಾಸ್ ಸರಬರಾಜು ದೊರೆಯುತ್ತದೆ. ಆದ್ದರಿಂದ ಒಂದೇ ಮನೆಗೆ ಎರಡು ಗ್ಯಾಸ್ ವ್ಯವಸ್ಥೆಗಳನ್ನು ನೀಡುವುದರಿಂದ ಸಬ್ಸಿಡಿ ದುರುಪಯೋಗವಾಗುವ ಸಾಧ್ಯತೆ ಇರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.


ಗ್ರಾಹಕರಿಗೆ ಸೂಚನೆ


PNG ಮತ್ತು LPG ಎರಡನ್ನೂ ಹೊಂದಿರುವ ಗ್ರಾಹಕರು ಶೀಘ್ರದಲ್ಲೇ ಸಂಬಂಧಿತ ಗ್ಯಾಸ್ ಏಜೆನ್ಸಿಗಳ ಮೂಲಕ ತಮ್ಮ LPG ಸಂಪರ್ಕವನ್ನು ತ್ಯಜಿಸುವ ಪ್ರಕ್ರಿಯೆ ಪೂರ್ಣಗೊಳಿಸಬೇಕಾಗುತ್ತದೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಸಿಲಿಂಡರ್‌ ರಿಫಿಲ್‌ ಪಡೆಯಲು ಅವಕಾಶ ಇರುವುದಿಲ್ಲ.


ಈ ನಿಯಮ ಜಾರಿಗೆ ಬಂದ ನಂತರ ದೇಶದಾದ್ಯಂತ ಲಕ್ಷಾಂತರ ಗ್ರಾಹಕರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Post a Comment

Previous Post Next Post